Breaking News

ಅಮೆರಿಕಾದಲ್ಲಿರುವ ಭಾರತೀಯರಿಗೆ ಮತ್ತೆ ಹೆಚ್​1ಬಿ ಸಂಕಷ್ಟ.?

ನವದೆಹಲಿ: ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಅಲ್ಲಿರುವ ಭಾರತೀಯ ನಿವಾಸಿಗಳಿಗೆ ಢವಢವ ಶುರುವಾಗಿದೆ. ಇದಕ್ಕೆ ಕಾರಣ ಟ್ರಂಪ್ ಸರ್ಕಾರ, ಹೆಚ್​1ಬಿ ವೀಸಾ ನಿಯಮದಲ್ಲಿ ಬದಲಾವಣೆ ತರಲು ಮುಂದಾಗಿರೋದು. ಇಷ್ಟು ದಿನಗಳ ಕಾಲ ವೀಸಾ ನಿಯಮದಲ್ಲಿ ಬದಲಾವಣೆ ಮಾಡ್ತೀವಿ ಅಂತ ಹೇಳಿದ್ರೂ, ಹೆಚ್ಚಿನ ಬದಲಾವಣೆ ಆಗಿರಲಿಲ್ಲ.ಆದ್ರೀಗ ಹೆಚ್​1ಬಿ ವೀಸಾ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲು ಕೆಲಸ ಶುರು ಮಾಡಿದೆ. ಹೀಗಾಗಿ ನಾವು ಕೂಡ ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ಅಮೆರಿಕನ್ ಕಾಂಗ್ರೆಸ್​ ಜೊತೆ ನಿಕಟ ಸಂಪರ್ಕ ಹೊಂದಿದ್ದೇವೆ ಅಂತ ಭಾರತ ಹೇಳಿದೆ. ಈ ಬಗ್ಗೆ ವಿದೇಶಾಂಗ ಇಲಾಖೆ ರವೀಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಜನವರಿಯಿಂದ ಹೆಚ್​1ಬಿ ವೀಸಾಕ್ಕೆ ಸಂಬಂಧಿಸಿದಂತೆ ಉದ್ಯೋಗದ ವ್ಯಾಖ್ಯಾನ ಹಾಗೂ ವಿಶೇಷ ಉದ್ಯೋಗ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲು ಚಿಂತನೆ ನಡೆಸಿದ್ದೇವೆ ಅಂತ ಅಮೆರಿಕಾ ಸರ್ಕಾರ ಹೇಳಿತ್ತು. ಇದರಿಂದಾಗಿ ಅಮೆರಿಕಾದಲ್ಲಿರುವ ಭಾರತೀಯ ಐಟಿ ನೌಕರರಿಗೆ ಹೊಡೆತ ಬೀಳುವ ಸಾಧ್ಯತೆ ಇದೆ.ಇದು ನಮಗೆ ಬಹಳ ಮುಖ್ಯವಾದ ವಿಷಯವಾಗಿದ್ದು, ಸಮಯ ಮತ್ತು ಮತ್ತೊಮ್ಮೆ ವಿವಿಧ ಹಂತಗಳಲ್ಲಿ, ಈ ವಿಷಯವನ್ನು ಅಮೆರಿಕಾದ ಜೊತೆ ಸಮಾಲೋಚನೆ ನಡೆಸಿದ್ದೇವೆ. ಇತ್ತೀಚೆಗೆ, ಟು ಪ್ಲಸ್ ಟು ಮಾತುಕತೆಗಳಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ..

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *