Breaking News

ಸಿಬಿಐ ಬೇಗುದಿ: 2 ವಾರದಲ್ಲಿ ವರ್ಮಾ ವಿಚಾರಣೆ ಮುಗಿಸುವಂತೆ ಸಿವಿಸಿಗೆ ಸುಪ್ರೀಂ ಆದೇಶ

ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ವಿಚಾರಣೆಯನ್ನು ಎರಡು ವಾರಗಳಲ್ಲಿ ಮುಗಿಸುವಂತೆ ಸುಪ್ರೀಂಕೋರ್ಟ್​ ಸಿವಿಸಿ(ಕೇಂದ್ರ ಜಾಗೃತಿ ಆಯೋಗ)ಗೆ ಆದೇಶಿಸಿದೆ. ಅಲ್ಲದೇ ಸಿವಿಸಿ ನಡೆಸುವ ವಿಚಾರಣೆಯ ಮೇಲ್ವಿಚಾರಕರನ್ನಾಗಿ ಸುಪ್ರೀಂ ಕೋರ್ಟ್​​ ನಿವೃತ್ತ ನ್ಯಾಯಾಮೂರ್ತಿ ಎ.ಕೆ ಪಟ್ನಾಯಕ್​ ಅವರನ್ನು ನೇಮಿಸಿದೆ. ಹಂಗಾಮಿ ಸಿಬಿಐ ನಿರ್ದೇಶಕ ಎಂ. ನಾಗೇಶ್ವರ್​ ರಾವ್​ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲವೆಂದು ತಿಳಿಸಿದೆ. ಪ್ರಕರಣದ ವಿಚಾರಣೆಯನ್ನು ದೀಪಾವಳಿ ಮುಗಿದ ನಂತರ ನವೆಂಬರ್​​ 12 ಕ್ಕೆ ನಡೆಸುವುದಾಗಿ ಹೇಳಿದೆ.ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಮೂವರು ನ್ಯಾಯಾಮೂರ್ತಿಗಳ ಪೀಠ, ಹಂಗಾಮಿ ಸಿಬಿಐ ನಿರ್ದೇಶಕ ಎಂ. ನಾಗೇಶ್ವರ್​​ ರಾವ್​ ಅವರು ಸಿಬಿಐನ ದಿನನಿತ್ಯದ ಕಾರ್ಯಗಳನ್ನು ಮಾತ್ರ ಮಾಡಬೇಕು. ಅಧಿಕಾರಿಗಳ ವರ್ಗಾವಣೆಯೂ ಒಳಗೊಂಡಂತೆ ಅವರು ಅಧಿಕಾರ ವಹಿಸಿಕೊಂಡಾಗಿನಿಂದ ತೆಗೆದುಕೊಂಡ ನಿರ್ಧಾರಗಳ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್​ಗೆ ಸಲ್ಲಿಸಬೇಕು ಎಂದು ತಿಳಿಸಿದೆ.ಪ್ರಕರಣದ ವಿವರಗುಜರಾತ್​ ಕೇಡರ್​ನ ಐಪಿಎಸ್​ ಅಧಿಕಾರಿ ರಾಕೇಶ್​​ ಅಸ್ತಾನಾ ಅವರ ಮೇಲೆ ಭ್ರಷ್ಟಚಾರದ ಆರೋಪಗಳಿವೆ. ಅವರನ್ನು ವಿಶೇಷ ನಿರ್ದೇಶಕರನ್ನಾಗಿ ನೇಮಿಸಬಾರದು ಎಂದು ಸಿಬಿಐ ನಿರ್ದೇಶಕ ಅಲೋಕ್​ ವರ್ಮಾ ಹೇಳಿದ್ದರು. ಅಲ್ಲದೇ ಈ ಸಂಬಂಧ ಅವರು ಕೇಂದ್ರ ಜಾಗೃತಿ ಆಯೋಗಕ್ಕೆ ಪತ್ರ ಬರೆದಿದ್ದರು. ಬಳಿಕ ತಮ್ಮನ್ನು ಪ್ರತಿನಿಧಿಸುವ ಅಧಿಕಾರ ರಾಕೇಶ್​​ ಅಸ್ತಾನಾಗೆ ಇಲ್ಲ ಎಂದು ವರ್ಮಾ ಮತ್ತೊಮ್ಮೆ ಸಿವಿಸಿಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ ರಾಕೇಶ್​ ಅಸ್ತಾನಾ ಸಹ ವರ್ಮಾ ಅವರು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಸಿವಿಸಿಗೆ ದೂರು ನೀಡಿದ್ದರು. ಇಷ್ಟಕ್ಕೆ ತಣ್ಣಗಾಗಿದ್ದರೆ ಈ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ. ಸಿಬಿಐ ಅಕ್ಟೋಬರ್​ 15ರಂದು ರಾಕೇಶ್​ ಅಸ್ತಾನಾ ವಿರುದ್ಧ ಭಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿತು. ಅಲ್ಲದೇ ಇತ್ತಿಚೇಗೆ ರಾಕೇಶ್​ ಅಸ್ತಾನಾ ಆಪ್ತ ಡಿವೈಎಸ್​ಪಿ ದೇವೇಂದ್ರಕುಮಾರ್​ರನ್ನು ಬಂಧಿಸಿದೆ. ಇದಾದ ಮೇಲೆ ಈ ಆಂತರಿಕ ಕಚ್ಚಾಟ ಬೀದಿಗೆ ಬಂದಿದೆ. ಸರ್ಕಾರ ಸದ್ಯ ಅಲೋಕ್​ ವರ್ಮಾ ಹಾಗೂ ರಾಕೇಶ್​ ಅಸ್ತಾನಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದೆ. ಹಿರಿಯ ಐಪಿಎಸ್​ ಅಧಿಕಾರಿ ಎಂ. ನಾಗೇಶ್ವರ್​ ರಾವ್​ ಅವರನ್ನು ಹಂಗಾಮಿ ಸಿಬಿಐ ನಿರ್ದೇಶಕರನ್ನಾಗಿ ನೇಮಿಸಿದೆ. ಇನ್ನು ಕೇಂದ್ರ ಸರ್ಕಾರದ ನಡೆಯನ್ನು ಸಿಬಿಐ ನಿರ್ದೇಶಕ ಅಲೋಕ್​ ವರ್ಮಾ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್​ ಈ ಮೇಲಿನ ಆದೇಶವನ್ನು ನೀಡಿದೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *