ದೆಹಲಿ: ಕಪ್ಪುಹಣ ತಡೆಗಟ್ಟುವಲ್ಲಿ ನೋಟ್‌ಬ್ಯಾನ್ ಯಾವುದೇ ಪರಿಣಾಮ ಬೀರಿಲ್ಲ ಅಂತ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಪಿ ರಾವತ್ ತಿಳಿಸಿದ್ದಾರೆ. ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು, ಕೆಲ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಈ ಬಾರಿ ದಾಖಲೆ ಪ್ರಮಾಣದಲ್ಲಿ ಹಣವನ್ನು ಸೀಜ್ ಮಾಡಿದ್ದೇವೆ. ಹೀಗಾಗಿ ನೋಟ್ ಬ್ಯಾನ್ ನಿರ್ಧಾರ ಕಪ್ಪು ಹಣ ತಡೆಗಟ್ಟುವಲ್ಲಿ ಪರಿಣಾಮ ಬೀರಿಲ್ಲ ಅಂತ ಹೇಳಿದ್ದಾರೆ. 5 ರಾಜ್ಯಗಳ ಚುನಾವಣೆ ವೇಳೆಯಲ್ಲಿ 200 ಕೋಟಿ ರೂ.ಹಣ ವಶಪಡಿಸಿಕೊಂಡಿದ್ದು ಪ್ರಭಾವಿ ವ್ಯಕ್ತಿಗಳ ಮೂಲದಿಂದಲೇ ಕಪ್ಪುಹಣ ಪತ್ತೆಯಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೆ ಚುನಾವಣೆಗೆ 17 ಲಕ್ಷ ಇವಿಎಂಗಳನ್ನು ಬಳಸಿಕೊಳ್ಳಲಾಗಿದ್ದು, ಒಂದು ವೇಳೆ ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸಬೇಕಿದ್ದರೆ 34 ಲಕ್ಷ ಇವಿಎಂಗಳ ಅಗತ್ಯವಿದೆ. ಎಲ್ಲಾ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಿದ್ದೇವೆ ಅಂತ ಹೇಳಿದ್ದಾರೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





