Welcome to bigtvnews   Click to listen highlighted text! Welcome to bigtvnews
Breaking News

ಮನೋಹರ್ ಪರಿಕರ್ ನಿಧನ ಸುದ್ದಿಗೆ ಯಾರು, ಏನು ಹೇಳಿದರು?

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ತಮ್ಮ 63ನೇ ವರ್ಷದಲ್ಲಿ (13 ಮಾರ್ಚ್ 1955- 17 ಮಾರ್ಚ್ 2019) ಭಾನುವಾರ ನಿಧನರಾಗಿದ್ದಾರೆ. ಕಳೆದ ವರ್ಷ ಮೇದೋಜ್ಜೀರಕ ಗ್ರಂಥಿ ಸಮಸ್ಯೆಗಾಗಿ ಚಿಕಿತ್ಸೆ ಪಡೆದಿದ್ದ ಅವರು, ಕೆಲವು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದರು. ಭಾನುವಾರ ರಾತ್ರಿ ಮುಖ್ಯಮಂತ್ರಿ ಕಚೇರಿಯಿಂದ ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದೆ ಎಂಬ ಟ್ವೀಟ್ ಬಂದಿತ್ತು.ಆ ಟ್ವೀಟ್ ಬಂದ ಒಂದು-ಒಂದೂವರೆ ಗಂಟೆಯೊಳಗೆ ಅವರ ನಿಧನ ವಾರ್ತೆ ಹೊರಬಿದ್ದಿದೆ. ಪರಿಕರ್ ನಿಧನಕ್ಕೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಸಂತಾಪ ವ್ಯಕ್ತಪಡಿಸಿದ್ದಾರೆ. ಭಾರತ ಹಾಗೂ ಗೋವಾದ ಜನರಿಗಾಗಿ ಮನೋಹರ್ ಪರಿಕರ್ ಅವರು ಸಲ್ಲಿಸಿದ ಸೇವೆ ಮರೆಯಲು ಸಾಧ್ಯವೇ ಇಲ್ಲ ಎಂದು ಸ್ಮರಿಸಿದ್ದಾರೆ.ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ನಿಧನಇನ್ನು ಸೋಮವಾರದಂದು ಬೆಳಗ್ಗೆ ಹನ್ನೊಂದು ಗಂಟೆಗೆ ಕೇಂದ್ರ ಸಂಪುಟದಿಂದ ಗೋವಾದ ದಿವಂಗತ ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರ ಸಂತಾಪ ಸಭೆ ಕರೆಯಲಾಗಿದೆ. ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿ, ಮನೋಹರ್ ಪರಿಕರ್ ಅವರ ಸಾವಿನ ವಾರ್ತೆಯಿಂದ ಬಹಳ ದುಃಖವಾಗಿದೆ. ಕ್ಯಾನ್ಸರ್ ಜತೆಗಿನ ಹೋರಾಟದ ಹೊರತಾಗಿಯೂ ಅವರೊಬ್ಬ ನಿಜವಾದ ಹೋರಾಟಗಾರ. ಜನರ ಸಲುವಾಗಿ ದಣಿವರಿಯದೆ ದುಡಿದವರು ಎಂದಿದ್ದಾರೆ.ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿಮನೋಹರ್ ಪರಿಕರ್ ಜೀ ಸಾವಿನಿಂದ ಬಹಳ ದುಃಖವಾಗಿದೆ. ಈ ನಷ್ಟವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಆ ದೇವರು ನೀಡಲಿ ಎಂದಿದ್ದಾರೆ.ಪಕ್ಷಾತೀತವಾಗಿ ಅಭಿಮಾನ, ಗೌರವ ಇತ್ತುಕಳೆದ ಕೆಲ ವರ್ಷಗಳಿಂದ ಅನಾರೋಗ್ಯದ ವಿರುದ್ಧ ಹೋರಾಡುತ್ತಾ ಬಂದಿದ್ದ ಧೈರ್ಯಶಾಲಿ ಮನೋಹರ್ ಪರಿಕರ್ ಜೀ ಅವರ ಸಾವಿನ ಸುದ್ದಿ ಕೇಳಿ ಬಹಳ ದುಃಖ ಆಗಿದೆ. ಪಕ್ಷಾತೀತವಾಗಿ ಅವರ ಬಗ್ಗೆ ಗೌರವ, ಅಭಿಮಾನ ಇತ್ತು. ಗೋವಾದ ಮೆಚ್ಚಿನ ಮಗನಲ್ಲಿ ಅವರೂ ಒಬ್ಬರು. ಈ ದುಃಖದ ಸಮಯದಲ್ಲಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಯಸುತ್ತೇನೆ.ತಾಳ್ಮೆಯಿಂದ ನಡೆದುಕೊಂಡರುಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಜೀ ಸಾವಿನಿಂದ ದುಃಖವಾಗಿದೆ. ತಮ್ಮ ಕಾಯಿಲೆ ವಿರುದ್ಧ ತುಂಬ ತಾಳ್ಮೆಯಿಂದ ನಡೆದುಕೊಂಡರು. ಮನೋಹರ್ ಪರಿಕರ್ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ.ಸಜ್ಜನ-ಪ್ರಾಮಾಣಿಕ ವ್ಯಕ್ತಿ, ಉತ್ತಮ ಸ್ನೇಹಿತಮನೋಹರ್ ಪರಿಕರ್ ಸಾವಿನಿಂದ ವಿಪರೀತ ದುಃಖವಾಗಿದೆ. ಅವರೊಬ್ಬ ಮಹಾನ್ ನಾಯಕ. ಸಜ್ಜನ- ಪ್ರಾಮಾಣಿಕ ವ್ಯಕ್ತಿ ಮತ್ತು ತುಂಬ ಒಳ್ಳೆ ಸ್ನೇಹಿತ. ದೇಶವು ಅವರನ್ನು ಸ್ಮರಿಸುತ್ತದೆ ಎಂದಿದ್ದಾರೆ.

Spread the love

About Shaikh BIG TV NEWS, Hubballi

Check Also

ತಮ್ಮ 4ನೇ ಟೆಸ್ಟ್​ ಪಂದ್ಯದಲ್ಲಿ 5ನೇ ಬಾರಿ 5 ವಿಕೆಟ್ ಪಡೆದು ದಾಖಲೆ ಬರೆದ ಅಕ್ಷರ್ ಪಟೇಲ್!!

ಕಾನ್ಪುರ : ಭಾರತ ತಂಡದ ಎಡಗೈ ಸ್ಪಿನ್ನರ್​ ಅಕ್ಷರ್​ ಪಟೇಲ್ ಮೊದಲ ಟೆಸ್ಟ್​ನ ನ್ಯೂಜಿಲ್ಯಾಂಡ್​ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ …

Leave a Reply

Your email address will not be published. Required fields are marked *

You cannot copy content of this page
Click to listen highlighted text!