ಹುಬ್ಬಳ್ಳಿ :ಇತ್ತೀಚಿಗೆ ೫೪೫ ಕರ್ನಾಟಕ ಪೊಲೀಸ್ ಸಬ್ಇನ್ಸಪೆಕ್ಟರ್ (ಸಿವಿಲ್) ಅಭ್ಯರ್ಥಿಗಳ ನೇಮಕಾತಿಯಲ್ಲಿ ಭಾರಿ ಪ್ರಮಾಣದ ಅಕ್ರಮವಾಗಿದ್ದು, ಈ ತನಿಖೆಯ ನ್ನು ಸಿಬಿಐ ಗೆ ಒಪ್ಪಿಸಬೇಕೆಂದು ಆಮ್ ಆದ್ಮಿ ಪಕ್ಷದ ಸಂಚಾಲಕ ವಿಕಾಸ ಸೊಪ್ಪಿನ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಕ್ರಮ ವಿಷಯವಾಗಿ ಸಾವಿರಾರು ನೊಂದ ವಿದ್ಯಾರ್ಥಿಗಳು ಧಾರವಾಡದ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳಿಗೆ ಭೇಟಿಯಾಗಿ ಮನವಿ ಸಲ್ಲಿಸಿದ್ದು, ಈ ವರೆಗೆ ವಿದ್ಯಾರ್ಥಿಗಳು ಬೃಹತ್ ಧರಣಿ ಸತ್ಯಾಗ್ರಹ ಮಾಡಿದ್ದಾರೆ ಎಂದರು.
ಸಿಐಡಿ ತನ್ನ ತನಿಖೆಯಲ್ಲಿ ಬಿಜೆಪಿಯ ಮಹಿಳಾ ಘಟಕದ ಮುಖಂಡೆಯಾದ ದಿವ್ಯಾ ಹಾಗರಗಿ ಪ್ರಮುಖ ಆರೋಪಿ ಎಂದು ಪರಿಗಣಿಸಿದ್ದು, ತಪ್ಪಿತಸ್ಥರ ಮೇಲೆ ಸೂಕ್ತ ತನಿಖೆಗೆ ಒತ್ತಾಯಿಸುತ್ತೇವೆ.
ದಿವ್ಯಾ ಹಾಗರಗಿ ಗೃಹ ಸಚಿವರ ನಿಕಟವರ್ತಿಗಳು ಆಗಿದ್ದರಿಂದ ಹಾಗೂ ಸೇವಾ ಆಯೋಗದ ಪರೀಕ್ಷೆಗಳು ರಾಜ್ಯ ಸರ್ಕಾರದ ಅಡಿಯಲ್ಲಿ ಇರುವುದರಿಂದ ಗೃಹ ಸಚಿವರು ತಮ್ಮ ರಾಜೀನಾಮೆ ನೀಡಿ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಆಗದೇ ನಿಗಾವಹಿಸಬೇಕು.
ಈ ತನಿಖೆಯ ಮುಖಾಂತರ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಟ್ಟು ವಿದ್ಯಾರ್ಥಿಗಳ ನಂಬಿಕೆ ಉಳಿಸಿಕೊಳ್ಳಬೇಕೆಂದು ಕೇಳಿಕೊಳ್ಳತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಅನಂತಕುಮಾರ ಬುಗಡಿ, ರೇವಣಸಿದ್ದಪ್ಪ ಹುಬ್ಬಳ್ಳಿ, ಹಿಜಾಜ್ ರೆಹಮಾನ್ ಶೇಖ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

