ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ಅವರ ಅಂತ್ಯಸಂಸ್ಕಾರಕ್ಕೆ ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಸಕಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ನಿಗದಿಯಂತೆ ಇಂದು ಮಧ್ಯಾಹ್ನ ಅನಂತ ಕುಮಾರ್ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎನ್ನಲಾಗಿತ್ತು. ಆದರೆ 2.50 ರಿಂದ 4.20 ವರೆಗೆ ರಾಹುಕಾಲ ಇದೆ. ಈ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ಅಂದ್ರೆ ರಾಹುಕಾಲ ಮುಗಿದ ಬಳಿಕ ಅನಂತ ಕುಮಾರ್ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.ರಾಹುಕಾಲ ಮುಗಿದ ಬಳಿಕ ಚಾಮರಾಜಪೇಟೆಯ ಟಿಆರ್ ಮಿಲ್ನ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಬ್ರಾಹ್ಮಣ ಸಮುದಾಯದ ಆಶ್ವಲಾಯನ ಸ್ಮಾರ್ತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದ್ದು, ಮನೆಯಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗಿರುವ ಕಾರಣ ಮನೆಯಲ್ಲಿ ಮಾಡುವ ಎಲ್ಲಾ ಧಾರ್ಮಿಕ ಕಾರ್ಯಗಳು ಚಿತಾಗಾರದಲ್ಲಿ ಮಾಡಲಾಗುತ್ತದೆ. ಅನಂತಕುಮಾರ್ ಅವರಿಗೆ ಗಂಡು ಮಕ್ಕಳು ಇಲ್ಲದ ಕಾರಣ ಎಲ್ಲಾ ವಿಧಿ ವಿಧಾನಗಳನ್ನು ಅನಂತಕುಮಾರ್ ಸಹೋದರ ನಂದಕುಮಾರ್ ನಿರ್ವಹಿಸಲಿದ್ದಾರೆ.ಇನ್ನು, ಚಿತಾಗಾರದಲ್ಲಿ 45 ನಿಮಿಷಗಳ ಕಾಲ ಅಂತಿಮ ವಿಧಿ ವಿಧಾನಗಳು ನಡೆಯಲಿವೆ. ಶಾಸ್ತ್ರ ಸಂಪ್ರದಾಯ, ಪ್ರಾಯಶ್ಚಿತ್ತ ಸಂಕಲ್ಪ ಮಾಡಲಾಗುತ್ತದೆ. ಚಿತೆಯ ಮೇಲೆ ಪಾರ್ಥಿವ ಶರೀರವನ್ನು ಮಲಗಿಸಿದ ಬಳಿಕ ದಹ್ಯಮಾನ ಮಂತ್ರ ಪಠಣ ಮಾಡಲಾಗುತ್ತದೆ. ನಂತರ ಶವದ ಬಲಭಾಗಕ್ಕೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ. ಈ ಎಲ್ಲಾ ವಿಧಿ ವಿಧಾನಗಳು ಪುರೋಹಿತ ಎಂ.ಜಿ.ಶ್ರೀನಾಥ್ ರ ನೇತೃತ್ವದಲ್ಲಿ ನಡೆಯಲಿದೆ. ಬಳಿಕ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನೆರವೇರಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





