Breaking News

ಡಿಎಂಕೆ ಕೇಳಿದ ಪ್ರಶ್ನೆಗೆ ಸೂಪರ್​ ಸ್ಟಾರ್ ಕೊಟ್ಟ ಉತ್ತರ ಏನ್​ ಗೊತ್ತಾ?

ಚೆನ್ನೈ: ನನ್ನ ಮತ್ತು ನನ್ನ ಅಭಿಮಾನಿಗಳನ್ನ ಯಾವುದೇ ಶಕ್ತಿ ದೂರ ಮಾಡಲು ಆಗುವುದಿಲ್ಲ ಅಂತಾ ಸೂಪರ್​ ಸ್ಟಾರ್​ ರಜನಿಕಾಂತ್​​ ತಮ್ಮ ವಿರುದ್ಧ ಡಿಎಂಕೆ ಮಾಡಿದ್ದ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ಈ ಹಿಂದೆ ಪಕ್ಷದಲ್ಲಿನ ಹುದ್ದೆಗಳಿಗಾಗಿ ಹಣದ ಆಮಿಷ ಒಡ್ಡುವವರಿಗೆ ತಮ್ಮ ಪಾರ್ಟಿಯಲ್ಲಿ ಅವಕಾಶವಿಲ್ಲ ಅಂತಾ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ನಿನ್ನೆ ಡಿಎಂಕೆ ಪಕ್ಷದ ಮುಖವಾಣಿ ಪತ್ರಿಕೆ ಮುರಸೋಳಿಯಲ್ಲಿ ರಜನಿ ಹೇಳಿಕೆಯನ್ನು ಟೀಕಿಸಲಾಗಿತ್ತು. ಮುಗ್ಧ ಅಭಿಮಾನಿ ಎಂಬ ಟೈಟಲ್​ನಡಿ ಬರೆಯಲಾಗಿದ್ದ ಲೇಖನದಲ್ಲಿ, ಕೋಮು ಶಕ್ತಿಗಳಿಗೆ ಅವಕಾಶ ನೀಡುವ ಉದ್ದೇಶದಿಂದ ರಜನಿಕಾಂತ್​ ತಮ್ಮ ಅಭಿಮಾನಿಗಳಿಗೆ ಈ ರೀತಿಯ ಷರತ್ತುಗಳನ್ನು ವಿಧಿಸುತ್ತಿದ್ದಾರೆ ಅಂತಾ ಆರೋಪಿಸಲಾಗಿತ್ತು.ಡಿಎಂಕೆ ಪತ್ರಿಕೆಯಲ್ಲಿನ ಈ ಲೇಖನದ ಬಗ್ಗೆ ಪ್ರತಿಕ್ರಿಯಿಸಿರುವ ರಜನಿಕಾಂತ್​, ನಾನು ಸತ್ಯವನ್ನೇ ಹೇಳಿದ್ದೇನೆ. ರಾಜಕೀಯದಲ್ಲಿ ಪಾರದರ್ಶಕತೆ ತರುವುದು ನನ್ನ ಉದ್ದೇಶ. ಹೀಗಾಗಿ ಯಾವುದೇ ಶಕ್ತಿ ನನ್ನ ಹಾಗೂ ನನ್ನ ಅಭಿಮಾನಿಗಳನ್ನ ದೂರ ಮಾಡಲು ಸಾಧ್ಯವಿಲ್ಲ ಅಂತಾ ಟಾಂಗ್​ ನೀಡಿದ್ದಾರೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *