Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಪಶ್ಚಿಮ ಯುಪಿಯಲ್ಲಿ 10ಕ್ಕಿಂತ ಹೆಚ್ಚು ಉಗ್ರಗಾಮಿ ಸಂಘಟನೆ ಸಕ್ರಿಯ!

ಲಕ್ನೋ: ಉತ್ತರ ಪ್ರದೇಶದಲ್ಲಿ ಭಯೋತ್ಪಾದಕರ ಬಲ ಹೆಚ್ಚಾಗುತ್ತಿರುವ ಭೀತಿ ಉಂಟಾಗಿದೆ. ಅದರಲ್ಲೂ ಪಶ್ಚಿಮ ಯುಪಿಯಲ್ಲಿ ಭಯೋತ್ಪಾದಕರು ಬೀಡುಬಿಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಆ ಭಾಗದಲ್ಲಿ ಭಯೋತ್ಪಾದಕರು ಸಕ್ರಿಯರಾಗಿರುವ ಬಗ್ಗೆ ತನಿಖಾ ಸಂಸ್ಥೆಗೆ ಮೂಲಗಳಿಂದ ಮಾಹಿತಿ ಲಭಿಸಿದೆ ಎಂದು ತಿಳಿದುಬಂದಿದೆ.ಪಶ್ಚಿಮ ಉತ್ತರಪ್ರದೇಶದ 10 ಕ್ಕಿಂತ ಹೆಚ್ಚು ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ. ಸಹರಾನ್ಪುರ್, ಶಾಮ್ಲಿ, ಅಮ್ರೋಹಾ, ಆಗ್ರಾ, ಮೀರತ್, ಮಥುರಾ, ಮುಜಫರ್ನಗರ, ಮೊರಾದಾಬಾದ್ ಮತ್ತು ಹಾಪುದ್ ಜಿಲ್ಲೆಗಳಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ ಎನ್ನಲಾಗಿದೆ.ತನಿಖಾ ಸಂಸ್ಥೆಗಳು ಈ ಭಯೋತ್ಪಾದಕರ ಬಗ್ಗೆ ಕಳೆದ 10 ವರ್ಷಗಳ ವಿವರಗಳನ್ನು ಅನ್ವೇಷಿಸಲು ಪ್ರಾರಂಭಿಸಿವೆ ಎಂದು ಹೇಳಲಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಅಮೇರಿಕಾದಲ್ಲಿ ಸಿಕ್ಕಿಬಿದ್ದಿದ್ದ, ಪಾಕಿಸ್ತಾನದ ಭಯೋತ್ಪಾದಕರಾದ ಡೇವಿಡ್ ಹೆಡ್ಲಿ, ತಸ್ವರ್ ರಾಣಾ ಮತ್ತು ಅಲ್ ಖೈದಾ ಉಗ್ರಗಾಮಿ ಇಲ್ಯಾಸ್ ಕಾಶ್ಮೀರಿವರೆಗೂ ಮೀರತ್ ನಲ್ಲಿ ಚಟುವಟಿಕೆಗಳು ಕಂಡುಬಂದಿವೆ.ಸಂಭವನೀಯ ಸಕ್ರಿಯ ಭಯೋತ್ಪಾದಕ ಸಂಘಟನೆ:ತನಿಖಾ ಏಜೆನ್ಸಿಗಳು ಕಳೆದ ಹತ್ತು ವರ್ಷಗಳ ವಿವರವಾದ ಮಾಹಿತಿಗಾಗಿ ಹುಡುಕುತ್ತಿವೆ. ಅವರಲ್ಲಿ ಮೀರತ್ ನ ಸಲ್ಮಾನ್, ಮುಜಫರ್ ನಗರದ ಹಫೀಜ್, ಶಾಹ್ಜಾದ್ ಮತ್ತು ಇಕ್ಬಾಲ್, ಆಗ್ರಾದಲ್ಲಿ ಸಾಲಾರ್, ಮುರಾದಾಬಾದ್ ನಲ್ಲಿ ಮೊ ಸೇರಿದ್ದಾರೆ. ಇದರಲ್ಲಿ ಹನೀಫ್ ಮುಖ್ಯವಾಗಿ ತೊಡಗಿಸಿಕೊಂಡಿದ್ದಾನೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಪಶ್ಚಿಮ ಯುಪಿಯಲ್ಲಿ ಅಲ್ ಖೈದಾ, ಲಷ್ಕರ್ ಇ ತೊಯ್ಬಾ, ಹುಜಿ, ಇಸ್ಲಾಮಿಕ್ ಸ್ಟೇಟ್, ಐಸಿಸ್, ಸಿಮಿ ಸಕ್ರಿಯರಾಗಿದ್ದಾರೆ ಎಂದು ಹೇಳಲಾಗಿದೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *