ಕುವೈತ್: ಮದುವೆಯಾಗಿ ಒಂದೇ ವರ್ಷಕ್ಕೆ ಅಥವಾ ಒಂದೇ ತಿಂಗಳಿಗೆ ಗಂಡ ಹೆಂಡತಿ ಡಿವೋರ್ಸ್ ಕೇಳಿರೋ ಪ್ರಕರಣಗಳ ಬಗ್ಗೆ ಕೇಳಿರ್ತೀರ. ಆದ್ರೆ ಇಲ್ಲೊಂದು ಜೋಡಿ ಮದುವೆಯಾದ ಮೂರೇ ನಿಮಿಷಕ್ಕೆ ಡಿವೋರ್ಸ್ ಪಡೆದಿದೆ ಎಂದರೆ ನೀವು ನಂಬಲೇಬೇಕು. ಹೌದು. ಕುವೈತ್ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ದಂಪತಿ ಮದುವೆಯಾಗಿ ಕೇವಲ ಮೂರೇ ನಿಮಿಷದಲ್ಲಿ ವಿಚ್ಛೇದನ ಪಡೆದಿದ್ದಾರೆ. ಮದುವೆಯಾಗಿ ಅತ್ಯಂತ ಕಡಿಮೆ ಸಮಯದಲ್ಲೇ ದಾಂಪತ್ಯ ಜೀವನ ಮುರಿದುಬಿದ್ದಿರೋದು ಕುವೈತ್ನ ಇತಿಹಾಸದಲ್ಲೇ ಇದೇ ಮೊದಲು ಎಂದು ಹೇಳಲಾಗ್ತಿದೆ. ಆ ಜೋಡಿ ಕೋರ್ಟ್ಹಾಲ್ನಲ್ಲಿ ಮದುವೆಯಾಗಿ, ಅಲ್ಲಿಂದ ನಿರ್ಗಮಿಸುವ ಮುನ್ನವೇ ವಿಚ್ಛೇದನ ಪಡೆದಿದ್ದಾರೆ. ಬರುವಾಗ ವಧು ವರರಾಗಿ ಬಂದವರು ಹೊರಡುವಾಗ ಮಾಜಿ ಗಂಡ ಹೆಂಡತಿಯಾಗಿ ಹೋಗಿದ್ದಾರೆ.ಅಷ್ಟಕ್ಕೂ ಡಿವೋರ್ಸ್ ಆಗಿದ್ದಾದ್ರೂ ಯಾಕೆ?ಆಗಿದ್ದಿಷ್ಟೇ. ವಧು ವರ ಕೋರ್ಟ್ಹಾಲ್ನಲ್ಲಿ ಮ್ಯಾರೇಜ್ ಕಾಂಟ್ರಾಕ್ಟ್ಗೆ ಆಗ ತಾನೇ ಸೈನ್ ಮಾಡಿದ್ದರು. ಬಳಿಕ ಅಲ್ಲಿಂದ ಹೊರಗೆ ಹೋಗುವಾಗ ಜಡ್ಜ್ ಮುಂದೆಯೇ ವಧು ಕಾಲು ಜಾರಿ ಬಿದ್ದಿದ್ದಾಳೆ. ಆಗ ವರ ಸ್ಟುಪಿಡ್ ಎಂದು ಕರೆದಿದ್ದಾನೆ. ಇದರಿಂದ ಕೋಪಗೊಂಡ ಆಕೆ, ಇಲ್ಲೇ..ಈಗಲೇ ಡಿವೋರ್ಸ್ ಬೇಕು ಎಂದಿದ್ದಾಳೆ. ಆ ವೇಳೆಗೆ ಅವರಿಬ್ಬರೂ ಮದುವೆಯಾಗಿ ಕೇವಲ 3 ನಿಮಿಷವಾಗಿತ್ತು ಅಷ್ಟೇ.ಈ ಸುದ್ದಿ ಕೇಳಿ ಸಾಮಾಜಿಕ ಜಾಲತಾಣದಲ್ಲಿ ಜನ ವಧುವಿಗೆ ಬೆಂಬಲ ನೀಡಿದ್ದಾರೆ. ಆಕೆ ಮಾಡಿದ್ದು ಸರಿಯಾಗೇ ಇದೆ ಅಂತ ಹೇಳಿದ್ದಾರೆ. ಆರಂಭದಲ್ಲೇ ಗಂಡ ಈ ರೀತಿ ಆಡಿದ್ರೆ ಆತನಿಂದ ದೂರವಾಗೋದೇ ಉತ್ತಮ ಅಂತ ಕಮೆಂಟ್ ಮಾಡಿದ್ದಾರೆ. ಗೌರವವೇ ಇಲ್ಲದಿದ್ದಾಗ ಆ ಮದುವೆ ಆರಂಭದಿಂದಲೂ ಮುರಿದುಬಿದ್ದಂತೆಯೇ ಎಂದು ಕೆಲವರು ಹೇಳಿದ್ದಾರೆ
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





