Breaking News

ಮಲಗಿರುವಾಗ ನಾಗರ ಹಾವು ಕಡಿದು ಬಾಲಕಿ ಸಾವು!!

15 ವರ್ಷದ ಬಾಲಕಿ ಶ್ರಾವಣಿ ಹಾವು ಕಡಿತದಿಂದ ಮೃತಪಟ್ಟವಳು. ಬಾಲಕಿಯು ಹೊಸ ಮೋಕಾ ಗ್ರಾಮದ ಲಕ್ಷ್ಮಣ ಹಾಗೂ ಶೇಕಮ್ಮ ದಂಪತಿಯ ಮಗಳಾಗಿದ್ದಳು. ಶ್ರಾವಣಿ ಮೋಕಾ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.ರಾತ್ರಿ ಮಲಗಿರುವಾಗ ಬಾಲಕಿಗೆ ಮೂರು ಸಲ ನಾಗರ ಹಾವು ಕಚ್ಚಿದೆ. ಕೈ ಮತ್ತು ಕಾಲಿಗೆ ನಾಗರ ಹಾವು ಕಡಿದರೂ ಬಾಲಕಿಗೆ ಎಚ್ಚರವಾಗಿರಲಿಲ್ಲ. ಬಳಿಕ ನಿದ್ರೆಯಲ್ಲಿಯೇ ವಿಷವೇರಿ ಬಾಲಕಿ ಮೃತಪಟ್ಟಿದ್ದಾಳೆ. ಬೆಳಗ್ಗೆ ಪೋಷಕರು ಎದ್ದು, ಮಗಳನ್ನು ಎಬ್ಬಿಸಲು ಮುಂದಾದಾಗ ಆಕೆ ಸಾವನ್ನಪ್ಪಿರುವುದು ಗೊತ್ತಾಗಿದೆ.ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.ಮೋಕಾ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *