ಮೋಸ್ಟ್ ಎಕ್ಸ್ಪೆಕ್ಟೆಡ್ ‘ದಿ ವಿಲನ್’ ಸಿನಿಮಾ ರಿಲೀಸ್ಗೂ ಮುನ್ನ ಸಿಕ್ಕಾಪಟ್ಟೆ ಹಲ್ಚಲ್ ಕ್ರಿಯೇಟ್ ಮಾಡಿತ್ತು. ಧಾಮ್, ಧೂಮ್ ಅಂತಾ ಶಿವಣ್ಣ ಹಾಗೂ ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಫಿಲಂ ಅಕ್ಟೋಬರ್ 18 ರಂದು ಗ್ರ್ಯಾಂಡ್ ಎಂಟ್ರಿಯಾಗಿ, ಕಲೆಕ್ಷನ್ನಲ್ಲಿ ದೊಡ್ಡ ಮಟ್ಟದಲ್ಲಿಯೇ ದಾಪುಗಾಲನ್ನಿಡ್ತಿದೆ. ಸಂತೋಷದ ವಿಚಾರ. ಸಿನಿಮಾ ಯಶಸ್ಸಿಗೆ ಎಲ್ಲರೂ ಜೈ ಅನ್ನೋಣ. ಹಾರೈಸೋಣ.ವಿಷಯ ಅದಲ್ಲ. ಸ್ಟಾರ್ ನಟರ ಅಭಿಮಾನದ ಹೆಸರಿನಲ್ಲಿ ಫ್ಯಾನ್ಸ್ ಅಂತಾ ತಮಗೆ ತಾವೇ ಹಣೆಪಟ್ಟಿ ಕಟ್ಕೊಂಡು ಮಾಡ್ತೀರುವ ಹೇಯ ಕೃತ್ಯ ಏನು ಹೇಳೋದು? ಯಾರೂ ಸಹಿಸದ, ಯಾವ ದೇವರೂ ಕ್ಷಮಿಸದ ಪಾಪದ ಕೆಲಸ. ಅಭಿಮಾನದ ಹೆಸರಲ್ಲಿ, ಸಿನಿಮಾ ಪ್ರೀತಿಯ ಹೆಸರಲ್ಲಿ ಒಂದು ಫಿಲಂ ಶತದಿನ ಪೂರೈಸಲಿ ಅಂತಾ ನಟರ ಕಟೌಟ್ಗೆ ಪ್ರಾಣಿ ಬಲಿ ಕೊಟ್ಟು ರಕ್ತ ಹರಿಸ್ತಾರೆ ಅಂದ್ರೆ ಇದೆಂಥ ಮಾನವೀಯತೆ ಅನ್ನೋ ಪ್ರಶ್ನೆಗೆ ಅವರೇ ಉತ್ತರಿಸಬೇಕಿದೆ.ಇಂಥ ಪ್ರಶ್ನೆ, ಇಂಥ ಆಕ್ರೋಶದ ಮಾತುಗಳನ್ನ ನಾವಿಲ್ಲಿ ಕೇಳ್ತಿಲ್ಲ. ಬದಲಾಗಿ ನಿಜವಾದ ಕಿಚ್ಚ ಸುದೀಪರ ಅಭಿಮಾನಿಗಳೇ ಪ್ರಶ್ನೆಯನ್ನೇ ಎತ್ತಿದ್ದಾರೆ. ಹೌದು, ನಿನ್ನೆ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಪ್ರಪಂಚದಾದ್ಯಂತ ರಿಲೀಸ್ ಆಗಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಮಾಲತೇಶ ಚಿತ್ರಮಂದಿರದ ಎದುರು ವಿಲಕ್ಷಣ ಕೃತ್ಯವೊಂದನ್ನ ಕಿಚ್ಚ ಸುದೀಪ್ ಅಭಿಮಾನಿಗಳು ಅಂತಾ ಹೇಳಿಕೊಂಡೊರು ನಡೆಸಿದ್ದಾರೆ.