Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಮೋದಿ ಸರ್ಕಾರಕ್ಕೆ ಭಾರೀ ಹಿನ್ನಡೆ : ಸಿಬಿಐಗೆ ಅಲೋಕ್​ ವರ್ಮಾ ವಾಪಸ್..​

ನವದೆಹಲಿ: ಅಲೋಕ್​ ವರ್ಮಾ ಅವರನ್ನು ಸಿಬಿಐ ನಿರ್ದೇಶಕರಾಗಿ ಮರುನೇಮಕ ಮಾಡಿ ಸುಪ್ರೀಂ ಕೋರ್ಟ್​​ ಆದೇಶ ನೀಡಿದೆ. ತನ್ನನ್ನು ಸುದೀರ್ಘ ರಜೆ ಮೇಲೆ ಕಳಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ​ಅಲೋಕ್​ ವರ್ಮಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ವರ್ಮಾ ಅವರ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್​ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಈಗ ತೀರ್ಪು ಪ್ರಕಟಿಸಿರೋ ಕೋರ್ಟ್​, ಅಲೋಕ್​ ವರ್ಮಾ ಅವರನ್ನ ಮರುನೇಮಕ ಮಾಡಿದ್ದು, ಮೋದಿ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ. ಇನ್ನು ಅಲೋಕ್​ ವರ್ಮಾ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ ಎಂದು ಕೋರ್ಟ್​ ಹೇಳಿದೆ.ಅಲೋಕ್​ ವರ್ಮಾ ಹಾಗೂ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್​​ ಅಸ್ತಾನಾ ಪರಸ್ಪರ ಭಷ್ಟಾಚಾರದ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಬ್ಬರನ್ನೂ ಸುದೀರ್ಘ ರಜೆ ಮೇಲೆ ಕಳಿಸಿತ್ತು.ಏನಿದು ಪ್ರಕರಣ?ಗುಜರಾತ್​ ಕೇಡರ್​ನ ಐಪಿಎಸ್​ ಅಧಿಕಾರಿ ರಾಕೇಶ್​​ ಅಸ್ತಾನಾ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಅವರನ್ನು ವಿಶೇಷ ನಿರ್ದೇಶಕರನ್ನಾಗಿ ನೇಮಿಸಬಾರದು” ಎಂದು ಸಿಬಿಐ ನಿರ್ದೇಶಕ ಅಲೋಕ್​ ವರ್ಮಾ ಹೇಳಿದ್ದರು. ಅಲ್ಲದೇ ಈ ಸಂಬಂಧ ಅವರು ಕೇಂದ್ರ ಜಾಗೃತಿ ಆಯೋಗಕ್ಕೆ ಪತ್ರ ಬರೆದಿದ್ದರು. ಬಳಿಕ ತಮ್ಮನ್ನು ಪ್ರತಿನಿಧಿಸುವ ಅಧಿಕಾರ ರಾಕೇಶ್​​ ಅಸ್ತಾನಾಗೆ ಇಲ್ಲ ಎಂದು ವರ್ಮಾ ಮತ್ತೊಮ್ಮೆ ಸಿವಿಸಿಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ ರಾಕೇಶ್​ ಅಸ್ತಾನಾ ಸಹ ವರ್ಮಾ ಅವರು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಸಿವಿಸಿಗೆ ದೂರು ನೀಡಿದ್ದರು. ಇಷ್ಟಕ್ಕೆ ತಣ್ಣಗಾಗಿದ್ದರೆ ಈ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ. ಸಿಬಿಐ ಅಕ್ಟೋಬರ್​ 15ರಂದು ರಾಕೇಶ್​ ಅಸ್ತಾನಾ ವಿರುದ್ಧ ಭಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿತು. ಅಲ್ಲದೇ ರಾಕೇಶ್​ ಅಸ್ತಾನಾ ಆಪ್ತ ಡಿವೈಎಸ್​ಪಿ ದೇವೇಂದ್ರಕುಮಾರ್​ರನ್ನು ಬಂಧಿಸಿತ್ತು. ಇದಾದ ಮೇಲೆ ಈ ಆಂತರಿಕ ಕಚ್ಚಾಟ ಬೀದಿಗೆ ಬಂತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಅಲೋಕ್​ ವರ್ಮಾ ಹಾಗೂ ರಾಕೇಶ್​ ಅಸ್ತಾನಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿತು. ಹಿರಿಯ ಐಪಿಎಸ್​ ಅಧಿಕಾರಿ ಎಂ. ನಾಗೇಶ್ವರ್​ ರಾವ್​ ಅವರನ್ನು ಹಂಗಾಮಿ ಸಿಬಿಐ ನಿರ್ದೇಶಕರನ್ನಾಗಿ ನೇಮಿಸಿತು. ಕೇಂದ್ರ ಸರ್ಕಾರದ ಈ ನಡೆಯನ್ನು ಸಿಬಿಐ ನಿರ್ದೇಶಕ ಅಲೋಕ್​ ವರ್ಮಾ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದ್ದರು.

Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *