Breaking News

ಕಮಲದಲ್ಲಿ ಮುಳುಗಿದ್ದ ಚಂದ್ರಶೇಖರ್‌ ‘ಕೈ’ ಹಿಡಿದಿದ್ಯಾಕೆ..?

ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಿಂದ ಹಿಂದೆ ಸರಿದು ಬಿಜೆಪಿ ಅಭ್ಯರ್ಥಿ ಎಲ್‌. ಚಂದ್ರಶೇಖರ್‌ ರಾಜ್ಯ ಬಿಜೆಪಿ ನಾಯಕರಿಗೆ ಶಾಕ್‌ ನೀಡಿದ್ದಾರೆ. ಚುನಾವಣೆಗೆ ಇನ್ನೆರಡು ದಿನಗಳಷ್ಟೇ ಬಾಕಿ ಇರೋವಾಗ ಚಂದ್ರಶೇಖರ್‌ ಬಿಜೆಪಿಗೆ ಕೈ ಕೊಟ್ಟಿರೋದು ನಿರೀಕ್ಷೆಗೂ ಮೀರಿದ ಬೆಳವಣಿಗೆ. ಇಷ್ಟಕ್ಕೂ ಚಂದ್ರಶೇಖರ್‌ ಬಿಜೆಪಿಗೆ ಕೈಕೊಟ್ಟಿದ್ದೇಕೆ..? ಅದಕ್ಕವರು ಕೊಡ್ತಿರೋ ಕಾರಣ ಏನು..?ಬಿಜೆಪಿ ನಾಯಕರು ಪ್ರಚಾರಕ್ಕೆ ಬರಲಿಲ್ಲನನ್ನ ಪರವಾಗಿ ಬಿಜೆಪಿ ನಾಯಕರು ಪ್ರಚಾರ ಮಾಡುವುದಾಗಿ ಹೇಳಿದ್ರು. ಆದ್ರೆ ಪ್ರಚಾರಕ್ಕೆ ಯಾರೊಬ್ಬರು ಬರಲಿಲ್ಲ.ಚುನಾವಣಾಗಾಗಿ ಫಂಡ್​ ನೀಡುವುದಾಗಿ ಹೇಳಿದ್ರು, ಆದ್ರೆ ಯಾವ ಫಂಡ್‌ ಕೂಡ ಸಿಗಲಿಲ್ಲ.ನಾನು ಮೂಲತಃ ಕಾಂಗ್ರೆಸ್ ಪಕ್ಷದವನು. ಬಿಜೆಪಿಗೆ ಸೇರಿದ್ರೆ, ಟಿಕೆಟ್ ಕೊಡುತ್ತೇವೆ ಅಂದ್ರು ಹಾಗಾಗಿ ಬಿಜೆಪಿಗೆ ಸೇರಿದೆ. ನನಗೆ ತುಂಬಾ ನೋವು ಕೊಟ್ಟರು. ಅದಕ್ಕೆ ಕಣದಿಂದ ಹಿಂದೆ ಸರಿದೆ.ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್​.ಯಡಿಯೂರಪ್ಪ ಅವರ ಬಳಿ ನಾನು ನಿನ್ನೆ ಮಾತನಾಡಲು ಯತ್ನಿಸಿದೆ. ಅವರು ನನ್ನ ಕರೆ ಸ್ವೀಕರಿಸಲಿಲ್ಲ. ಅಲ್ಲದೇ ಯಾವೊಬ್ಬ ನಾಯಕರು ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದ ನನಗೆ ತುಂಬಾ ನೋವಾಗಿದೆ. ಎರಡು ದಿನಗಳಿಂದ ಯಾರೂ ನನ್ನ ಫೋನ್‌ ಸ್ವೀಕರಿಸುತ್ತಿಲ್ಲ.ಪಕ್ಷ ಸೇರಿದ 15 ದಿನಕ್ಕೆ ನನಗೆ ಬಿಜೆಪಿ ನಾಯಕರ ಮನಸ್ಥಿತಿ ಗೊತ್ತಾಗಿಹೋಯಿತು.ಯಾವ ನಾಯಕರು ನನಗೆ ಸಹಕಾರ ನೀಡಿಲ್ಲ, ಬಿಜೆಪಿ ನಾಯಕರಲ್ಲಿ ಒಗ್ಗಟ್ಟಿಲ್ಲ.ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ನಮ್ಮನ್ನ ಬಿಜೆಪಿಗೆ ಕರೆದುಕೊಂಡು ಹೋದರು. ಆದರೆ, ಅಲ್ಲಿ ಯಾರೂ ಸಹಾಯ ಮಾಡಲೇ ಇಲ್ಲ. ಆದ್ರೆ ಇದಕ್ಕೆಲ್ಲಾ ಯೋಗಿಶ್ವರ್​ ಅವರೇ ಕಾರಣ. ಇದರಿಂದ ಬೇಸತ್ತು ಕಾಂಗ್ರೆಸ್ ಗೆ ವಾಪಸ್ಸಾಗಿದ್ದೇನೆ.ನಮ್ಮ ನಾಯಕರು ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಅಂದ್ರೆ, ನಾವೇನ್​ ಮಾಡೋಕೆ​ ಆಗುತ್ತೆ.ಕೇಂದ್ರ ಸಚಿವ ಸದಾನಂದ ಗೌಡರು ಬರ್ತಾರೆ, ಪ್ರೆಸ್​ಮೀಟ್​ ಮಾಡ್ತಾರೆ, ನಗ್ತಾರೆ ಹೋಗ್ತಾರೆ. ಆದರೆ, ಅವರು ನನ್ನ ಜೊತೆ ಮಾತನಾಡಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು.ನಾನು ಬಿಜೆಪಿಯಲ್ಲಿ ಬಲಿ ಪಶುವಾದೆ. ಅಲ್ಲಿಗೆ ಹೋಗಿ ತಪ್ಪು ಮಾಡಿದೆ. ನನ್ನ ಬೆಂಬಲ ಜೆಡಿಎಸ್‌-ಕಾಂಗ್ರೆಸ್ ಅಭ್ಯರ್ಥಿಗೆ ಇರಲಿದೆ ಎಂದರು.

Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *