Breaking News

ರೆಡ್ಡಿ ಸಂಕಷ್ಟದಲ್ಲೂ ಸ್ವಾಮಿನಿಷ್ಟೆ ಮೆರೆದ ಅಲಿಖಾನ್​​​

ಬೆಂಗಳೂರು: ಆ್ಯಂಬಿಡೆಂಟ್​​​​ ಡೀಲ್​​ಗೆ ಸಂಬಂಧಿಸಿ ನಾಪತ್ತೆಯಾಗಿದ್ದ ಗಾಳಿ ಜನಾರ್ದನ್​​​ ರೆಡ್ಡಿ ಅಂತೂ ನಿನ್ನೆ ಸಿಸಿಬಿ ಪೊಲೀಸರಿಗೆ ಶರಣಾಗಿದ್ದರು. ರಾತ್ರಿಯಿಡೀ ಸತತ 10 ಗಂಟೆ ಕಾಲ ಸಿಸಿಬಿ, ಗಣಿ ಧಣಿ ರೆಡ್ಡಿಯನ್ನ ತೀವ್ರ ವಿಚಾರಣೆಗೆ ಒಳಪಡಿಸಿತ್ತು. ತಡರಾತ್ರಿ 2 ಗಂಟೆವರೆಗೂ ವಿಚಾರಣೆ ನಡೆದಿತ್ತು. ಈ ವೇಳೆ ರೆಡ್ಡಿ ಆಪ್ತ ಅಲಿಖಾನ್​​​ ತನ್ನ ಗುರು ಜನಾರ್ದನ ರೆಡ್ಡಿಯೊಂದಿಗೆ ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಹಾಜರಾಗಿದ್ದ. ಅಲಿಖಾನ್​​​​​​​​ ವಿಚಾರಣೆ ಮುಗಿದ ಮೇಲೂ ರೆಡ್ಡಿಯನ್ನು ಬಿಟ್ಟು ಮನೆಗೆ ಹೋಗಲಿಲ್ಲ. ಈ ಮೂಲಕ ಅಲಿಖಾನ್​, ರೆಡ್ಡಿಯ ಸಂಕಷ್ಟದ ಸಂದರ್ಭದಲ್ಲೂ​ ಸ್ವಾಮಿ ನಿಷ್ಠೆ ತೋರಿದ ಪ್ರಸಂಗ ನಡೆಯಿತು.ರೆಡ್ಡಿಯವರ ಜೊತೆಯಲ್ಲೇ ಇರ್ತೇನೆ’ರಾತ್ರಿ 2 ಗಂಟೆವರೆಗೂ ಸಿಸಿಬಿ ಪೊಲೀಸರು ರೆಡ್ಡಿ ಹೇಳಿಕೆಯನ್ನ ದಾಖಲಿಸುತ್ತಿದ್ರು. ಈ ನಡುವೆ ಎಸಿಪಿ ವೆಂಕಟೇಶ್ ಪ್ರಸನ್ನ, ಅಲಿಖಾನ್​​ನನ್ನ ಮನೆಗೆ ಹೊರಡಲು ತಿಳಿಸಿದ್ದರು. ಆದ್ರೆ ಅಲಿಖಾನ್, ರೆಡ್ಡಿಯವರನ್ನ ಬಿಟ್ಟು ತಡರಾತ್ರಿ ಒಬ್ಬನೇ ತೆರಳಲ್ಲ. ನಾನು ರೆಡ್ಡಿಯವರ ಜೊತೆಯಲ್ಲೇ ಇರ್ತೇನೆ ಎಂದ್ರು. ಈ ಹಿಂದೆಯೂ ಜನಾರ್ದನ್​​​ ರೆಡ್ಡಿ ಜಂತಕಲ್ ಮೈನಿಂಗ್ ಕೇಸ್​​ನಲ್ಲಿ ಅಲಿಖಾನ್​​​​ ಜೈಲು ಸೇರಿ ಹೊರಬಂದಿದ್ದ .

Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *