ಹೈದರಾಬಾದ್: ಇದನ್ನು ತಮಾಷೆ ಅಂತೀರೋ ಅಥವಾ ಸೀರಿಯಸ್ ಅಂತೀರೋ ನಿಮಗೇ ಬಿಟ್ಟಿದ್ದು. ಯಾಕಂದ್ರೆ, ಇದು ಒಂದು ಮುತ್ತಿನ ಕಥೆ. ಅದೂ ಬಹಿರಂಗವಾಗಿ ನೀಡಿದ ಕಿಸ್ ಕಹಾನಿ. ಅದೂ ಯಾರಿಗೆ ಕಿಸ್ ಮಾಡಿದ್ದು ಗೊತ್ತಾ? ಖ್ಯಾತ ಟಾಲಿವುಡ್ ನಟಿ ಕಾಜಲ್ ಅಗರ್‌ವಾಲ್‌ಗೆ! ಕಿಸ್ ಕೊಟ್ಟ ವ್ಯಕ್ತಿ ಮತ್ತ್ಯಾರೋ ಅಲ್ಲ, ಸ್ಟಾರ್ ಛಾಯಾಗ್ರಾಹಕ..ಅಷ್ಟಕ್ಕೂ ನಡೆದಿದ್ದಿಷ್ಟು?ತೆಲುಗು ಚಿತ್ರೋದ್ಯಮದ ಪ್ರಖ್ಯಾತ ಛಾಯಾಗ್ರಾಹಕ ಛೋಟಾ ನಾಯ್ಡು, ಕವಚಂ ಸಿನಿಮಾದ ಟೀಸರ್ ಲಾಂಚ್ ವೇಳೆ ವೇದಿಕೆ ಮೇಲೆಯೇ ಕಾಜಲ್ ಅಗರ್‌ವಾಲ್ ಗಲ್ಲಕ್ಕೆ ಮುತ್ತು ಕೊಟ್ಟರು. ನೋಡ ನೋಡುತ್ತಿದ್ದಂತೆ ಅಲ್ಲಿದ್ದವರಿಗೆಲ್ಲಾ ಶಾಕ್. ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ನಡೆದ ಈ ಅಪರೂಪದ ಘಟನೆಯಿಂದ ಎಲ್ಲರೂ ಒಂದು ಕ್ಷಣ ದಂಗಾದರು.ಬೆಲ್ಲಂಕೊಂಡ ಶ್ರೀನಿವಾಸ್ ಹಾಗೂ ಕಾಜಲ್ ಅಗರ್‌ವಾಲ್ ನಟನೆಯ ಕವಚಂ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ಕಾಜಲ್ ಚಿತ್ರತಂಡದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಅವರು ಚಿತ್ರದ ಛಾಯಾಗ್ರಾಹಕ ಛೋಟಾ ಕೆ ನಾಯ್ಡು ಬಗ್ಗೆ ಹಾಡಿ ಹೊಗಳುತ್ತಿದ್ದರು. ಈ ವೇಳೆ ಕಾಜಲ್ ಹತ್ತಿರ ಹೋದ ನಾಯ್ಡು ಹಗ್ ಮಾಡಿದರು. ಜೊತೆಗೆ.. ಕಾಜಲ್ ಸೊಂಟ ಬಳಸಿ ಆಕೆಯ ಗಲ್ಲಕ್ಕೆ ಮುತ್ತು ಕೊಟ್ಟರು. ಒಂದು ಕ್ಷಣ ಕಾಜಲ್ಗೆ ಶಾಕ್, ಆಶ್ಚರ್ಯಗೊಂಡರು. ಈ ವಿಡಿಯೋ ಈಗ ವೈರಲ್ ಆಗಿದೆ. ಆದ್ರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ ಕಾಜಲ್ ಅಗರ್‌ವಾಲ್, ಛೋಟಾ ನಾಯ್ಡು ನಮ್ಮ ಕುಟುಂಬ ಸದಸ್ಯರಿದ್ದಂತೆ! ಅನ್ಯತಾ ಭಾವಿಸೋದು ಬೇಡ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