ಚಿತ್ರ ಮಂದಿರದ ಎದುರು ನಿಲ್ಲಿಸಲಾಗಿದ್ದ ವಿಲನ್ ಕಟೌಟ್ಗೆ, ಸಿನಿಮಾ ನೂರು ದಿನ ಪೂರೈಸಲಿ ಅಂತಾ ನಡು ರಸ್ತೆಯಲ್ಲೇ, ಥಿಯೇಟರ್ ಮುಂದೆ ಕುರಿಮರಿಯನ್ನು ಬಲಿ ಕೊಟ್ಟು ವಿಕೃತಿ ಮೆರೆದಿದ್ದಾರೆ. ಹರಕೆ ಅಂತಾ ದೇವರಿಗೆ, ಕುರಿ, ಕೋಳಿ, ಮೇಕೆ ಸೇರಿದಂತೆ ವಿವಿಧ ಪ್ರಾಣಿಗಳನ್ನ ಬಲಿ ಕೊಡೋದನ್ನ ನೋಡಿದ್ದೇವೆ. ಕೇಳಿದ್ದೇವೆ. ಅಷ್ಟೇ ಅಲ್ಲ ಇಂದು ದೇವರಿಗೇ ಪ್ರಾಣಿ ಬಲಿ ಕೊಡೋದನ್ನು ನಿಷೇಧಿಸಲಾಗಿದೆ. ಆದರೆ ಒಂದು ಸಿನಿಮಾ ಓಡಲಿ, ಯಶಸ್ವಿ ಪ್ರದರ್ಶನ ಕಾಣಲಿ ಅಂತಾ ನಾಯಕನ ಕಟೌಟ್ಗೆ ಕುರಿ, ಮೇಕೆಗಳನ್ನ ಕಡಿದ್ರೆ ಏನರ್ಥ..?ಇನ್ನು ಶಿಕಾರಿಪುರದಲ್ಲಿ ಕುರಿಯನ್ನ ಬಲಿಕೊಟ್ಟಿರುವ ರೌದ್ರಾವತಾರ ಭಯಂಕರ, ಘನ ಘೋರವಾಗಿದೆ. ಸಿನಿಮಾ ವೀಕ್ಷಣೆಗೆ ಬಂದ ನೂರಾರು ಸಿನಿಮಾ ಅಭಿಮಾನಿಗಳ ಮುಂದೆ ಕುರಿಯನ್ನ ತಂದು ನಿಲ್ಲಿಸಿ ಕಡಿದಿದ್ದಾರೆ. ಭಯಗೊಂಡು ‘ನನ್ನನ್ನು ಏನೂ ಮಾಡಬೇಡಿ’ ಅಂತಾ ರೋದಿಸುತ್ತಿದ್ದರೂ ಕುರಿ ಕಾಲುಗಳನ್ನ ಹಿಡಿಕೊಂಡಿದ್ದಾರೆ. ಇದರಿಂದ ಮತ್ತಷ್ಟು ದಂಗಾದ ಕುರಿ ವಿಲ ವಿಲ ಅಂತಾ ಒದ್ದಾಡಿದೆ. ನೋಡು, ನೋಡ್ತಿದ್ದಂತೆ ಅಭಿಮಾನಿಗಳು ಅಂತಾ ಹೇಳಿಕೊಂಡ ಪಾಪಿಗಳ ಕಚಕ್ ಅಂತಾ ಕುರಿಯನ್ನ ಕಡಿದ್ದಾರೆ. ಇನ್ನೂ ವಿಕೃತಿ ಅಂದ್ರೆ ಕರಿ ಕಡಿಯುವ ವೇಳೆ ತಮ್ಮ ಹೇಯ ಕೆಲಸವನ್ನ ಮೊಬೈಲ್ನಲ್ಲಿ ಸೆರೆ ಹಿಡಿಯುತ್ತ ಮಜಾ ತೆಗೆದುಕೊಂಡಿದ್ದಾರೆ. ಮತ್ತು ಆ ಕುರಿಯ ತಲೆಯಿಂದ ಕಿಚ್ಚ ಸುದೀಪ್ ಕಟೌಟ್ಗೆ ರಕ್ತಾಭಿಷೇಕ ಮಾಡಿ ವಿಕೃತಿ ಮೆರೆದಿದ್ದಾರೆ.ಬಹುಶಃ ಇಂಥ ಪೈಶಾಚಿಕ ಕೃತ್ಯವನ್ನ ನಿಜವಾದ ಸಿನಿಮಾ ಆರಾಧಕರು, ಅಭಿಮಾನಿಗಳು, ಸಿನಿ ರಸಿಕರು ಯಾರೂ ಮಾಡಲ್ಲ. ಯಾರೂ ಒಪ್ಪಿಕೊಳ್ಳಲ್ಲ. ಅಭಿಮಾನದ ಹೆಸರಲ್ಲಿ ಇಂಥ ಒಂದು ಹಿಂಸೆಯ ಕೆಲಸಗಳೂ ನಡೆಯೋದನ್ನ ಬಹುಶ ಕಲಾವಿದಱರೂ ಸಹಿಸಲ್ಲ.