Breaking News

ಗುಂಡಿಕ್ಕಿ ಪಾಕಿಸ್ತಾನಿ ಉಗ್ರನ ಹತ್ಯೆ , ಭಾರೀ ಪ್ರಮಾಣದ ಶಸಾಸ್ತ್ರ ವಶ..

ಅಕ್ನೂರು ಸೆಕ್ಟರ್ : ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಅಕ್ನೋರು ವಲಯದ ಭಾರೀ ಶಸಾಸ್ತ್ರ ಹೊಂದಿದ್ದ ಪಾಕಿಸ್ತಾನದ ಉಗ್ರನೊಬ್ಬನನ್ನು ಭಾರತೀಯ ಸೇನೆ ಗುಂಡಿಕ್ಕಿ ಹತ್ಯೆ ಮಾಡಿದೆ.ಆತನಿಂದ ಐದು ಬಂದೂಕುಗಳು, 10 ಬಂದೂಕು ಮ್ಯಾಗಜೀನ್ ಗಳು, 60 ಬುಲೆಟ್ ಗಳು, ಒಂದು ಎಕೆ ದಾಳಿ ಬಂದೂಕು, 234 ಸುತ್ತು ಯುದ್ಧ ಸಾಮಾಗ್ರಿಗಳು, 15 ಕೈ ಗ್ರೆನೇಡ್ಸ್ , ಸೇರಿದಂತೆ ಭಾರೀ ಪ್ರಮಾಣದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಇಡೀ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿದ್ದು, ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂಬುದು ತಿಳಿದುಬಂದಿದೆ.ಚುನಾವಣೆ ಸಂದರ್ಭದಲ್ಲಿ ಶಾಂತಿ ಕದಡುವ ನಿಟ್ಟಿನಲ್ಲಿ ಉಗ್ರರು ದಾಳಿ ನಡೆಸುವ ಸಂಚು ರೂಪಿಸಿರುವ ಸಾಧ್ಯತೆ ಕಂಡುಬಂದಿದೆ.ಅಕ್ರಮ ಒಳನುಸುವಿಕೆ ಕಾರ್ಯಾಚರಣೆಯನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸುತ್ತಿದ್ದು, ಜಮ್ಮು-ಕಾಶ್ಮೀರದ ಪಿರ್ ಪಂಜಲ್ ವಲಯ ವ್ಯಾಪ್ತಿಯಲ್ಲಿ ಶತ್ರು ರಾಷ್ಟ್ರ ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿದೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *