Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

SBI ALERT! ಎರಡೇ ದಿನದಲ್ಲಿ ಬಂದ್ ಆಗಲಿದೆ ಎಸ್‌ಬಿಐ ನ ಈ 4 ಸೇವೆಗಳು..

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ನೀವಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಮುಂದಿನ ಎರಡು ದಿನಗಳಲ್ಲಿ ಎಸ್ಬಿಐ 4 ದೊಡ್ಡ ಸೇವೆಗಳನ್ನು ಬಂದ್ ಮಾಡಲಿದೆ. ಡಿಸೆಂಬರ್ 1 ರಂದು, ಎಸ್‌ಬಿಐನ ಕೆಳಗೆ ಸೂಚಿಸಲಾದ ನಾಲ್ಕು ಸೇವೆಗಳನ್ನು ನೀವು ಬಳಸಲು ಸಾಧ್ಯವಾಗುವುದಿಲ್ಲ. ಎಸ್‌ಬಿಐ ಸೇವೆಗಳಲ್ಲಿ ಡಿಸೆಂಬರ್ 1 ರಿಂದ ಆಗುವ ಬದಲಾವಣೆಗಳ ಬಗ್ಗೆ ತಿಳಿಯಲು ಮುಂದೆ ಓದಿ.ಬಂದ್ ಆಗಲಿದೆ ಎಸ್‌ಬಿಐ ನೆಟ್ ಬ್ಯಾಂಕಿಂಗ್:ನವೆಂಬರ್ ಕೊನೆಯೊಳಗೆ ಬ್ಯಾಂಕ್ ಖಾತೆ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಲು ಬ್ಯಾಂಕ್ ಸೂಚಿಸಿದೆ. ಎಲ್ಲ ಎಸ್‌ಬಿಐ ಗ್ರಾಹಕರೂ ನವೆಂಬರ್ 30ರೊಳಗೆ ನಿಮ್ಮ ಮೊಬೈಲ್ ನಂಬರನ್ನು ಬ್ಯಾಂಕ್ ಗೆ ನೀಡಬೇಕು. ನಿಗದಿತ ಸಮಯದಲ್ಲಿ ನೀವು ಈ ಕೆಲಸ ಮಾಡದೆ ಹೋದಲ್ಲಿ ಬ್ಯಾಂಕ್ ನಿಮ್ಮ ಖಾತೆಯನ್ನು ರದ್ದು ಮಾಡುವ ಸಾಧ್ಯತೆಯಿದೆ. ನಿಮ್ಮ ಖಾತೆಯಿಂದ ಆನ್ಲೈನ್ ಮೂಲಕ ಯಾವುದೇ ವ್ಯವಹಾರ ನಡೆಸಲು ಸಾಧ್ಯವಾಗುವುದಿಲ್ಲ.ಬ್ಯಾಂಕ್ ತನ್ನ ವೆಬ್ಸೈಟ್ ನಲ್ಲಿಯೂ ಈ ಬಗ್ಗೆ ಮಾಹಿತಿ ನೀಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗಸೂಚಿಯಂತೆ ನೀವು ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಪಡೆಯುತ್ತಿದ್ದರೆ ಬ್ಯಾಂಕ್ ಖಾತೆಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಅನಿವಾರ್ಯವೆಂದು ಬ್ಯಾಂಕ್ ಹೇಳಿದೆ.