ನವದೆಹಲಿ : ಸದನದಲ್ಲಿಂದು ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡುತ್ತಿದ್ದು, ಈ ಸಂಬಂಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ ಹೊರಗಡೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫ್ಲೈಯಿಂಗ್ ಕಿಸ್ ನೀಡಿ ರಾಹುಲ್ ಸದನದಿಂದ ಹೊರನಡೆದಿದ್ದಾರೆ. ಇದು ಸಂಸದರ ಅನುಚಿತ ವರ್ತನೆ ಎಂದಿದ್ದಾರೆ.
ಭಾರತದ ಸಂಸತ್ ಇತಿಹಾಸದಲ್ಲೇ ಈ ರೀತಿ ಆಗಿರಲಿಲ್ಲ. ಇದು ಅನುಚಿತ ಮತ್ತು ಅಸಭ್ಯ ವರ್ತನೆಯಾಗಿದೆ. ಇದೆಂತ ವರ್ತನೆ..? ಅವರೆಂಥ ನಾಯಕ? ಸದನದಲ್ಲಿನರುವ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲಿಸಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನಾವು ಬೇಡಿಕೆ ಇಟ್ಟಿದ್ದೇವೆ. ಇದಕ್ಕೆ ಹಿರಿಯ ಸದಸ್ಯರು ಸಹ ಸಮ್ಮತಿ ನೀಡಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಸದನದಲ್ಲಿ ಸಂಸದರೊಬ್ಬರ ಇಂತಹ ವರ್ತನೆಯನ್ನು ನಾವು ನೋಡಿದ್ದು ಇದೇ ಮೊದಲು. ಸದನದಲ್ಲಿ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡುವ ಸನ್ನೆ ಮಾಡಿದರು, ಇದನ್ನು ಎಂದಿಗೂ ಒಪ್ಪಲಾಗದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್‌ಗೆ ದೂರು ನೀಡಿದ್ದೇವೆ ಎಂದಿದ್ದಾರೆ
ಇದಕ್ಕೂ ಮೊದಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಂಸತ್ ಇತಿಹಾಸದಲ್ಲಿ ಈ ರೀತಿ ಎಂದೂ ನಡೆದಿಲ್ಲ. ಸ್ತ್ರೀ ದ್ವೇಷಿ ಪುರುಷ ಮಾತ್ರ ಈ ರೀತಿ ಮಾಡಲು ಸಾಧ್ಯ ಎಂದಿದ್ದರು
bigtvnews | Hubli Dharwad News | Kannada News | Karnataka News Hubli News | News In Hubli | Local news





