ತ್ರಿವಳಿ ತಲಾಖ್ ವಿಚಾರ ಸಾಕಷ್ಟು ರಾಜಕೀಯ ಜಗ್ಗಾಟಕ್ಕೆ ಕಾರಣವಾಗಿತ್ತು. ಅದ್ರಲ್ಲೂ ವಿರೋಧ ಪಕ್ಷಗಳು, ತ್ರಿವಳಿ ತಲಾಖೆ ಮಸೂದೆಯಲ್ಲಿ ಹಲವು ಬದಲಾವಣೆಗಳನ್ನ ಮಾಡಬೇಕು ಅಂತ ಪಟ್ಟು ಹಿಡಿದಿದ್ದವು. ಆದ್ರೆ, ಇದಕ್ಕೆ ಬಿಜೆಪಿ ಮಾತ್ರ ಜಗ್ಗಿರಲಿಲ್ಲ. ಇನ್ನು, ತ್ರಿವಳಿ ತಲಾಖ್ ವಿಚಾರವಾಗಿ ಕಳೆದ ಬಾರಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧ ಅನಂತಕುಮಾರ್ ಚಾಟಿ ಬೀಸಿದ್ದರು. ತ್ರಿವಳಿ ತಲಾಖ್ ವಿಧೇಯಕ ಅಂಗೀಕಾರಕ್ಕೆ ಅಸಹಕಾರ ನೀಡುವ ಮೂಲಕ ಮಹಿಳೆಯರಿಗೆ ಕಾಂಗ್ರೆಸ್ ಅನ್ಯಾಯ ಎಸಗುತ್ತಿದೆ ಎಂದು ಗುಡುಗಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





