ರಫೇಲ್ ಡೀಲ್ ಬಗ್ಗೆ ತನಿಖೆಯಾದ್ರೆ ಪ್ರಧಾನಿ ನರೇಂದ್ರ ಮೋದಿ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.ನಾಗ್ಪುರ ಬಳಿ ಅಂಬಾನಿ ಅವರ ಭೂಮಿ ಇರುವುದರಿಂದ ಹೆಚ್ಎಎಲ್ ಬದಲು ರಿಲಯನ್ಸ್ ಡಿಫೆನ್ಸ್ ಸಂಸ್ಥೆಯನ್ನ ಆಯ್ಕೆ ಮಾಡಿಕೊಳ್ಳಲಾಯಿತು ಎಂದು ಇತ್ತೀಚೆಗೆ ಡಸ್ಸಾಲ್ಟ್ ಏವಿಯೇಷನ್ ಹೇಳಿತ್ತು. ಆದ್ರೆ ಈ ಹೇಳಿಕೆಯನ್ನ ನಿರಾಕರಿಸಿರುವ ರಾಹುಲ್ ಗಾಂಧಿ, ಹೆಚ್ಎಎಲ್ ಬಳಿ ಇನ್ನೂ ಹೆಚ್ಚಿನ ಭೂಮಿ ಇದ್ದರೂ, ಅಂಬಾನಿ ಅವರ ಸಂಸ್ಥೆಯನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.ಡಸ್ಸಾಲ್ಟ್ ಏವಿಯೇಷನ್ನ ಸಿಇಓ ಎರಿಕ್ ಟ್ರಾಪಿಯರ್, ರಫೇಲ್ ಒಪ್ಪಂದದ ಬಗ್ಗೆ ಸುಳ್ಳು ಹೇಳ್ತಿದ್ದಾರೆ. ಡಸ್ಸಾಲ್ಟ್ ಸಂಸ್ಥೆ ಅನಿಲ್ ಅಂಬಾನಿಗಾಗಿ ಭೂಮಿ ಖರೀದಿಸಿದ ಬಳಿಕ ರಿಲಯನ್ಸ್ ಡಿಫೆನ್ಸ್ ಸಂಸ್ಥೆಯನ್ನು ಪಾಲುದಾರರಾಗಿ ಮಾಡಿಕೊಂಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅಂಬಾನಿ ಅವರ ಬಳಿ ಭೂಮಿ ಇರುವುದರಿಂದ ಹೆಚ್ಎಎಲ್ಗೆ ಕಾಂಟ್ರಾಕ್ಟ್ ನೀಡಲಿಲ್ಲ ಎಂದು ಡಸ್ಸಾಲ್ಟ್ ಸಿಇಓ ಹೇಳಿದ್ದರು. ಆದ್ರೆ ಅನಿಲ್ ಅಂಬಾನಿ ಬಳಿ ಇದ್ದ ಭೂಮಿಯನ್ನ ಡಸ್ಸಾಲ್ಟ್ ನೀಡಿರುವ ಹಣದಿಂದಲೇ ಖರೀದಿಸಲಾಗಿದೆ ಎಂದು ರಾಹುಲ್ ಗಾಂಧಿ ಅರೋಪ ಮಾಡಿದ್ದಾರೆ.ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಇದು ಮೋದಿ ಹಾಗೂ ಅನಿಲ್ ಅಂಬಾನಿ ನಡುವಿನ ಪಾರ್ಟ್‌ನರ್‌ಶಿಪ್ ಎಂದು ಹೇಳಿದ್ರು. ಒಂದು ವೇಳೆ ಈ ಬಗ್ಗೆ ತನಿಖೆ ನಡೆದರೆ, ಗ್ಯಾರಂಟಿ ಹೇಳ್ತೀನಿ ಮೋದಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾಕಂದ್ರೆ ಒಂದು ಅವರ ಭ್ರಷ್ಟಾಚಾರ, ಮತ್ತೊಂದು ಡಿಸಿಷನ್ ಮೇಕರ್ ಯಾರು ಅನ್ನೋದು ಇಲ್ಲಿ ಸ್ಪಷ್ಟವಾಗಿದೆ. ಅದು ನರೇಂದ್ರ ಮೋದಿ. ಅನಿಲ್ ಅಂಬಾನಿಗೆ ₹30 ಸಾವಿರ ಕೋಟಿ ನೀಡಲು ನರೇಂದ್ರ ಮೋದಿ ಮಾಡಿರುವ ಡೀಲ್ ಇದು ಎಂದು ರಾಹುಲ್ ಗಾಂಧಿ ಆರೋಪಿಸಿದ್ರು.
bigtvnews | Hubli Dharwad News | Kannada News | Karnataka News Hubli News | News In Hubli | Local news