ಎಸ್‌ಬಿಐ ಮೊಬೈಲ್ ವ್ಯಾಲೆಟ್ ಬಡ್ಡಿ ಸೇವೆ ಬಂದ್:ಎಸ್‌ಬಿಐ ಬಡ್ಡಿ ಮೊಬೈಲ್ ವ್ಯಾಲೆಟ್ ಸೇವೆಯು ನ.30 ಕ್ಕೆ ಬಂದ್ ಆಗಲಿದೆ. ಇದರ ಬದಲಿಗೆ 2017 ರ ಕೊನೆ ಅವಧಿಯಲ್ಲಿ ಚಾಲ್ತಿಗೆ ಬಂದಿರುವ ಎಸ್‌ಬಿಐ ಯೋನೋ ಅನ್ನು ಮುಂದುವರಿಸುವ ಬಗ್ಗೆ ನಿರ್ಧರಿಸಲಾಗಿದೆ ಎಂದು ಎಸ್‌ಬಿಐ ತಿಳಿಸಿದೆ. ಯಾವುದೇ ಹಣ ಜಮಾವಣೆ ಆಗದ ಮೊಬೈಲ್ ವ್ಯಾಲೆಟ್‌ಗಳು ಈಗಾಗಲೇ ಮುಚ್ಚಲ್ಪಡುತ್ತಿವೆ. ಆದರೆ, ವ್ಯಾಲೆಟ್‌ನಲ್ಲಿನ ಬ್ಯಾಲೆನ್ಸ್ ಅನ್ನು ಹೇಗೆ ಮತ್ತು ಯಾವಾಗ ಬಂದ್ ಮಾಡಲಾಗುತ್ತದೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.ಜೀವನ ಪ್ರಮಾಣಪತ್ರ ಸಲ್ಲಿಸದಿದ್ದರೆ ಪಿಂಚಣಿ ಇಲ್ಲ:ನೀವು ಅಥವಾ ನಿಮ್ಮ ಕುಟುಂಬದ ಯಾವುದೇ ಸದಸ್ಯರು ನಿವೃತ್ತರಾಗಿದ್ದರೆ ಮತ್ತು ಅವರ ಪಿಂಚಣಿ ಎಸ್‌ಬಿಐನ ಯಾವುದೇ ಶಾಖೆಗೆ ಬರುತ್ತಿದ್ದರೆ, ನಂತರ ನೀವು ನವೆಂಬರ್ 30 ರೊಳಗೆ ನಿಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು. ನವೆಂಬರ್ 30, 2018 ಒಳಗೆ ತಮ್ಮ ಜೀವನ ಪ್ರಮಾಣಪತ್ರಗಳನ್ನು ಸಲ್ಲಿಸಲು ಬ್ಯಾಂಕ್ ಎಲ್ಲಾ ಪಿಂಚಣಿದಾರರಿಗೆ ಮಾಹಿತಿ ಸೂಚಿಸಿದೆ. ನವಂಬರ್ 30 ರೊಳಗೆ ಜೀವನ ಪ್ರಮಾಣಪತ್ರವನ್ನು ಸಲ್ಲಿಸದಿದ್ದರೆ ಪಿಂಚಣಿ ಪಡೆಯಲು ತೊಂದರೆಯಾಗಬಹುದು.ಪಿಂಚಣಿ ಸಾಲದ ಸೌಲಭ್ಯ ಕೊನೆಗೊಳ್ಳಲಿದೆ:ಎಸ್‌ಬಿಐ ಪಿಂಚಣಿ ಪಡೆಯುವವರಿಗೆ ಹಬ್ಬದ ಋತುವಿನಲ್ಲಿ ಸಾಲ ನೀಡುವ ಸೌಲಭ್ಯವನ್ನು ಪ್ರಾರಂಭಿಸಲಾಯಿತು. ಎಸ್‌ಬಿಐನ ಯಾವುದೇ ಶಾಖೆಯಲ್ಲಿ ಪಿಂಚಣಿ ಬರುವವರಿಗೆ ಈ ಪ್ರಸ್ತಾಪವನ್ನು ನೀಡಲಾಗಿತ್ತು. ಈ ಯೋಜನೆಯಡಿಯಲ್ಲಿ ಯಾವುದೇ ಪ್ರಕ್ರಿಯೆ ಶುಲ್ಕವಿಲ್ಲದೆ ಸಾಲ ಸೌಲಭ್ಯ ನೀಡಲಾಗಿತ್ತು. ಬ್ಯಾಂಕ್ ಪ್ರಕಾರ, 76 ವರ್ಷದೊಳಗಿನ ಕೇಂದ್ರ, ರಾಜ್ಯ ಮತ್ತು ಸೇನೆಯಿಂದ ನಿವೃತ್ತಿ ಹೊಂದಿದ ನಿವೃತ್ತಿ ವೇತನದಾರರಿಗೆ ಈ ಪ್ರಸ್ತಾಪವನ್ನು ಪ್ರಾರಂಭಿಸಲಾಗಿತ್ತು. ಈ ಸೇವೆ ನವೆಂಬರ್ 30 ರಂದು ಕೊನೆಗೊಳ್ಳಲಿದೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *