ಮುಂಬೈ: ತನುಶ್ರೀ ದತ್ತಾ ಆರೋಪಿಸಿರುವ ಒಂದೇ ಒಂದು ಲೈಂಗಿಕ ದೌರ್ಜನ್ಯದ ಆರೋಪ ಇಂದು ಬಾಲಿವುಡ್ ಚಿತ್ರರಂಗವನ್ನೇ ತಲೆಕೆಳಗೆ ಮಾಡಿದೆ. ಕೆಲ ದಿನಗಳ ಹಿಂದೆ ಹಿರಿಯ ನಟ, ನಿರ್ದೇಶಕ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಲೈಂಗಿಕ ದೌರ್ಜನ್ಯ ಕೇಸ್ನ್ನು ಮುಂಬೈನ ಒಶೀವರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು. ಐಪಿಸಿ ಸೆಕ್ಷನ್ 354, 509 ಅಡಿ ಪೊಲೀಸರು ಕೇಸ್ ಕೂಡ ದಾಖಲಿಸಿಕೊಂಡಿದ್ದಾರೆ. ಇದರ ಎಫ್ಐಆರ್ ಕಾಪಿ ಹಾಗೂ ತಮ್ಮ ಹೇಳಿಕೆಯ ಪ್ರತಿಗಳನ್ನ ಸಿನಿಮಾ ಮತ್ತು ಟಿವಿ ಕಲಾವಿದರ ಅಸೋಷಿಯೇಶನ್ (CINTAA)ಗೆ ಕಳಿಸಿರುವ ತನುಶ್ರೀ ದತ್ತಾ ಕೇಸ್ ರೀಓಪನ್ ಮಾಡಿ ತನಿಖೆ ನಡೆಸಿ ಅಂತ ಕೋರಿದ್ದಾರೆ.
ನಾನಾ ಪಾಟೇಕರ್ಗೆ ನಾರ್ಕೊ ಅನಾಲಿಸಿಸ್ ಟೆಸ್ಟ್ ಮಾಡಿ’
ಇದರ ಬೆನ್ನಲ್ಲೇ ತನುಶ್ರೀ, ಮುಂಬೈ ಪೊಲೀಸರಿಗೆ ಮತ್ತೊಂದು ನೋಟಿಸ್ ನೀಡಿದ್ದಾರೆ. ತಾವು ಮಾಡಿರುವ ಆರೋಪಗಳೆಲ್ಲಾ ಸುಳ್ಳು ಅಂತ ನಾನಾ ಪಾಟೇಕರ್ ಹೇಳ್ತಿದ್ದಾರೆ. ಅಲ್ಲದೆ, ಅವರು ಸಾಕ್ಷಿ ನಾಶ ಮಾಡುವ ಸಾಧ್ಯತೆಯೂ ಇದೆ. ಅವರ ಮೇಲೆ ಒತ್ತಡ ಹೇರಲೂಬಹುದು. ಹೀಗಾಗಿ ನಾನಾ ಪಾಟೇಕರ್ರನ್ನ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿ. ಅವರನ್ನ ನಾರ್ಕೊ ಅನಾಲಿಸಿಸ್, ಬ್ರೈನ್ ಮ್ಯಾಪಿಂಗ್ ಟೆಸ್ಟ್ ಮಾಡಿ ಅಂತ ತನುಶ್ರೀ ದತ್ತಾ ಪೊಲೀಸರಿಗೆ ಕೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





