ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಆಂಗ್ಲ ನಾಮಫಲಕಗಳ ಕನ್ನಡೀಕರಣ ವಾಗಬೇಕು ಕರುನಾಡ ರಕ್ಷಣಾ ವೇದಿಕೆ ಮನವಿ.ಕರ್ನಾಟಕ ರಾಜ್ಯಾದ್ಯoತ ವ್ಯಾಪಾರ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕಗಳು ಕಡ್ಡಾಯವಿರಬೇಕೆಂದು ಸರ್ಕಾರದ ಆದೇಶವಾಗಿದೆ.ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಈಗಾಗಲೇ ಕನ್ನಡ ಜಾಗೃತಿ ಸಮಿತಿ ಹಾಗೂ ಕನ್ನಡ ಕಾಯಕ ಪಡೆಯ “ಶುದ್ಧ ಕನ್ನಡ ನಾಮಫಲಕ ಜಾಗೃತಿ ಅಭಿಯಾನ” ಎಲ್ಲರ ಗಮನಕ್ಕೆ ಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆಯೂ ಕೂಡ ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಬೃಹತ್ ಅಭಿಯಾನವನ್ನು ಹಮ್ಮಿಕೊಂಡಿದೆ. ಅನ್ಯಭಾಷೆಯ ನಾಮಫಲಕಗಳು ಕನ್ನಡೀಕರಣ ವಾಗುವ ಪ್ರಕ್ರಿಯೆ ಚುರುಕುಗೊಂಡಿದೆ.
ಕರುನಾಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಗಿರೀಶ ಪೂಜಾರ ರವರ ಆದೇಶದ ಮೇರೆಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೂ ಕೂಡ ಅನ್ಯ ಭಾಷೆಯ ನಾಮಫಲಕಗಳು ಕನ್ನಡೀಕರಣವಾಗುವಂತೆ ತಾವು ಶೀಘ್ರವೇ ಸುತ್ತೋಲೆ ಹೊರಡಿಸಬೇಕೆಂದು ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಮಾಡಿದರು.ನಮ್ಮ ಸಂಘಟನೆಯ ವತಿಯಿಂದ ಈ ಅಭಿಯಾನಕ್ಕೆ ಕೈ ಜೋಡಿಸುತ್ತೇವೆ, ನಮ್ಮ ಅಭಿಯಾನಕ್ಕೆ ಸಕಾರಾತ್ಮಕ ಸ್ಪಂದನೆ ದೊರೆಯದೇ ಇದ್ದಲ್ಲಿ ಜಿಲ್ಲಾಧ್ಯಂತ ಉಗ್ರ ಪ್ರತಿಭಟನೆ ಅನಿವಾರ್ಯವೆಂದು ಗಮನಕ್ಕೆ ತಂದರು
ಸಂಧರ್ಭದಲ್ಲಿ ಕರುನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಶ್ರೀ ವಿನಾಯಕ ಗುಡ್ಡದಕೇರಿ,ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶುಭಾ ಸಿರಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ನಿಯಾಜ್ ನಿಪ್ಪಾಣಿ, ಯುವ ಮುಖಂಡರಾದ ಬಸವರಾಜ ಭಜಂತ್ರಿ, ಗಣೇಶ ತೇರದಾಳ, ರಮೇಶ ಸಂಶಿ,ಹೇಮಂತ ಸಗಭಾಲ,ಹಣಮಂತ ಮನಕೆರಿ ಹಾಗೂ ಸಂಘಟನೆಯ ಕಾರ್ಯಕರ್ತರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





