Breaking News

ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಗೆಲುವು ಖಂಡಿತಾ- ಸಚಿವ ಆರ್. ವಿ ದೇಶಪಾಂಡೆ ವಿಶ್ವಾಸ

ಸಚಿವ ಸಂಪುಟ ವಿಸ್ತರಣೆ ಆದಷ್ಟು ಬೇಗನೇ ಆಗುತ್ತದೆ.
ಅರ್ಹತೆ ಇದ್ದವರಿಗೆ ಸಚಿವ ಸ್ಥಾನ ಸಿಗಬೇಕೆಂಬುದು ನಮ್ಮ ಆಶಯವೂ ಕೂಡ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಹೇಳಿದರು.ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,ಅರ್ಹತೆ ಇದ್ದಾಗ್ಯೂ ಸಚಿವ ಸ್ಥಾನ ಸಿಗದ್ದೆ ಇದಲ್ಲಿ ಅಸಮಾಧಾನಗಳು ಸಹಜ.ಆದ್ರೆ ಶಾಕರುಗಳು ಯಾವುದೇ ಅಸಮಾಧಾನ ಉಂಟಾಗದಂತೆ ಸಂಪುಟ ವಿಸ್ತರಣೆ ಆಗಲಿದೆ.ಹೈಕಮಾಂಡ್ ನಿರ್ಧಾರದಂತೆ ಸಚಿವ ಸಂಪುಟ ನಡೆಯುತ್ತದೆ ಎಂದರು.ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ 130 ಕೋಟಿಗೂ ಅಧಿಕ ಪಿಂಚಣಿ ಹಣ ಬಾಕಿ ವಿಚಾರಹಳೆಯ ಸಮಸ್ಯೆ. ನಾನು ಇದರ ಬಗ್ಗೆ ಚರ್ಚೆ ಮಾಡಿದ್ದೇನೆಧಾರವಾಡದಲ್ಲಿ ಸಭೆಯಲ್ಲಿಯೂ ಚರ್ಚೆಗಳನ್ನು ಮಾಡಲಾಗಿದೆ. ಯಾವ ಸಮಯದಲ್ಲಿ ಏನು ಕೆಲಸಗಳಾಗಬೇಕೋ ಅದು ಆಗಬೇಕು. ಅವು ಆಗದೇ ಇದ್ದರೆ ಏನೂ ಮಾಡಲಾಗುವುದಿಲ್ಲ.ರಾಜ್ಯ ಸರ್ಕಾರದಿಂದ ಪಾಲಿಕೆಗೆ ಬರಬೇಕಾದ ಪಿಂಚಣಿ ಹಣ ಬಾಕಿ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್ .ವಿ.ದೇಶಪಾಂಡೆ ಕೈಚೆಲ್ಲಿದ್ದಾರೆ.ಉಪ ಚುನಾವಣೆಯಲ್ಲಿಖಂಡಿತವಾಗಿ ಮೂವರು ಕ್ಷೇತ್ರದಲ್ಲಿ‌ನಾವು ಗೆಲ್ಲುತ್ತೇವೆ.ಉಪಚುನಾವಣೆಯಲ್ಲಿ ಗೆಲುವು ನಮ್ಮದೇ ಆಗಲಿದೆ.ಜಮಖಂಡಿಯಲ್ಲಿ ಖಂಡಿತವಾಗಿಯೂ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವು ಆಗಲಿದೆ. ಬಳ್ಳಾರಿ ಮತ್ತು ಶಿವಮೊಗ್ಗದಲ್ಲಿಯೂ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಧಾರವಾಡ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಯಾವುದೇ ರೀತಿ ಧಾರವಾಡ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡುತ್ತಿಲ್ಲ.ಕಾರವಾರ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿರುವುದು ನಿಜ.ಆದ್ರೆ ಧಾರವಾಡ ಜಿಲ್ಲೆಗೂ ಅಷ್ಟೇ ಪ್ರಾಶಸ್ತ್ಯ ನೀಡುತ್ತೇನೆ.ಕೆಲವು ದಿನಗಳ ಹಿಂದೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ ಎಂದರು.

Share News

About Shaikh BIG TV NEWS, Hubballi

Check Also

ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್..?

ಧಾರವಾಡದಲ್ಲಿ ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್…? 3 ತಿಂಗಳಿಂದ ಯುವತಿಯರಿಗೆ ಕಿರುಕುಳ ಆರೋಪ — ಸಿಸಿಟಿವಿಯಲ್ಲಿ ಬೆತ್ತಲೆ …

Leave a Reply

Your email address will not be published. Required fields are marked *