Breaking News

ವಿಕಾಸ್​ ಬಹ್ಲ್​ ಮಾಜಿ ಪತ್ನಿ, ಕಂಗನಾ ನಡುವೆ ಟಾಕ್ ವಾರ್

ದೆಹಲಿ: ಮಾಜಿ ಪತಿ, ನಿರ್ದೇಶಕ ವಿಕಾಸ್ ಬಹ್ಲ್ ನೆರವಿಗೆ ಬಂದಿದ್ದ ರೀಚಾ ದುಬೆ ವಿರುದ್ಧ ನಟಿ ಕಂಗನಾ ರಾಣಾವತ್ ಹರಿಹಾಯ್ದಿದ್ದಾರೆ. ಕ್ವಿನ್ ಚಿತ್ರದ ನಿರ್ದೇಶಕ ವಿಕಾಸ್ ಬಹ್ಲ್ ನನಗೆ ಕಿರುಕುಳ ನೀಡಿದ್ದ ಅಂತ ಕಂಗನಾ ಆರೋಪಿಸಿದ್ದರು. ಆದ್ರೆ, ಇದಕ್ಕೆ ವಿಕಾಸ್​ರ ಮಾಜಿ ಪತ್ನಿ ರಿಚಾ ಟ್ವಿಟರ್​ನಲ್ಲಿ ಕಂಗನಾ ವಿರುದ್ಧ ಹರಿಹಾಯ್ದಿದ್ದರು. ನಿಮಗೆ ಒಬ್ಬ ವ್ಯಕ್ತಿ ಜೊತೆ ಅಸೌಕರ್ಯವೆನಿಸಿದರೆ ಅಥವಾ ಆತ ನಿಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ರೆ, ಆತನೊಂದಿಗೆ ಉತ್ತಮ ಸಂಬಂಧ ಹೊಂದಲು ಹೇಗೆ ಸಾಧ್ಯ. ಅದ್ರಲ್ಲೂ ಕಂಗನಾರಂಥ ಧೈರ್ಯವಂತೆ ವಿಕಾಸ್ ಅಸಭ್ಯವಾಗಿ ವರ್ತಿಸಿದಾಗ ಅದನ್ನ ಯಾಕೆ ವಿರೋಧಿಸಲಿಲ್ಲ ಅಂತ ಪ್ರಶ್ನಿಸಿದ್ರು. ಅಲ್ಲದೆ, ಇಂಥ ಶೋಷಣೆಗಳನ್ನ ಒಬ್ಬ ಹೆಣ್ಣು ಹೇಳಿಕೊಳ್ಳುವುದು ತುಂಬಾ ಕಷ್ಟಕರ ಕೆಲಸ. ಅದಕ್ಕೆ ಅಗೌರವ ತರಬೇಡಿ ಅಂತ ಟಾಂಗ್ ಕೊಟ್ಟಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಗನಾ, ವಿಕಾಸ್​ನ ಪತ್ನಿಯಾಗಿ ಆಕೆಯ ಅನುಭವ ಬೇರೆಯೇ ರೀತಿ ಇರುತ್ತೆ. ಅದನ್ನ ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದ್ರೆ, ಇದು ಮಹಿಳೆಯರು ತಮ್ಮ ತಮ್ಮಲ್ಲೇ ಕಿತ್ತಾಡುವ ಸಮಯವಲ್ಲ. ಒಬ್ಬರಿಗೊಬ್ಬರು ನೆರವು ನೀಡಬೇಕು. ಅವರ ಮಾಜಿ ಪತ್ನಿಯಾಗಿ ಆಕೆಗೆ ಆತನೊಂದಿಗೆ ಇರುವ ಅನುಭವ ಬೇರೆಯದ್ದೇ ರೀತಿಯಲ್ಲಿರುತ್ತೆ. ಅವರೇನೂ ಸುಮ್ಮನೆ ಬೇರೆಯಾಗಿಲ್ಲ. ನಾವು ಫ್ರೆಂಡ್ಲಿ ಆಗಿಯೇ ಬೇರೆಯಾಗಿದ್ದೇವೆ. ನಾವು ಕುಟುಂಬ ಅಂತೆಲ್ಲಾ ಹೇಳಿ ನಾಟಕವಾಡೋದನ್ನ ನಿಲ್ಲಿಸಬೇಕು. ಯಾರೂ ಇದ್ದಕ್ಕಿದ್ದಂತೆ ಒಂದು ದಿನ ಬೆಳಗ್ಗೆ ಎದ್ದು ದೇವರಂಥ ಮನುಷ್ಯನಿಗೆ ಡಿವೋರ್ಸ್ ಕೊಡುವುದಿಲ್ಲ. ದಯವಿಟ್ಟು ನಮಗೆ ನಮ್ಮ ಕೆಲಸದ ಪರಿಸರವನ್ನ ಮತ್ತಷ್ಟು ಭದ್ರಗೊಳಿಸಿಕೊಳ್ಳಲು ನೆರವು ನೀಡಿ. ಇಂಥ ವ್ಯಕ್ತಿಗಳು ಇನ್ನಷ್ಟು ಜನರ ಜೀವನ ಹಾಳು ಮಾಡುವುದನ್ನ ತಪ್ಪಿಸಿ ಅಂತ ಕಂಗನಾ ತಿರುಗೇಟು ನೀಡಿದ್ದಾರೆ.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *