Breaking News

ಕೊಕೇನ್ ಮಾರಾಟ ಜಾಲದ ಕಿಂಗ್ ಪಿನ್ ಬಂಧನ..

ಮಂಗಳೂರು: ಕೊಕೇನ್ ಮಾರಾಟ ಜಾಲದ ಕಿಂಗ್ ಪಿನ್ ಅಜ್ಮಲ್ ಪುಲಿಕ್ಕಲ್ ಮೊಹಮ್ಮದ್ ಪೊಲೀಸ್ ಬಲೆಗೆ ಬಿದ್ದಿದ್ದಾನೆ. 44 ವರ್ಷದ ಆರೋಪಿ ಅಜ್ಮಲ್ ಮೂಲತಃ ಕಾಸರಗೋಡಿನ ಕುಂಜತ್ತೂರು ನಿವಾಸಿಯಾಗಿದ್ದಾನೆ. ಈತ ಗೋವಾದಿಂದ ಮಂಗಳೂರಿಗೆ ಕೊಕೇನ್ ಪೂರೈಸುತ್ತಿದ್ದ. ಎರಡು ತಿಂಗಳ ಹಿಂದೆ ಮಂಗಳೂರಿನಲ್ಲಿ ಐವರು ಕೊಕೇನ್ ಮಾರಾಟಗಾರರು ಬಂಧಿತರಾಗಿದ್ದರು. ಪ್ರಕರಣದ ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದ. ಬಂಧಿತ ಐವರ ವಿಚಾರಣೆ ವೇಳೆ ನೀಡಿದ ಮಾಹಿತಿ ಆಧಾರಿಸಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅಜ್ಮಲ್ ಪುಲಿಕ್ಕಲ್ ಮೊಹಮ್ಮದ್​ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Share News

About Shaikh BIG TV NEWS, Hubballi

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *