Breaking News

ಮಧ್ಯವರ್ತಿಗಳದ್ದೇ ಎಪಿಎಂಸಿಯಲ್ಲಿ ಹಾವಳಿ.. ರೇಟ್ ಇಲ್ಲದೇ ಬೆಳೆದ ರೈತರಿಗೇ ಕಣ್ಣೀರು ತರಿಸುತ್ತದೆ ಈರುಳ್ಳಿ..

ಬೇಸಾಯ ಅಂದ್ರೇನೇ ನೀ ಸಾಯಾ, ನಾ ಸಾಯಾ ಅನ್ನೋವಂತಾಗ್ಬಿಟ್ಟಿದೆ. ತಿಂಗಳಾನುಗಟ್ಟಲೇ ಹಗಲು ರಾತ್ರಿ ಅನ್ನದೇ ರೈತರು ಈರುಳ್ಳಿ ಬೆಳೆಯನ್ನ ಬೆಳೆದಿದ್ರು. ಅದಕ್ಕಾಗಿ ಹಾಕಿದ ಶ್ರಮ ಅಷ್ಟಿಷ್ಟಲ್ಲ. ರೈತರ ಬೆಳೆ ಬರೋಕು ಮೊದಲು ಮಾರ್ಕೆಟ್ ನಲ್ಲಿ ಒಳ್ಳೇ ಬೆಲೆ ಏನೋ ಇರುತ್ತೆ. ಆದ್ರೇ, ಮಾರ್ಕೆಟ್ ಗೆ ಯಾವಾಗ ಈರುಳ್ಳಿ ಬಂತೋ ಈಗ ಬೆಲೆ ಸಂಪೂರ್ಣ ನೆಲಕಚ್ಚಿದೆ. ಇದರಿಂದ ಅನ್ನದಾತನ ಕಣ್ಣಲ್ಲಿ ನೀರು ತರಿಸಿದೆ ಈರುಳ್ಳಿ.ನಮ್ಮ ಉಳ್ಳಾಗಡ್ಡಿಯನ್ನೇ ಕ್ವಿಂಟಲ್‌ಗೆ 500 ರೂ. ಅಂತೆ ಖರೀದಿಸಿ ನಮ್ಮ ಕಣ್ಣು ಎದುರೇ 1500 ರೂ. ಚಿಲ್ಲೆರೆ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಾರೆ. ವ್ಯಾಪಾರಿಗಳು ಕೂಗಿದ ಬೆಲೆಗೆ ಉಳ್ಳಾಗಡ್ಡಿ ಕೊಟ್ಟು ಹೋಗುವ ಪರಸ್ಥಿತಿ ಬಂದಿದೆ. ರೈತರ ಮಾಲು ಮಾರ್ಕೇಟ್‌ಗೆ ಬಂದ್ರ ಸಾಕು ಧೀಡಿರ್‌ ರೇಟ್‌ ಕಡಿಮೆಯಾಗುತ್ತೇ ನೋಡ್ರಿ ಅಂತ ರೈತರು ತಮ್ಮ ನೋವು ತೋಡಿಕೊಳ್ತಿದಾರೆ. ಮಾರ್ಕೆಟ್ ಬಂದ ರೈತರ ಮುಖ ನೋಡೋಕಾಗಲ್ಲ ಕಣ್ರೀ.. 
ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಯಲ್ಲಿ ಈರುಳ್ಳಿ ಮಾರಾಟ ಮಾಡಲು ಬರೋ ಈರುಳ್ಳಿ ಬೆಳೆದ ರೈತರು ಹತಾಷೆಗೊಂಡಿದಾರೆ. ಅದಕ್ಕೆ ಕಾರಣ ಈರುಳ್ಳಿ ಬೆಲೆ ನೆಲಚಕ್ಕಿರೋದು. ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಈರುಳ್ಳಿ ಆವಕ ಹೆಚ್ಚುತ್ತಿದ್ದಂತೆ ಬೆಲೆ ಕುಸಿಯುತ್ತಲೇ ಹೋಗುತ್ತಿದೆ. ಬೆಳಗಾವಿ, ವಿಜಯಪುರ, ಗದಗ, ಬಾಗಲಕೋಟೆ ಜಿಲ್ಲೆಯಿಂದ ಬಂದ ನೂರಾರು ಜನರು ಬೆಲೆ ಏರುತ್ತದೆ ಎಂಬ ನೀರಿಕ್ಷೆಯಲ್ಲಿ ಮಾರುಕಟ್ಟೆಯಲ್ಲಿ ದಿನ ಕಳೆಯುತ್ತಿದ್ದಾರೆ. ಕೆಲವು ರೈತರಿಗಂತೂ ಈರುಳ್ಳಿ ಕಣ್ಣೀರು ತರಿಸುತ್ತಿದೆ. 
ಜವಾರಿ ಈರುಳ್ಳಿಗೆ ಕ್ವಿಂಟಲ್‌ಗೆ 200 ರಿಂದ 1000 ರೂ ವೆರೆಗೂ ಮಾರಾಟವಾದರೆ, ಪುಣೆ ಮತ್ತು ಬೀಳಗಿ ಈರುಳ್ಳಿ 300 ರಿಂದ 1400ರೂ. ವೆರಗೆ ಮಾರಾಟವಾಗುತ್ತಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಮಾರಾಟ ಸಂಪೂರ್ಣ ವ್ಯಾಪಾರಸ್ಥರ ಕೈಯಲ್ಲಿದೆ. ಅವರು ಹರಾಜಿನಲ್ಲಿ ಎಷ್ಟಕ್ಕೆ ಕೂಗುತ್ತಾರೋ ಅಷ್ಟಕ್ಕೆ ಕೊಟ್ಟು ಹೋಗಬೇಕು. 200 ರೂ.ದಿಂದ 700 ರೂ. ವರೆಗೆ ಈರುಳ್ಳಿ ಖರೀದಿಸುತ್ತಾರೆ. ಕೆಲವೇ ಕೆಲ ಚೀಲವಿರುವ ಲಾಟ್‌ ಮಾತ್ರ 1400-1500 ರೂ. ಖರೀದಿಸುತ್ತಾರೆ. ಇದು ಪ್ರತಿದಿನ ಮಾರುಕಟ್ಟೆ ದರದಲ್ಲಿ ಕೊನೆಯ ದರ 1500 ದಾಖಲಾಗುವುದರಿಂದ ರೈತರು ಉತ್ತಮ ಬೆಲೆ ಇದೆ ಎಂದು ಮಾರುಕಟ್ಟೆಗೆ ಈರುಳ್ಳಿ ತರುತ್ತಿದ್ದಾರೆ. ಆದ್ರೇ, ಮಾರ್ಕೆಟ್ ಗೆ ಬಂದ್ರೇ ಇರೋ ಸ್ಥಿತಿಯೇ ಬೇರೆ.ಮಾರುಕಟ್ಟೆಗೆ ಬಂದರೆ ಅಲ್ಲಿನ ಚಿತ್ರಣವೇ ಬದಲಿರುತ್ತದೆ. ಎಷ್ಟೇ ಉತ್ತಮ ಗುಣಮಟ್ಟದ ಈರುಳ್ಳಿಯೂ 850 ರೂ. ಬೆಲೆ ದಾಟುವುದಿಲ್ಲ. ಇಷ್ಟೇಕೆ ಎಂದು ಕೇಳಿದರೆ, ಈರುಳ್ಳಿ ಖರೀದಿದಾರರೇ ಇಲ್ಲ. ಹೀಗಾಗಿ ಮಾರುಕಟ್ಟೆ ದರ ಮೇಲೆಳುತ್ತಿಲ್ಲ. ನಿಮಗೆ ಬೆಲೆ ಹೊಂದದಿದ್ದರೇ ಮಾರಾಟ ಮಾಡಬೇಡ ಬಿಡಿ ಎನ್ನುತ್ತಾರೆ ಕೆಲವರು. ಆದರೆ, ಮಾರುಕಟ್ಟೆಗೆ ತೆಗೆದುಕೊಂಡ ಹೋದ ಈರುಳ್ಳಿಯನ್ನು ವಾಪಸ್‌ ತಾರದಾಗದೇ ಹೇಳಿದ ರೇಟ್‌ಗೆ ಕೊಟ್ಟು ಹೋಗುವ ಸ್ಥಿತಿ ನಮ್ಮದಾಗಿದೆ ಎನ್ನುತ್ತಾರೆ ಮಾರುಕಟ್ಟೆಗೆ ಈರುಳ್ಳಿ ತಂದ ರೈತರು. ಈರುಳ್ಳಿ ಬೆಳೆಯಲು ಬೀಜ, ಗೊಬ್ಬರ ಮತ್ತು ಕಟಾವಿಗೆ, ವಾಹನ ಬಾಡಿಗೆ ಖರ್ಚು ಸಹ ಈರುಳ್ಳಿ ಮಾರಿದರೂ ಬರುವುದಿಲ್ಲ. ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆ ಈರುಳ್ಳಿ ಮಾರಾಟಕ್ಕೆ ಹೆಸರುವಾಸಿಯಾಗಿರುವುದರಿಂದ ಉತ್ತರ ಕರ್ನಾಟಕದ ಅತೀ ಹೆಚ್ಚು ರೈತರು ಇಲ್ಲಿಗೆ ಬರುತ್ತಿದ್ದಾರೆ. ಆದರೆ, ಇಲ್ಲಿಯೂ ಸೂಕ್ತ ಬೆಲೆ ಸಿಗದೇ ರೈತ ಕಂಗಾಲಾಗಿದ್ದಾನೆ.
ಈ ಬಾರಿ ಮುಂಗಾರು ಉತ್ತಮ ಮಳೆಯಾಗಿದ್ದರಿಂದ ಈರುಳ್ಳಿ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದೆ. ನಿತ್ಯ ಮಾರುಕಟ್ಟೆಗೆ 100 ಕ್ಕೂ ಹೆಚ್ಚು ಟ್ರ್ಯಾಕ್ಟ್ರ್‌ಗಳು ಈರುಳ್ಳಿ ಹೊತ್ತುಕೊಂಡು ಬರುತ್ತಿವೆ. ಇನ್ನು ಸಣ್ಣ ಪ್ರಮಾಣ ಕೆಂಪು ಈರುಳ್ಳಿಗೆ ಮಲೇಷಿಯಾದಲ್ಲಿ ಬೇಡಿಕೆ ಹೆಚ್ಚಿರುವುದರಿಂದ ವ್ಯಾಪಾರಸ್ಥರು ಕೆಂಪು ಈರುಳ್ಳಿ ಖರೀದಿಸಲು ಮುಗಿಬೀಳುತ್ತಿದ್ದಾರೆ. ಆದ್ರೇ, ಬೇರೆ ಈರುಳ್ಳಿ ಬೆಳೆದವರ ಕಣ್ಣಲ್ಲಿ ಇನ್ನೂ ನೀರು ನಿಲ್ತಿಲ್ಲ.
ಬಿಗ್   ಟಿವಿ  ನ್ಯೂಸ್    ಎಂ   ಶೇಖ್  ಹುಬ್ಬಳ್ಳಿ
Share News

About Shaikh BIG TV NEWS, Hubballi

Check Also

ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಮಹಿಳೆ ಬಲಿ..! ಕುತ್ತಿಗೆಗೆ ಸಿಲುಕಿದ ದಾರ, ಲ್ಯಾಬ್ ಟೆಕ್ನಿಷಿಯನ್ ದಾರುಣ ಸಾವು..!

News Audio ಸ್ಕೂಟಿಯಲ್ಲಿ ಲ್ಯಾಬ್‌ಗೆ ತೆರಳುತ್ತಿದ್ದಾಗ ಅವಘಡ | ರಸ್ತೆಯಲ್ಲೇ ತೀವ್ರ ರಕ್ತಸ್ರಾವ, ಮಾಂಜಾ ದಾರದ ಅಪಾಯಕ್ಕೆ ಮತ್ತೊಂದು ಜೀವ …

Leave a Reply

Your email address will not be published. Required fields are marked *