Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ನರೇಂದ್ರ ಮೋದಿ ಬೆಂಬಲಿಗರನ್ನು ಮೂರ್ಖರು ಎಂದು ಕರೆದ ರಮ್ಯಾ..?

ನವದೆಹಲಿ: ವಿವಾದಾತ್ಮಕ ಟ್ವೀಟ್ ಮತ್ತು ನಡೆಗಳಿಂದ ಸುದ್ದಿಯಲ್ಲಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ, ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳನ್ನು ಕೆರಳಿಸುವ ಮತ್ತೊಂದು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ.ಪ್ರಧಾನಿ ಮೋದಿ ಅವರ ಬೆಂಬಲಿಗರನ್ನು ‘ಮೂರ್ಖರು’ ಎಂದು ಲೇವಡಿ ಮಾಡುವ ಮೀಮ್ ಅನ್ನು ರಮ್ಯಾ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ರಮ್ಯಾ ಅವರ ಟ್ವೀಟ್‌ಗೆ ಅಷ್ಟೇ ಖಾರವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.ದಾಂಡಿ ಸತ್ಯಾಗ್ರಹ, ಆರೆಸ್ಸೆಸ್ ಮತ್ತು ರಮ್ಯಾ ಅವರ ಕೆಣಕುವ ಟ್ವೀಟ್!ಸಾಮಾಜಿಕ ಜಾಲತಾಣದಲ್ಲಿ ಮೋದಿ ಮತ್ತು ಬಿಜೆಪಿ ವಿರುದ್ಧ ಈ ರೀತಿ ಟ್ವೀಟ್‌ಗಳನ್ನು ಮಾಡಿ ಅಭಿಮಾನಿಗಳ ಕೋಪಕ್ಕೆ ತುತ್ತಾಗುವುದು ರಮ್ಯಾಗೆ ಹೊಸತೇನಲ್ಲ. ಮೋದಿ ಅವರ ಚಿತ್ರದ ಮೇಲೆ ‘ಚೋರ್’ ಎಂದು ಬರೆದು ‘ಚೋರ್ ಪ್ರಧಾನಿ ಚುಪ್ ಹೈ’ ಎಂದು ಪೋಸ್ಟ್ ಮಾಡುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದರು. ಅದಕ್ಕೂ ಮೊದಲು, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆ ಕೆಳಭಾಗದಲ್ಲಿದ್ದ ಮೋದಿ ಅವರನ್ನು ಹಕ್ಕಿಯ ಹಿಕ್ಕೆಗೆ ಹೋಲಿಸಿದ ರಮ್ಯಾ ಅವರ ಟ್ವೀಟ್‌ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
‘ನಿಮಗೆ ಗೊತ್ತೇ? ರಾಹುಲ್ ಗಾಂಧಿ ಅವರ 3ಕ್ಕೆ 3ರಷ್ಟು ಬೆಂಬಲಿಗರು ರಾಹುಲ್ ಅವರಷ್ಟೇ ಮೂರ್ಖರು’ ಎಂದು ಮೋದಿ ಬೆಂಬಲಿಗರೊಬ್ಬರು ರಾಹುಲ್ ಗಾಂಧಿ ಅವರ ಫೋಟೊವನ್ನು ಇದೇ ರೀತಿ ಬಳಸಿ ಮೀಮ್ ಸೃಷ್ಟಿಸಿದ್ದಾರೆ.ಯುಪಿಎ ಡೀಲ್ ಪ್ರಕಾರ ನಡೆದಿದ್ರೆ ಕಡಿಮೆ ಬೆಲೆಗೆ ರಫೇಲ್: ರಮ್ಯಾ ಟ್ವೀಟ್ದರೆ, ಮೋದಿ ಅಭಿಮಾನಿಗಳ ಟೀಕೆಗೆ ರಮ್ಯಾ ತಲೆಕೆಡಿಸಿಕೊಂಡಿಲ್ಲ. ತಮ್ಮ ಟ್ವೀಟ್‌ಗೆ ಬರುವ ಪ್ರತಿಕ್ರಿಯೆಗಳಿಗೆ ಉತ್ತರಿಸುವ ಗೋಜಿಗೆ ಹೋಗದ ಅವರು, ಮೊದಿ ವಿರುದ್ಧದ ಟೀಕೆಗಳನ್ನು ಮುಂದುವರಿಸಿದ್ದಾರೆ.ಮತದಾರರಿಗೆ ಅವಮಾನರಮ್ಯಾ ಅವರ ಹೇಳಿಕೆ ಮೋದಿ ಅವರ ಕಟ್ಟಾ ಬೆಂಬಲಿಗರನ್ನು ಮಾತ್ರವಲ್ಲದೆ, ಕಳೆದ ಚುನಾವಣೆಯಲ್ಲಿ ಮೋದಿ ಅವರಿಗೆ ಮತಚಲಾಯಿಸಿದ ಅನೇಕರಲ್ಲಿಯೂ ಆಕ್ರೋಶ ಉಂಟುಮಾಡಿದೆ. ನೀವು ಭಾರತದ ಮತದಾರರಿಗೆ ಅವಮಾನ ಮಾಡಿದ್ದೀರಿ ಎಂದು ಅನೇಕರು ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share News

About Shaikh BIG TV NEWS, Hubballi

Check Also

Featured Video Play Icon

ಹುಬ್ಬಳ್ಳಿ : ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ: ತಹಶೀಲ್ದಾರ ಕಲಗೌಡ ಪಾಟೀಲ..!

ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಹಂತಕ ರಿತೇಶಕುಮಾರ್ ಮೃತ ದೇಹವನ್ನು ಹಿಂದೂ ವಿಧಿವಿಧಾನಗಳ …

Leave a Reply

Your email address will not be published. Required fields are marked *