ಸಿನಿಮಾ ಯಶಸ್ವಿಗಾಗಿ ಅಭಿಮಾನದ ಹೆಸರಲ್ಲಿ ಮಾಡ್ತಿರುವ ಕುಕೃತ್ಯಗಳು ಇದೇ ಮೊದಲಲ್ಲ. ಇದು ನಮ್ಮ ರಾಜ್ಯಕ್ಕೆ ಮಾತ್ರ ಸಿಮತವಾಗಿಯೂ ಇಲ್ಲ. ಇದೊಂದು ಕೆಟ್ಟ ಸಂಸ್ಕೃತಿಯಾಗಿ ಹಬ್ಬಿಕೊಂಡು ಬರ್ತಿದೆ. ಈ ಹಿಂದೆ, ಸುದೀಪ್ ಅಭಿಮಾನಿಗಳು ಕೃತ್ಯವನ್ನ ಮಾಡಿದ್ದರು. ಅಲ್ಲದೇ ದುನಿಯಾ ವಿಜಯ್ ಅವರ ಶಿವಾಜಿನಗರ ಸಿನಿಮಾ ರಿಲೀಸ್ ಆದಾಗ ದಾವಣಗೆರೆಯಲ್ಲಿ ರೌದ್ರಾವತಾರ ಮೆರೆದಿದ್ದರು. ಇದೀಗ ದಿ ವಿಲನ್ ಸಿನಿಮಾ ಯಶಸ್ವಿಗೂ ಅಭಿಮಾನಿಗಳು ಹಾಗೇ ಮಾಡಿದ್ದಾರೆ. ಆಂಧ್ರ ಸೇರಿದಂತೆ ರಾಜ್ಯದ ಗಡಿ ಜಿಲ್ಲೆಯಲ್ಲಿ ಹೆಚ್ಚು ಪ್ರಚಲಿತವಿರುವ ಕುರಿ ಬಲಿ ಕೊಡುವ ಕೆಟ್ಟ ಸಂಪ್ರದಾಯ, ಇದೀಗ ಇಲ್ಲಿಗೂ ಕಾಲಿಟ್ಟಿದೆ.ಸಿನಿಮಾ ಹೆಸರಲ್ಲಿ ತಮ್ಮ ಮೋಜು-ಮಸ್ತಿಗಾಗಿ ಜೀವ ಒಂದಕ್ಕೆ ಬಲಿ ಕೊಡೋದು ಅದ್ಯಾವ ನ್ಯಾಯ? ಅಭಿಮಾನದ ಹೆಸರಲ್ಲಿ ಹಿಂಸೆ ಮಾಡೋದು ಅದೆಷ್ಟು ಸರಿ..? ಇದಕ್ಕೆಲ್ಲಾ ಅಭಿಮಾನಿಗಳ ಸಂಘ ಏನ್ ಹೇಳುತ್ತೆ..? ಚಿತ್ರ ನಟರ ಅಭಿಪ್ರಾಯ ಏನು..? ಅನ್ನೋದು ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಅಷ್ಟೇ ಅಲ್ಲಾ.. ಬೆಳಗಾವಿಯ ಕೂಡ್ಲಗಿಯಲ್ಲೂ ಇಂತಹದೇ ಒಂದು ಕೃತ್ಯ ನಡೆಸಲಾಗಿದೆ ಅನ್ನೋ ವಿಡಿಯೋ ಕೂಡ ವೈರಲ್ ಆಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಅನ್ನೋದು ತಿಳಿದು ಬಂದಿಲ್ಲ. ಕೊನೆಪಕ್ಷ ನಟ ಸುದೀಪ್ ಈ ಘಟನೆಯನ್ನ ಗಮನಿಸಿದ್ರೆ, ತಮ್ಮ ಅಭಿಮಾನಿಗಳಿಗೆ ಇನ್ನಾದರೂ ಕಿವಿ ಮಾತು ಹೇಳುತ್ತಾರಾ ಅಂತಾ ಕಾದು ನೋಡಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





