ಜೊತೆ ಜೊತೆಯಲಿ’ಸೀರಿಯಲ್ ಮೂಲಕ ಕರ್ನಾಟಕ ಜನತೆಯ ಮನಗೆದ್ದ ಮಂಗಳೂರಿನ ಬೆಡಗಿ ಮೇಘಾ ಶೆಟ್ಟಿ (Megha Shetty) ಅವರು ಬಿಗ್ ಬಾಸ್ ಮನೆ ಆಟಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿಗೆ ಕೊನೆಗೂ ಉತ್ತರ ಸಿಕ್ಕಿದೆ. ಬಿಗ್ ಬಾಸ್ ಸೀಸನ್ 10ರಲ್ಲಿ (Bigg Boss Kannada Season 10) ಗ್ಲ್ಯಾಮರ್ ಗೊಂಬೆ ಮೇಘಾ ಶೆಟ್ಟಿ ಎಂಟ್ರಿ ಬಗ್ಗೆ ಈಗ ಸ್ಪಷ್ಟನೆ ಸಿಕ್ಕಿದೆ.
ಕಿರುತೆರೆ ಲೋಕಕ್ಕೆ ಮೇಘಾ ಎಂಟ್ರಿ ಬಳಿಕ ಪ್ರತಿ ಬಿಗ್ ಬಾಸ್ ಸೀಸನ್‌ನಲ್ಲಿಯೂ ಮೇಘಾ ಶೆಟ್ಟಿ ಹೆಸರು ತಳುಕು ಹಾಕಿಕೊಳ್ಳುತ್ತಿತ್ತು. ಅದರಂತೆಯೇ ಈ ಬಾರಿ ಕೂಡ ದೊಡ್ಮನೆ ಆಟಕ್ಕೆ ಮೇಘಾ ಜೊತೆಯಾಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಈಗ ಈ ವಿಚಾರ ಸುಳ್ಳಾಗಿದೆ
ಮೂಲಗಳ ಪ್ರಕಾರ, ಬಿಗ್ ಬಾಸ್‌ಗೆ ಮೇಘಾ ಶೆಟ್ಟಿ ಎಂಟ್ರಿ ಕೊಡುತ್ತಾ ಇಲ್ಲ. ಅಕ್ಟೋಬರ್ 4ರಿಂದ ವಿನಯ್ ರಾಜ್‌ಕುಮಾರ್ ಜೊತೆಗಿನ ‘ಗ್ರಾಮಾಯಣ’ ಶೂಟಿಂಗ್ ಶುರುವಾಗುತ್ತಿದೆ. ಅದಕ್ಕಾಗಿ ನಟಿ ಸಿದ್ಧತೆ ಮಾಡಿಕೊಳ್ತಿದ್ದಾರೆ. ಹಳ್ಳಿ ಹುಡುಗಿಯ ಪಾತ್ರವಾಗಿರುವ ಕಾರಣ, ಹಳ್ಳಿ ಸೊಗಡಿನಲ್ಲಿ ಬೆಂಗಳೂರು ಬಿಟ್ಟು ಬೇರೆ ಕಡೆ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗಿದೆ. ಒಂದು ತಿಂಗಳುಗಳ ಕಾಲ ಶೂಟಿಂಗ್ ನಡೆಯಲಿದೆ ಎನ್ನಲಾಗಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news





