ಹುಬ್ಬಳ್ಳಿ: ಬಡವರಿಗೆ ಭೂಮಿ ಕೊಟ್ಟವರು ಕಾಂಗ್ರೆಸ್‌ನವರು. ಉಳುವವನೆ ಭೂಮಿ ಒಡೆಯ ಕಾರ್ಯಕ್ರಮ ಮಾಡಿದ್ದೇ ಕಾಂಗ್ರೆಸ್, ಬಿಜೆಪಿ ಅವಾಗ ಸಾಹುಕಾರ ಪರವಾಗಿ ಕಾರ್ಯಕ್ರಮಕ್ಕೆ ವಿರೋಧ ಮಾಡಿದ್ದರು ಎಂದು ಹುಬ್ಬಳ್ಳಿಯಲ್ಲಿ ಸಚಿವ ಸಂತೋಷ್ ಲಾಡ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಬಾಣಂತಿಯರ ಸಾವು ವಿಚಾರಕ್ಕೆ ಸಂಬಂಧ ಪಟ್ಟ ಸಚಿವರು ಉತ್ತರ ಕೊಟ್ಟಿದ್ದಾರೆ. ಅದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ ಎಂದರು.
ವಕ್ಸ್ ವಿರೋಧಿಸಿ ಬಿಜೆಪಿಯ ಹೋರಾಟದಲ್ಲಿ ಬಣಗಳ ವಿಚಾರವಾಗಿ ಮಾತನಾಡಿದ ಅವರು, ವಕ್ಸ್ ವಿಚಾರದಲ್ಲಿ ಎಲ್ಲ ಸರ್ಕಾರಗಳು ನೋಟಿಸ್ ಕೊಟ್ಟಿವೆ. 4,567 ಬಿಜೆಪಿ ಕಾಲದಲ್ಲಿ ಮೂಟೆಷಮ್ ಚೇಂಜ್ ಆಗಿವೆ. ಇದರ ಬಗ್ಗೆ ಬಿಜೆಪಿಯವರು ಚರ್ಚೆ ಮಾಡ್ತಾರಾ..? ಅವರ ಕಾಲದಲ್ಲಿ, ನಮ್ಮ ಕಾಲದಲ್ಲಿ ಎಷ್ಟು ನೋಟಿಸ್ ಆಗಿವೆ.
ಇದರ ಬಗ್ಗೆ ಸರ್ಕಾರ ಆದಷ್ಟು ಬೇಗ ಉತ್ತರ ಕೊಡುತ್ತೆ. ಬಿಜೆಪಿ ಅವರು ರಾಜಕೀಯಕ್ಕೆ ಬಳಸಿಕೊಳ್ಳಲು ಮುಂದಾಗಿದ್ದರು. ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ಮಾಡಿದ್ರು. ಎಲ್ಲಿಯೂ ಕ್ಲಿಕ್ ಆಗಲ್ಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





