Breaking News

ಸಲ್ಮಾನ್ ಖುರ್ಷಿದ್ ಭಾವಚಿತ್ರ ದಹಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಧಾರವಾಡ: ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವರಾದ ಸಲ್ಮಾನ್ ಖುರ್ಷೀದ್‌ರವರ ಬರೆದ ಪುಸ್ತಕದಲ್ಲಿ ಹಿಂದುತ್ವದ ವಿರುದ್ಧ ಅವಹೇಳನಕಾರಿ ಬರಹ ವಿರೋಧಿಸಿ, ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರು ಬಿದುಗೆ ಇಳಿದು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹುಬ್ಬಳ್ಳಿ ಧಾರವಾಡ ಮಾಹಾನಗರ ಬಿಜೆಪಿ ಮಾಧ್ಯಮ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಸಲ್ಮಾನ್ ಖುರ್ಷಿದ್ ಈ ವೇಳೆ ಧಿಕ್ಕಾರ ಕೂಗಿ, ಅವರ ಭಾವಚಿತ್ರ ದಹಿಸಿ ಆಕ್ರೋಶ ಹೊರಹಾಕಿದರು.

ಸಲ್ಮಾನ್ ಖುರ್ಷಿದ್‌ರವರು ಉದ್ದೇಶ ಪೂರ್ವಕವಾಗಿಯೇ ತಾವು ಬರೆದ ಪುಸ್ತಕದಲ್ಲಿ ಹಿಂದೂಗಳನ್ನು ಅವಹೇಳನ ಮಾಡಿದ್ದಾರೆ. ಈ ಹಿಂದಿನಿಂದಲೂ ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಒಂದಿಲ್ಲೊಂದು ವಿವಾದ ಹಿಟ್ಟಿಸುತ್ತಲ್ಲೇ ಬರುತ್ತಿದ್ದಾರೆ. ಈಗಲೂ ಅದನ್ನ ಮುಂದುವರೆಸಿದ್ದಾರೆ. ಹಿಂದೂ ಸಮುದಾಯ ವಿರೋಧಿ ಪುಸ್ತಕ “ಸನರೈಸ್ ಒವರ್ ಅಯೋದ್ಯಾ: ನೇಶನಹುಡ್ ಇನ್ ಅವರ್ ಟೈಮೆಸ್” ಎಂಬ ಪುಸ್ತಕದಲ್ಲಿ ಹಿಂದುಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಕೀಡಿಕಾರಿದರು.

ಪುಸ್ತಕದಲ್ಲಿ ಹಿಂದೂಗಳನ್ನು ಐಎಸ್ಐಎಸ್ ಹಾಗೂ ಬೊಕೊ ಹರಾಮ್ ಆತಂಕವಾದಿ‌ ಸಂಘಟನೆಗೆ ಹೋಲಿಸಿಲಾಗಿದೆ. ಇದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದ್ದು, ಕೂಡಲೇ‌ ಸಲ್ಮಾನ ಖುರ್ಷಿದ್ ಅವರು ಹಿಂದುಗಳು ಕ್ಷಮೆಯಾಚನೆ ಮಾಡಬೇಕು. ಜೊತೆಗೆ ಸರ್ಕಾರಗಳು ಈ ಪುಸ್ತಕವನ್ನು ಆನ್ಲೈನನಲ್ಲಿ ಪ್ರಕಟಗೊಳ್ಳದಂತೆ ತಡೆಹಿಡಿಯಬೇಕು ಎಂದು ಅಗ್ರಹಿಸಿದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಇದೇವೇಳೆ ಎಚ್ಚರಿಕೆ ನೀಡಿದರು.

Share News

About BigTv News

Check Also

ಧಾರವಾಡದಲ್ಲಿ ದಾಳಿ ದಂಧೆ!ಯುವ ಕಾಂಗ್ರೆಸ್ ಮುಖಂಡ ಪೈರೋಜ್‌ಖಾನ ಪಠಾಣ ಮನೆಗೆ ನುಗ್ಗಿ ಹತ್ಯೆ…

Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ …

Leave a Reply

Your email address will not be published. Required fields are marked *