Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಅರುಣ್​ ಜೇಟ್ಲಿ ರಾಜೀನಾಮೆಗೆ ರಾಹುಲ್​​ಗಾಂಧಿ ಆಗ್ರಹ..

ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ. 8 ತಿಂಗಳ ಹಿಂದೆ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ವಂಚನೆ ಪ್ರಕರಣದ ಆರೋಪಿ ನೀರವ್​ ಮೋದಿ ಮತ್ತು ಮೆಹುಲ್ಸ್​ ಚೊಕ್ಸಿ ದೇಶ ಬಿಟ್ಟು ಪರಾರಿಯಾಗ್ತಾರೆ ಎಂದು ಸರ್ಕಾರಕ್ಕೆ ಮೊದಲೇ ತಿಳಿದಿತ್ತು. ಆದ್ರೂ ಅರುಣ್​ ಜೇಟ್ಲಿ ಮಗಳು, ಚೋಕ್ಸಿ ಮತ್ತು ನೀರವ್​ ಮೋದಿ ಪರ ವಕೀಲೆ ಎಂಬ ಕಾರಣಕ್ಕೆ ಅವರಿಬ್ಬರನ್ನು ಬಂಧಿಸಲಿಲ್ಲ ಎಂದು ರಾಹುಲ್​ ಗಾಂಧಿ ಟ್ವೀಟ್​ ಮೂಲಕ ಆರೋಪ ಮಾಡಿದ್ದಾರೆ. ಹಾಗಾಗಿ ಅರುಣ್​ ಜೇಟ್ಲಿ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ರಾಹುಲ್​ ಆಗ್ರಹಿಸಿದ್ದಾರೆ.ಈ ಹಿಂದೆ ಕಾಂಗ್ರೆಸ್​ ವಕ್ತಾರ ರಣ್​ದೀಪ್​ ಸಿಂಗ್​ ಸುರ್ಜೇವಾಲಾ, 8 ತಿಂಗಳ ಹಿಂದೆ ನೀರವ್​ ಮೋದಿ ಹಾಗೂ ಚೋಕ್ಸಿಯ ಕೋಟಿ ಕೋಟಿ ವಂಚನೆ ಬಗ್ಗೆ ಆದಾಯ ತೆರಿಗೆ ಇಲಾಖೆ ಪ್ರಧಾನಿಗೆ ಮಾಹಿತಿ ನೀಡಿದ್ರು. ಆದ್ರೂ ಮೋದಿ ಅವರಿಬ್ಬರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದ್ದರು. ಇದ್ರ ಬೆನ್ನಲ್ಲೇ ಇದೀಗಾ ರಾಹುಲ್​ ಗಾಂಧಿ ಅರುಣ್​ ಜೇಟ್ಲಿ ರಾಜೀನಾಮೆ ಕೊಡಬೇಕೆಂದು ಟ್ವೀಟ್​ ಮಾಡಿದ್ದಾರೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *