ನವದೆಹಲಿ: ಭಾರತದ ದಾಳಿಗೆ ಬೆದರಿರುವ ಪಾಕ್ ಶಾಂತಿಯೊಂದೇ ಪರಿಹಾರ ಹೊರತು ಯುದ್ಧವಲ್ಲ ಎಂದು ಹೇಳಿದೆ.ಪಾಕಿಸ್ತಾನದ ಮಿಲಟರಿ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಈಗ ಭಾರತ ಸರ್ಕಾರಕ್ಕೆ ಮಾತುಕತೆ ನಡೆಸಲು ಕರೆ ನೀಡಿದ್ದಾರೆ. ‘ನಿಮಗೆ ಶಾಂತಿ ಬೇಕೆಂದರೆ ನಮ್ಮ ಜೊತೆ ಮಾತುಕತೆ ನಡೆಸಿ ಯಾವ ಸಮಸ್ಯೆಗಳನ್ನು ಸಹಿತ ಯುದ್ಧದ ಮೂಲಕ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಭಾರತ ಶಾಂತ ಮನಸ್ಸಿನಿಂದ ಈ ಆಫರ್ ನ್ನು ಸ್ವೀಕರಿಸಬೇಕು’ ಎಂದು ಹೇಳಿದ್ದಾರೆ.ಪಾಕಿಸ್ತಾನಕ್ಕೆ ಯುದ್ದ ಬೇಕಾಗಿಲ್ಲ ನಮ್ಮ ಸಂದೇಶ ಶಾಂತಿಯೊಂದೇ. ಇದರಲ್ಲಿ ಅಂತರಾಷ್ಟ್ರೀಯ ಸಮುದಾಯವು ಕೂಡ ಪಾತ್ರ ವಹಿಸುತ್ತದೆ’ ಎಂದು ಅವರು ತಿಳಿಸಿದ್ದಾರೆ. ‘ನಾವು ಇಂದು ದಾಳಿಯನ್ನು ಸ್ವರಕ್ಷಣೆಗಾಗಿ ಮಾಡಿದ್ದೇವೆ ಹೊರತು ಸಂಭ್ರಮಪಡಲು ಅಲ್ಲ. ಯುದ್ಧವು ಯಾರ ಗೆಲವು ಕೂಡ ಅಲ್ಲ, ಆದ್ಧರಿಂದ ಇದರಿಂದ ಮಾನವೀಯತೆ ಒಂದೇ ಹಾನಿಯಾಗುತ್ತದೆ’ ಎಂದರು.ಇಂದು ಭಾರತದ ಗಡಿರೇಖೆಯನ್ನು ಮೂರು ಪಾಕ್ ನ ಯುದ್ಧ ವಿಮಾನಗಳು ಉಲ್ಲಂಘಿಸಿದ್ದವು. ಇದಕ್ಕೆ ಭಾರತವು ಕೂಡ ತಕ್ಕ ಉತ್ತರ ನೀಡಿ ಆ ವಿಮಾನಗಳನ್ನು ಹಿಮ್ಮಟ್ಟಿಸುವಂತೆ ಮಾಡಿತ್ತು. ಈ ಹಿನ್ನಲೆಯಲ್ಲಿ ಇಂದು ಪಾಕಿಸ್ತಾನದ ಶಾಂತಿ ಮಂತ್ರವನ್ನು ಜಪಿಸಿದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





