Breaking News

ದಸರಾ ಶಾಕ್​, ಅಮೃತಸರದಲ್ಲಿ ಜನರ ಮೇಲೆ ರೈಲು ಹರಿದು 50ಕ್ಕೂ ಹೆಚ್ಚು ಸಾವು..

ಅಮೃತಸರದಲ್ಲಿ ರೈಲು ಹಳಿಗಳ ಸಮೀಪದಲ್ಲೇ ರಾವಣನ ಪ್ರತಿಕೃತಿ ದಹನ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಈ ವೇಳೆ ಹಳಿಗಳ ಪಕ್ಕದಲ್ಲಿ ಜಮಾಯಿಸಿದ್ದ ನೂರಾರು ಜನರ ಮೇಲೆ ಟ್ರೈನ್​ ಹರಿದಿದ್ದು, 50ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ ಎನ್ನಲಾಗಿದೆ. ಅಲ್ಲದೆ, 500 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಸಾಧ್ಯತೆಯಿದೆ. ಒಟ್ಟಿನಲ್ಲಿ ರಾವಣ ದಹನ ಕಾರ್ಯಕ್ರಮ ದೇಶಕ್ಕೆ ದೊಡ್ಡ ಶಾಕ್​​ ಅನ್ನ ಕೊಟ್ಟಿದೆ.ರಾವಣ ದಹನ ಕಾರ್ಯಕ್ರಮ ವೇಳೆ ಪಟಾಕಿ, ಬಾಣ ಬಿರುಸುಗಳು ಸಿಡಿದು, ಭಾರಿ ಸದ್ದು ಉಂಟಾಗಿತ್ತು. ಹಾಗಾಗಿ ರೈಲ್ವೆ ಹಳಿ ಮೇಲೆ ನಿಂತಿದ್ದ ಭಾರಿ ಜನಸ್ತೋಮಕ್ಕೆ ಟ್ರೈನ್​ ಬರುತ್ತಿರುವುದು ಕೇಳಿ ಬಂದಿಲ್ಲ. ಹಾಗಾಗಿ ಈ ಅಪಘಾತ ಸಂಭವಿಸಿದೆ. ಟ್ರೈನು ಜಲಂಧರ್​​ನಿಂದ ಅಮೃತಸರದತ್ತ ಬರುತ್ತಿತ್ತು. ಮಾನಾವಲ ನಿಲ್ದಾಣದ ಸಮೀಪ ಗೇಟ್​ ನಂಬರ್​ 27ರ ಬಳಿ DMU ಟ್ರೈನ್​ ನಂಬರ್​ 74943 ಚಲಿಸುತ್ತಿದ್ದಾಗ ಈ ಅಪಘಾತವುಂಟಾಗಿದೆ ಎಂದು ಉತ್ತರ ರೈಲ್ವೆ ಮೂಲಗಳು ತಿಳಿಸಿವೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *