ನವದೆಹಲಿ: ದೆಹಲಿಯ ಚಾಂದ್ನಿ ಚೌಕ್ನಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ಸುಮಾರು 100 ಖಾಸಗಿ ಲಾಕರ್ಗಳಲ್ಲಿದ್ದ 25 ಕೋಟಿ ಹಣವನ್ನು ಜಪ್ತಿ ಮಾಡಿದ್ದಾರೆ. ನಗರದಾದ್ಯಂತ 8 ಕಡೆ ದಾಳಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ. ಹವಾಲಾ ದಂಧೆಕೋರರು ತಮ್ಮ ಹಣವನ್ನು ಇಡಲು ಈ ಖಾಸಗಿ ಲಾಕರ್ಗಳನ್ನ ಬಳಸುತ್ತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ. ರಾಷ್ಟ್ರ ರಾಜಧಾನಿ ಪ್ರದೇಶದ ಕೆಮಿಕಲ್ ವ್ಯಾಪಾರಿಗಳು, ಡ್ರೈಫ್ರೋಟ್ಸ್ ಡೀಲರ್ಗಳು ಹಾಗೂ ತಂಬಾಕು ವ್ಯಾಪಾರಿಗಳು ಸೇರಿದಂತೆ ಕೆಲವು ಹೈ ಪ್ರೊಫೈಲ್ ವ್ಯಕ್ತಿಗಳಿಗೆ ಸೇರಿದ ಹಣ ಇದಾಗಿದೆ ಎಂದು ಹೇಳಲಾಗಿದೆ. ಈ ಉದ್ಯಮಿಗಳು ಹವಾಲಾ ದಂಧೆಯಲ್ಲಿ ತೊಡಗಿದ್ದು, ಕೆಲವು ಇಂಟರ್ ನ್ಯಾಷನಲ್ ಲಿಂಕ್ಗಳನ್ನೂ ಹೊಂದಿದ್ದಾರೆಂದು ಊಹಿಸಲಾಗಿದೆ.ಕಳೆದ ಸೆಪ್ಟೆಂಬರ್ನಲ್ಲಿ ಕೂಡ ದೆಹಲಿಯ ಹಲವು ಕಡೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಈ ವೇಳೆ ₹700 ಕೋಟಿಯ ದುಬೈ ಲಿಂಕ್ ಹೊಂದಿದ್ದ ಹವಾಲಾ ದಂಧೆಗೆ ಸಂಬಂಧಿಸಿದಂತೆ ₹29 ಲಕ್ಷ ನಗದು ಹಾಗೂ ಕೆಲವು ದಾಖಲೆಗಳನ್ನ ಜಪ್ತಿ ಮಾಡಿತ್ತು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





