ನವದೆಹಲಿ: ಹೆರಿಗೆಗೆ ಹೋಗಲು ಮಹಿಳಾ ನೌಕರರಿಗೆ ವೇತನ ಸಹಿತ ಇಷ್ಟೊಂದು ರಜೆ ಕೊಡಬೇಕಾ ಅಂತ ಶಾಕ್ ಆಗಿದ್ದ ಕಂಪನಿಗಳಿಗೆ ಕೇಂದ್ರ ಸರ್ಕಾರ ಸಮಾಧಾನಕರ ಸುದ್ದಿಯೊಂದನ್ನ ನೀಡಿದೆ.ಹೆರಿಗೆಗೆ ತೆರಳುವ ಮಹಿಳಾ ನೌಕರರಿಗೆ 26 ವಾರಗಳ ರಜೆ ನೀಡಬೇಕು ಅಂತ ಕೇಂದ್ರ ಸರ್ಕಾರ ನಿಯಮ ಮಾಡಿತ್ತು. ಇದರಲ್ಲಿ ಮೊದಲ 7 ವಾರಗಳ ಅವರ ವೇತವನ್ನೂ ತಾನೇ ಭರಿಸೋದಾಗಿ ಈಗ ಕೇಂದ್ರ ಹೇಳಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಈ ಯೋಜನೆ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ವಲಯಕ್ಕೂ ಅನ್ವಯಿಸುತ್ತೆ ಅಂತ ಹೇಳಿದೆ.ರಾಜ್ಯ ಸರ್ಕಾರಗಳು ಕಾರ್ಮಿಕ ಕಲ್ಯಾಣ ಸೆಸ್ ಬಳಕೆ ಮಾಡುವಲ್ಲಿ ಹಿಂದೆ ಬಿದ್ದಿವೆ. ಹೀಗಾಗಿ ಇದರಿಂದಲೇ 15,000 ರೂಪಾಯಿಗಿಂತಲೂ ಹೆಚ್ಚು ವೇತನ ಪಡೆಯುತ್ತಿರುವ ನೌಕರರಿಗೆ ನೀಡುವ ರಜೆಯಲ್ಲಿ 7 ವಾರಗಳ ವೇತನವನ್ನ ನೀಡೋದಾಗಿ ಕೇಂದ್ರ ಸರ್ಕಾರ ಹೇಳಿದೆ. ಇತ್ತೀಚಿಗಷ್ಟೇ ಈ ಹಿಂದಿದ್ದ 12 ವಾರಗಳ ಮೆಟರ್ನಿಟಿ ಲೀವ್ ಅವಧಿಯನ್ನ 26 ವರ್ಷಕ್ಕೆ ಏರಿಸಲಾಗಿತ್ತು. ಈ ಆದೇಶ ಹೊರ ಬರ್ತಿದ್ದಂತೆ ಗರ್ಭಿಣಿಯರನ್ನ ಕೆಲಸಕ್ಕೆ ತೆಗೆದುಕೊಳ್ಳಲು ಹಲವು ಸಂಸ್ಥೆಗಳು ಹಿಂದೆ ಮುಂದೆ ನೋಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆಯೊಂದಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





