ದೆಹಲಿಯಲ್ಲಿ 30 ಲಕ್ಷ ಮತದಾರರ ಹೆಸರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪ ಮಾಡಿದೆ. ಈ ಹಿನ್ನೆಲೆ ಸದ್ಯದಲ್ಲೇ ಮತದಾರರ ಮನೆಮನೆಗೆ ತೆರಳಿ ಕ್ಯಾಂಪೇನ್ ಪ್ರಾರಂಭ ಮಾಡೋದಾಗಿ ಆಪ್ ತಿಳಿಸಿದೆ. ಈ ಕುರಿತು ಮಾತನಾಡಿದ ಆಪ್ ಮುಖ್ಯಸ್ಥೆ ಅತಿಶಿ, ದೆಹಲಿಯಲ್ಲಿ ಮತದಾರರ ಪಟ್ಟಿಯಿಂದ 30 ಲಕ್ಷ ಮತದಾರರ ಹೆಸರನ್ನ ಕೈ ಬಿಡಲಾಗಿದೆ. ಪೂರ್ವ ದೆಹಲಿಯ ಭಾಗದಲ್ಲಿ 4 ಲಕ್ಷ ಮತದಾರರ ಹೆಸರು ಪಟ್ಟಿಯಲ್ಲಿ ಇಲ್ಲ. ಅದರಲ್ಲಿ ಬಹುತೇಕ ವ್ಯಾಪಾರಿಗಳ ಹೆಸರು ಸೇರಿದಂತೆ ಪೂರ್ವಾಂಚಲಿ ಸಮುದಾಯಕ್ಕೆ ಸೇರಿದ ಹೆಸರುಗಳಿವೆ. ಹೀಗಾಗಿ ನಾವು ಮತದಾರರ ಮನೆಮನೆಗೆ ತೆರಳಿ ಮತಪಟ್ಟಿಗೆ ಅವರ ಹೆಸರು ಸೇರಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಈ ಹಿಂದೆಯೇ ದೆಹಲಿ ಚುನಾವಣಾ ಆಯೋಗ ಸಮೀಕ್ಷೆ ನಡೆಸಿ, ಆಪ್ ಆರೋಪ ಸಂಪೂರ್ಣ ನಿರಾಧಾರವಾಗಿದೆ ಅಂತ ಹೇಳಿತ್ತು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





