Breaking News

ಬಿಜೆಪಿಯವರು ಚುನಾವಣೆಗಾಗಿ ರಾಮನನ್ನು ಬಳಸಿಕೊಳ್ಳುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಆಕ್ರೋಶ ವ್ಯಕ್ತ….

ಹುಬ್ಬಳ್ಳಿ:ಬಿಜೆಪಿಯವರು ಚುನಾವಣೆಗಾಗಿ ರಾಮನನ್ನು ಬಳಸಿಕೊಳ್ಳುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ನಾವು ಶ್ರದ್ಧೆ, ಭಕ್ತಿಯಿಂದ ರಾಮನನ್ನ ಪೂಜೆ ಮಾಡ್ತೇವಿಕಾಂಗ್ರೆಸ್‌ನವರು ನಿಜವಾದ ಹಿಂದುಗಳು. ನಾವು ಯಾವತ್ತೂ ಕೂಡ‌ ರಾಜಕಾರಣಕ್ಕೆ ಹಿಂದುತ್ವ ಮತ್ತು ಶ್ರೀರಾಮನನ್ನ ತೆಗೆದುಕೊಂಡು ಬಂದಿಲ್ಲದೇಶದಲ್ಲಿ ಲಕ್ಷಾಂತರ ರಾಮನ ದೇವಸ್ಥಾನಗಳಿವೆ.ಬಿಜೆಪಿಯವರು ವೋಟ್‌ಗೋಷ್ಟರ್ ಶ್ರೀರಾಮನನ್ನ ನೆನಪು ಮಾಡಿಕೊಳ್ಳುತ್ತಿದ್ದಾರೆ.ಕಾಂಗ್ರೆಸ್‌ನವರು ಯಾವತ್ತಿಗೂ ದೇವರನ್ನ ಹಿಂದುತ್ವವನ್ನ ರಾಜಕಾರಣದಲ್ಲಿ ತರೋಲ್ಲ ಎಂದ ಅವರು
ಇವರಿಗೆ ಏನೂ ಬಂಡವಾಳ ಇಲ್ಲ, ಈಗಾಗಿ ಧರ್ಮವನ್ನ ತರುತ್ತಾರೆ, ರಾಮನನ್ನು ತರ್ತಾರೆ. ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವಪ್ರಹ್ಲಾದ ಜೋಶಿ ಗಿಮ್ಮಿಕ್ಕ ಮಾಡ್ತಾ ಇದ್ದಾರೆ,ಅವರು ಅಂಕಿ ಅಂಶ ಇಟ್ಟುಕೊಂಡು ಮಾತನಾಡಬೇಕುಬಿಜೆಪಿಯವರು ರಾಜಕಾರಣಕ್ಕೆ ಏನ್ ಏನೋ ಮಾತನಾಡುತ್ತಾರೆ, ಅದಕ್ಕೆ ತಲೆ ಕೆಡಿಸಿಕೊಳ್ಳುವುದು ಅವಶ್ಯಕತೆ ಇಲ್ಲ.ಬಿಜೆಪಿಯವರು ಪುಕ್ಸಟ್ಟೆಯಾಗಿ ಅಧಿಕಾರಕ್ಕೆ ಬಂದವರು, ಪುಕ್ಸಟ್ಟೆಯಾಗಿ ಏನೂ ಕೊಡಲಿಲ್ಲ.
ಬಿಜೆಪಿಯವರು ಕೆಲಸ ಮಾಡಲ್ಲ, ಕೆಲಸ ಮಾಡುವವರಿಗೂ ಬಿಡಲ್ಲ‌ ಎಂದ ಅವರು ಆಗೋದಕ್ಕೆ ಹರಕತ್ತು, ಆಗದಿದ್ದಕ್ಕೆ ಕುಮ್ಮಕ್ಕು ಎನ್ನುವುದು ಬಿಜೆಪಿಯವರ ಕಥೆ ಆಗಿದೆ. ಬಿಜೆಪಿಯವರ ಮಾತಿಗೆ ಕಿಮ್ಮತ್ತಿಲ್ಲ, ಜನ್ರು ಅವರನ್ನ ಏಕೆ‌ ಮನೆಗೆ ಕಳುಹಿಸಿದ್ರು.ಈಗ ನಾವು ಕೆಲಸ ಮಾಡ್ತಾ ಇದೇವಿ, ಪ್ರತಿದಿನ 60 ಲಕ್ಷ ಮಹಿಳೆಯರು ಫ್ರೀಯಾಗಿ ಸಂಚಾರ ಮಾಡ್ತಾರೆ.ಅವರ ಶಾಪ ಬಿಜೆಪಿಗರಿಗೆ ತಟ್ಟುತ್ತೆ ಎಂದರು. ಇನ್ನುಶಕ್ತಿ ಯೋಜನೆಯಲ್ಲಿ ನಿರೀಕ್ಷೆಗೆ ಮೀರಿ ಮಹಿಳೆಯರು ಸಂಚಾರ ಮಾಡ್ತಾ ಇದ್ದಾರೆ.84 ಲಕ್ಷದಿಂದ 1 ಕೋಟಿ 10 ಲಕ್ಷ ಜನ್ರು ಸಂಚಾರ ಮಾಡುತ್ತಿದ್ದಾರೆ. ಮೂರು ಡಿಸಿಎಮ್‌ಗಳ ಬೇಡಿಕೆ ಇಟ್ಟಿದ್ದು ಏನೂ ತಪ್ಪಿಲ್ಲ, ತೀರ್ಮಾನ ಹೈಕಮಾಂಡಗೆ ಬಿಟ್ಟಿದ್ದು ಎಂದರು

Share News

About BigTv News

Check Also

ಎನಿ ಕಂಡೀಶನ್… ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ ಎಂಟ್ರಿ! ಬೆಳಗ್ಗೆಯೇ ಅಧಿಕಾರ ಸ್ವೀಕಾರ…!

ಭೂಷಣ್ ಬೋರ್ಸೆ ಹೆಗಲಿಗೆ ಅವಳಿ ನಗರದ ಖಾಕಿ ಹೊಣೆ! ನಾಳೆಯಿಂದ ಹುಬ್ಬಳ್ಳಿ–ಧಾರವಾಡಕ್ಕೆ ಹೊಸ ಕಮಿಷನರ್! ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ …

Leave a Reply

Your email address will not be published. Required fields are marked *