Breaking News

ಕಳೆದ ಒಂದೇ ವರ್ಷದಲ್ಲಿ ಭಾರತದಲ್ಲಿ 7,300ಕ್ಕೂ ಹೊಸ.. ಕೋಟ್ಯಧೀಶರ ಸೃಷ್ಟಿ..

ನವದೆಹಲಿ: ದೇಶದಲ್ಲಿ ಅರ್ಥಿಕ ಅಸಮಾನತೆ ಇದೆ ಅನ್ನೋ ಕೂಗಿನ ಮಧ್ಯೆಯೂ ಒಂದೇ ವರ್ಷದಲ್ಲಿ ಬರೋಬ್ಬರಿ 7300ಕ್ಕೂ ಹೆಚ್ಚು ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ ಅಂತಾ ಇನ್ವೆಸ್ಟ್​ಮೆಂಟ್​ ಬ್ಯಾಕಿಂಗ್ ಕಂಪೆನಿ Credit Suisse ವರದಿ ಮಾಡಿದೆ. ವರದಿ ಪ್ರಕಾರ, 12 ತಿಂಗಳ ಅವಧಿಯಲ್ಲಿ ಒಟ್ಟು 7,300ಕ್ಕೂ ಹೆಚ್ಚು ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ. ಈ ಮೂಲಕ ದೇಶದಲ್ಲಿ 3.43 ಲಕ್ಷ ಮಂದಿ ಕೋಟ್ಯಾಧಿಪತಿಗಳು ಇದ್ದು, ಅವರ ಒಟ್ಟ ಮೌಲ್ಯ 6 ಟ್ರಿಲಿಯನ್ ಅಮೆರಿಕನ್ ಡಾಲರ್ (₹ 44,18,70,00,00,00,000.06) ಆಗಿದೆ. ವಿಶೇಷ ಅಂದ್ರೆ 2018 ಅವಧಿಯಲ್ಲಿ ಮಹಿಳೆಯರೇ ಹೆಚ್ಚು ಶ್ರೀಮಂತರಾಗಿದ್ದಾರಂತೆ. ಶೇಕಡಾ 18.6 ರಷ್ಟು ಮಹಿಳೆಯರು ದೇಶದಲ್ಲಿ ಕೋಟ್ಯಾಧಿಪತಿಗಳಾಗಿದ್ದಾರೆ. Credit Suisse ನ 2018ರ ಗ್ಲೋಬಲ್ ವೆಲ್ತ್​ ರಿಪೋರ್ಟ್​ನ ಪ್ರಕಾರ, 50 ಮಿಲಿಯನ್ ಡಾಲರ್ ಹೊಂದಿರುವ ಕೋಟ್ಯಾಧಿಪತಿಗಳು 3400 ಮಂದಿ ಇದ್ರೆ, 100 ಮಿಲಿಯನ್ ಹೊಂದಿರೋ ಕೋಟ್ಯಾಧಿಪತಿಗಳು 1500 ಮಂದಿ ಇದ್ದಾರೆ ಎಂದು ಹೇಳಿದೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *