ಬೆಳ್ತಂಗಡಿ: ಅಂಡಿಂಜೆ ಗ್ರಾಮದ ಬಾಲಾಜಿ ಕ್ಯಾಶ್ಯು ಇಂಡಸ್ಟ್ರೀಸ್ ಕಚೇರಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಕಳವುಗೈದಿದ್ದಾರೆ. ಕಚೇರಿಯ ಹಿಂಬಾಗಿಲನ್ನು ಕಳ್ಳರು ಮುರಿದು ಒಳನುಗ್ಗಿ, ಸಂಸ್ಥೆಯ ದಾಖಲೆಗಳು ಸೇರಿದಂತೆ 9 ಕಂಪ್ಯೂಟರ್‌ಗಳು, 8 ಸಿಸಿಟಿವಿ ಕೆಮರಾಗಳು, ಒಂದು ಡಿವಿಆರ್ ಹಾಗೂ 3 ಟೆಲಿವಿಷನ್‌ಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ವಾಮದಪದವು ನಿವಾಸಿ ಟಿ. ವರದರಾಜ್ ಪೈ (46) ಅವರು ಘಟನೆಗೆ ಸಂಬಂಧಿಸಿ ದೂರು ನೀಡಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
