ಮಂಡ್ಯ: ನಾವು ಚೆಡ್ಡಿ ಹಾಕಿಕೊಳ್ಳುತ್ತೇವೋ ಅಥವಾ ಬುಂಡಾ ಬುಂಡಾ ತಿರುಗುತ್ತೇವೆ ಅವರಿಗೆ ಯಾಕೆ? ಇದೆಲ್ಲಾ ಮಾತನಾಡುವುದನ್ನು ಬಿಟ್ಟು ಮೊದಲು ರೈತರ ಸಂಕಷ್ಟಕ್ಕೆ ಸ್ಪಂದಿಸುವುದನ್ನು ಕಲಿಯಲಿ ಎಂದು ಮಾಜಿ ಶಾಸಕ ಕೆ. ಸುರೇಶ್‌ಗೌಡ ಸಚಿವ ಚಲುವರಾಯಸ್ವಾಮಿಗೆ ತಿರುಗೇಟು ನೀಡಿದರು. ಸುದ್ಧಿಗಾರರೊಂದಿಗೆ ಮಾತನಾಡಿ, ಬಿಜೆಯವರು ಹೇಳಿದರೆ ಜೆಡಿಎಸ್‌ನವರು ಚೆಡ್ಡಿ ಬೇಕಾದರೂ ಹಾಕ್ತಾರೆ ಎಂಬ ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾವು ಚೆಡ್ಡಿ ಹಾಕ್ತೇವೋ, ಕುಣಿತೀವೋ, ಮಲಗುತ್ತೇವೋ ಚಲುವರಾಯಸ್ವಾಮಿಗೆ ಯಾಕೆ ಬೇಕು, ರೈತರು ಸಾಯುತ್ತಿದ್ದಾರೆ. ಜನರ ಕೆಲಸ ಮಾಡು ಅಂದರೆ ಲೂಟಿ ಹೊಡೆಯುತ್ತಿದ್ದಾರೆ. ಇದಕ್ಕೆ ನಾವೇನು ಹೇಳಬೇಕು ಎಂದು ಹರಿಹಾಯ್ದರು.
ಚಲುವರಾಯಸ್ವಾಮಿ ಚೆಡ್ಡಿಯನ್ನೇ ಹಾಕಲ್ಲ, ಅವರಿಗೆ ಚೆಡ್ಡಿ ಹಾಕ್ಕೋ ಅಥವಾ ಕಾಚ ಹಾಕ್ಕೋ ಎಂದು ಡಿ.ಕೆ. ಶಿವಕುಮಾರ್ ಹೇಳಬೇಕಾ, ಸಿದ್ದರಾಮಯ್ಯ ಹೇಳಬೇಕಾ? ಇವರಿಗೆ ಯಾರೆ ನಮ್ಮ ವಿಚಾರ ಎಂದು ಖಾರವಾಗಿ ಪ್ರಶ್ನಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





