Breaking News

ನೋಡೋಕೆ ಮೊಬೈಲ್​​ ಫ್ಲಿಪ್​ ಕವರ್, ಒಳಗೆ ಇದ್ದಿದ್ದು ಚಿನ್ನದ ಬಿಸ್ಕೆಟ್..!

ಮುಂಬೈ: ಅಕ್ರಮವಾಗಿ ಗೋಲ್ಡ್​ ಹಾಗೂ ಇನ್ನಿತರ ವಸ್ತುಗಳನ್ನ ಸಾಗಿಸಲು ಖದೀಮರು ನಾನಾ ಐಡಿಯಾಗಳನ್ನ ಉಪಯೋಗಿಸ್ತಾರೆ ಈಗಾಗಲೇ ಹಲವು ಸಲ ಬಹಿರಂಗೊಂಡಿದೆ. ಇದಕ್ಕೀಗ ಹೊಸದೊಂದು ಸಾಕ್ಷಿ ದೊರಕ್ಕಿದ್ದು, ಗೋಲ್ಡ್​ ಬಿಸ್ಕೆಟ್​ಗಳನ್ನು ಮೊಬೈಲ್​ ಫ್ಲಿಪ್​ ಕವರ್​ನಲ್ಲಿ ಇಟ್ಟುಕೊಂಡು ವಿದೇಶಕ್ಕೆ ಹಾರಲು ಹೊರಟಿದ್ದ, ವ್ಯಕ್ತಿಯೊಬ್ಬನನ್ನ ಮುಂಬೈ ಛತ್ರಪತಿ ಶಿವಾಜಿ ಇಂಟರ್​ನ್ಯಾಷನಲ್​​ ಏರ್​ಪೋರ್ಟ್​ನ ಪೊಲೀಸರು ಬಂಧಿಸಿದ್ದಾರೆ.ಜಿತೇಂದ್ರ ಸೋಲಾಕಿ ಎಂಬ ವ್ಯಕ್ತಿ ಮೊಬೈಲ್​​ ಫ್ಲಿಪ್​ ಕವರ್​ನಲ್ಲಿ ಥೇಟ್​ ಮೊಬೈಲ್​ ರೀತಿಯಲ್ಲೇ ಕಾಣುವಂತೆ ಮೂರು ಚಿನ್ನದ ಬಿಸ್ಕೆಟ್​ಗಳನ್ನ ಅಡಗಿಸಿ ಸಾಗಿಸುತ್ತಿದ್ದ. ಆತನ ಮೇಲೆ ಶಂಕೆ ವ್ಯಕ್ತಪಡಿಸಿ, ಸಿಬ್ಬಂದಿ ಪರಿಶೀಲನೆ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ಆತನಿಂದ 87 ಲಕ್ಷ ಮೌಲ್ಯದ 2 ಕೆಜಿಗೂ ಅಧಿಕ ತೂಕದ ಚಿನ್ನದ ಬಿಸ್ಕೆಟ್​ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *