Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಕಾರ್ತಿ ಚಿದಂಬರಂಗೆ ಸುಪ್ರೀಂ ಕೋರ್ಟ್‌ ಖಡಕ್‌ ವಾರ್ನಿಂಗ್‌..!

ನವದೆಹಲಿ: ಕಾನೂನಿನೊಂದಿಗೆ ಆಟವಾಡಬೇಡಿ ಅಂತಾ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ಎಚ್ಚರಿಸಿರುವ ಸುಪ್ರೀಂ ಕೋರ್ಟ್, ವಿದೇಶ ಪ್ರವಾಸಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ.ಐಎನ್​ಎಕ್ಸ್​ ಮಿಡಿಯಾ ಮತ್ತು ಏರ್​ಸೆಲ್​ ಮ್ಯಾಕ್ಸಿಸ್ ಹಗರಣದ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆ ಗಳೊಂದಿಗೆ ಸಹಕಾರ ನೀಡದಿದ್ದರೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾದೀತು ಅಂತಾ ತಾಕೀತು ಕೂಡ ಮಾಡಿದೆ. ಈ ಹಗರಣದ ಒಂದನೇ ಆರೋಪಿ ಕಾರ್ತಿ ಚಿದಂಬರಂ, ಕಾರ್ತಿ ತಂದೆ ಪಿ.ಚಿದಂಬರಂ ಪ್ರಕರಣದ ಎರಡನೇ ಆರೋಪಿಯಾಗಿದ್ದಾರೆ. ನೀವು ಎಲ್ಲಿಗೆ ಹೋಗಬೇಕೆಂದಿದ್ದಿರೋ ಹೋಗಿರಿ. ಆದರೆ ನೀವು ತನಿಖೆಗೆ ಸಹಕರಿಸಬೇಕು. ತನಿಖಾಧಿಕಾರಿಗಳಿಗೆ ನೀವು ಸಹಕಾರ ನೀಡದಿದ್ದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೇ 10 ಕೋಟಿ ರೂಪಾಯಿ ಠೇವಣಿ ಇಡುವಂತೆ ಸೂಚಿಸಿರುವ ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ, ನಿಗದಿಯಾದ ಸಮಯಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.ಐಎನ್ಎಕ್ಸ್ ಮೀಡಿಯಾ ಮತ್ತು ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾರ್ಚ್ 5, 6, 7 ಮತ್ತು 12 ರಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳೆದುರು ಕಾರ್ತಿ ಹಾಜರಾಗಬೇಕಾಗಿತ್ತು. ಯುಕೆ, ಸ್ಪೇನ್​, ಜರ್ಮನಿ ಮತ್ತು ಫ್ರಾನ್ಸ್​ಗಳಲ್ಲಿ ಅಂತರರಾಷ್ಟ್ರೀಯ ಟೆನ್ನಿಸ್ ಪಂದ್ಯಗಳನ್ನು ಕಾರ್ತಿ ಚಿದಂಬರಂ ಆಯೋಜಿಸಿದ್ದು, ಈ ಸಂಬಂಧ ವಿದೇಶ ಪ್ರವಾಸ ಕೈಗೊಂಡಿದ್ದಾರೆ.

Share News

About Shaikh BIG TV NEWS, Hubballi

Check Also

Featured Video Play Icon

ಹುಬ್ಬಳ್ಳಿ : ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ: ತಹಶೀಲ್ದಾರ ಕಲಗೌಡ ಪಾಟೀಲ..!

ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಹಂತಕ ರಿತೇಶಕುಮಾರ್ ಮೃತ ದೇಹವನ್ನು ಹಿಂದೂ ವಿಧಿವಿಧಾನಗಳ …

Leave a Reply

Your email address will not be published. Required fields are marked *