Breaking News

ಮಂಡ್ಯ ಲೋಕಸಭಾ ಕ್ಷೇತ್ರ ಈಗಾಗಲೇ ನಾವು ಗೆದ್ದಿದ್ದೇವೆ- ವಿಪಕ್ಷ ನಾಯಕ ಯಡಿಯೂರಪ್ಪ ವಿಶ್ವಾಸ

ಜಮಖಂಡಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಪರ ಪ್ರಚಾರಕ್ಕೆ ಹೊರಟಿದ್ದೇನೆ.ಬಳ್ಳಾರಿ, ಶಿವಮೊಗ್ಗ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರವನ್ನ ಈಗಾಗಲೇ ಗೆದ್ದಿದ್ದೇವೆ.ಹೆಚ್ಚು ಅಂತರದ ಗೆಲುವಿಗೆ ಪ್ರಯತ್ನ ನಡೆದಿದ್ದು,ಆರೋಪ, ಪ್ರತ್ಯಾರೋಪಗಳಿಗೆ ಜನ ಮುಂದಿನ ತಿಂಗಳು 6 ರಂದು ಉತ್ತರಿಸಲಿದ್ದಾರೆ.ಎಂದು ವಿಪ್ಷ ನಾಯಕ ಬಿಎಸ್ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಹೇಳಿದರು.ಮಂಡ್ಯ ಪ್ರಚಾರದ ವೇಳೆ ನಿರೀಕ್ಷೆಗೂ ಮೀರಿ ಜನ ಸೇರಿದ್ದರು.ಶ್ರೀರಾಮಲು 420 ಎಂದು ಸಿದ್ದರಾಮಯ್ಯ ಹೇಳಿದ ವಿಚಾರ.ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರದ ಭರಾಟೆಯಲ್ಲಿ ನಾಲಿಗೆ ಹರಿ ಬಿಟ್ಟಿದ್ದಾರೆ.ಈ ತರಹದ ಮಾತುಗಳು ಅವರ ಘನತೆಗೆ ತಕ್ಕದ್ದಲ್ಲ.ಮಾತನಾಡುವಾಗ ಎಚ್ಚರಿಕೆ ವಹಿಸಬೇಕು.ಶ್ರೀರಾಮಲು ಅವರ ಜತೆಗೆ ವಾಲ್ಮೀಕಿ ಸಮಯದಾಯವನ್ನೂ ಸಿದ್ದರಾಮಯ್ಯ ಅವಮಾನಿಸಿದ್ದಾರೆ.ಸಿದ್ದರಾಮಯ್ಯ ಕೂಡಲೇ ಕ್ಷಮೆ ಯಾಚಿಸಬೇಕು.ಚುನಾವಣೆಯ ಅಂತಿಮ ತೀರ್ಪು‌ ಮತದಾರನದ್ದು.ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂದು ಕುಮಾರಸ್ವಾಮಿ ಅವರನ್ನ ಪ್ರಶ್ನಿಸಿದ ಬಿ.ಎಸ್.ವೈ.ಪ್ರಧಾನಿ ಅಭ್ಯರ್ಥಿಯ ಬಗ್ಗೆ ಅವರಲ್ಲೇ ಗೊಂದಲ ಇದೆ. ಕೆಲವರು ರಾಹುಲ್ ಗಾಂಧಿ ಅಂದುಕೊಂಡ್ರೆ ಇನ್ನೂ ಕೆಲವರು ಚಿದಂಬರಂ ಹೆಸರು ಹೇಳ್ತಿದ್ದಾರೆ.ಎಲ್ಲಾ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಪ್ರಧಾನಿ ಅಂತ ವರದಿ ಬಂದಿದೆ ಇಷ್ಟೆಲ್ಲಾ ಗೊತ್ತಿದ್ರೂ ಬಿಟ್ಟಿ ಪ್ರಚಾರ ಮಾಡುತ್ತಿದಾರೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಎಸ್ ಯಡಿಯೂರಪ್ಪ ವಿಪಕ್ಷ ನಾಯಕ….

Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *