Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಐ ಸೇವರ್ ಸಂಸ್ಥೆಯ ಹ್ಯಾಟ್ರಿಕ್ ಸಾಧನೆ- ೩ನೇ ಬಾರಿ ಜೈಸಿ ಅಂಡ್ ಐ ಅವಾರ್ಡ್

ಹುಬ್ಬಳ್ಳಿ: ಐ ಸೆವರ್ ಸಂಸ್ಥೆಯೂ ಇತ್ತೀಚಿಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೈಸಿ “ಯು ಆ್ಯಂಡ್ ಐ ಅವಾರ್ಡ್-2018″ನ್ನು ತನ್ನ ಮುಡಿಗೇರಿಸಿಕೊಂಡಿದೆ ಎಂದು ಐ ಸೆವರ್ ಸಂಸ್ಥೆಯ ಮುಖಂಡರಾದ ಕುನಾಲ್ ಷಾ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 18 ರಂದು ಮುಂಬೈನಲ್ಲಿ ನಡೆದ ಎಕ್ಸಲೇನ್ಸ್ ಇನ್ ಕ್ಲಿನಿಕಲ್ ಸಪೋರ್ಟ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ಸುಮಾರು ಕಣ್ಣಿನ ತಜ್ಞರು ಪಾಲ್ಗೊಂಡಿದ್ದು, ಐ ಸೇವರ್ ಸಂಸ್ಥೆಯೂ ಈ ಒಂದು ಗೌರವವನ್ನು ತನ್ನು ಮುಡಿಗೇರಿಸಿಕೊಂಡಿದೆ ಎಂದರು. ಐ ಸೆವರ್ ಸಂಸ್ತೆಯೂ ಸತತವಾಗಿ‌ಮೂರು ಬಾರಿ ಅಂದರೆ 2016, 2017 ಮತ್ತು 2018ರಲ್ಲಿ ಅವಾರ್ಡನ್ನು ಪಡೆದುಕೊಂಡಿದೆ. ಪ್ರಸ್ತುತ ಅವಾರ್ಡನ್ನು ಲೋಟಸ್ ಕಾಲೇಜ್ ಪ್ರಾಚಾರ್ಯರಾದ ಪ್ರೇಮಾ ಚಾಂದಿ, ಲೆನ್ಸ್ ಎಜುಕೇಶನ್ ನಿರ್ದೇಶಕ ನಿಲೇಶ ತಿಟೆ, ಶಂಕರ ಕಾಲೇಜ ಚನ್ನೈನ ಪ್ರಾಚಾರ್ಯರಾದ ಆದಿತ್ಯಾ ಗೋಯಾಲ, ಮೆಡಿಕಲ್ ಕಾಲೇಜ ಪುಣೆಯ ಅಮಿತ ಸಿಂಧೇ ಸೇರಿದಂತೆ ಹಲವಾರು ಜನ ಸಂಪನ್ಮೂಲ ವ್ಯಕ್ತಿಗಳು ಮೌಲ್ಯಮಾಪನ ಮಾಡಿ ಐ ಸೇವರ್ ಸಂಸ್ಥೆಯ ವಿಶಿಷ್ಟತೆಯನ್ನು ಗುರುತಿಸಿ ಈ ಮಹತ್ವ ಪೂರ್ಣ ಅವಾರ್ಡನ್ನು ನೀಡಿದೆ ಎಂದು ಅವರು ತಿಳಿಸಿದರು. ಅಲ್ಲದೇ ಸುಮಾರು ವರ್ಷಗಳಿಂದ ಕಣ್ಣಿನ ಆರೋಗ್ಯಕ್ಕೆ ಸಂಬಂಧಿತ ಚಿಕಿತ್ಸೆಗಳನ್ನು ನೀಡುತ್ತಾ ಬಂದಿದೆ. ಲೆನ್ಸ್, ದೂರ ದೃಷ್ಟಿದೋಷ, ಸಮೀಪ ದೃಷ್ಟಿ ದೋಷ ಸೇರಿದಂತೆ ಹಲವಾರು ಕಾಯಿಲೆಗಳಿಗೆ ಪೂರಕ ಹಾಗೂ ಗುಣಾತ್ಮಕ ಚಿಕಿತ್ಸೆ ನೀಡುತ್ತಾ ಬಂದಿದೆ ಎಂದರು.ಈ ಸಂದರ್ಭದಲ್ಲಿ ಪ್ರಕಾಶ ಷಾ ಹಾಗೂ ಶಿತಲ್ ಷಾ ಸೇರಿದಂತೆ ಇತರರು ಇದ್ದರು.

Share News

About Shaikh BIG TV NEWS, Hubballi

Check Also

ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್..?

ಧಾರವಾಡದಲ್ಲಿ ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್…? 3 ತಿಂಗಳಿಂದ ಯುವತಿಯರಿಗೆ ಕಿರುಕುಳ ಆರೋಪ — ಸಿಸಿಟಿವಿಯಲ್ಲಿ ಬೆತ್ತಲೆ …

Leave a Reply

Your email address will not be published. Required fields are marked *