ಬೆಂಗಳೂರು, ಮಾರ್ಚ್ 18: ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದು ಸುಮಲತಾ ಅಂಬರೀಷ್ ಘೋಷಿಸಿದ್ದಾರೆ.ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಮ್ಮ ರಾಜಕೀಯ ಪ್ರವೇಶದ ನಿರ್ಧಾರವನ್ನು ಪ್ರಕಟಿಸಿದರು. ಈ ಸಂದರ್ಭದಲ್ಲಿ ಸಿನಿಮಾ ನಟರಾದ ದರ್ಶನ, ಯಶ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಉಪಸ್ಥಿತರಿದ್ದರು.ವಿಶ್ಲೇಷಣೆ : ಮಂಡ್ಯದಲ್ಲಿ ಮೈತ್ರಿಕೂಟದ ಆಟ ನಡೆಯೋದು ಬಲು ಕಷ್ಟ!ಇದೇ 20ರಂದು 10 ಗಂಟೆಗೆ ಮಂಡ್ಯಕ್ಕೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ ಎಂದು ಸುಮಲತಾ ತಿಳಿಸಿದರು.ನಾನು ಬೇರೆ ಯಾವುದೇ ಪಕ್ಷದಿಂದ ಟಿಕೆಟ್ ಕೇಳಿರಲಿಲ್ಲ. ನನ್ನ ಪತಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದಿದ್ದರಿಂದ ಅದರಿಂದಲೇ ಸ್ಪರ್ಧಿಸಬೇಕು ಎಂದು ಬಯಸಿದ್ದೆ. ಆದರೆ, ಅಲ್ಲಿ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕಿದ್ದರಿಂದ ಟಿಕೆಟ್ ಸಿಗುವುದಿಲ್ಲ ಎಂದು ಖಾತರಿಯಾಯಿತು. ಹೀಗಾಗಿ ಸ್ವತಂತ್ರಳಾಗಿ ಸ್ಪರ್ಧಿಸಲು ಬಯಸಿದ್ದೇನೆ ಎಂದರು.ಮಂಡ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದ ಸುಮಲತಾ-ಎಸ್‌ಎಂ ಕೃಷ್ಣ ಭೇಟಿಮಂಡ್ಯದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರಿಗೆ ಅಸ್ಮಿತೆಯ ಸಮಸ್ಯೆ ಎದುರಾಗಿದೆ. ಮಂಡ್ಯದಲ್ಲಿ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯುಂಟಾಗಿದೆ. ಆ ಬೆಂಬಲಿಗರನ್ನು ಬಿಟ್ಟುಕೊಡಲು ಬಯಸುವುದಿಲ್ಲ ಎಂದರು.ಕಾಂಗ್ರೆಸ್ ಪಕ್ಷ ನನಗೆ ಮೋಸ ಮಾಡಿಲ್ಲ: ಸುಮಲತಾ ಅಭಿಮತಅಂಬರೀಷ್ ಯಾವತ್ತೂ ಸ್ವಾರ್ಥ ರಾಜಕಾರಣ, ಕುಟುಂಬ ರಾಜಕಾರಣ ಮಾಡಲಿಲ್ಲ. ಅವರು ರಾಜಕಾರಣದ ಏಳುಬೀಳು ನೋಡಿ ಬಂದವರು. ಅದರಲ್ಲಿ ಬರುವ ಕಷ್ಟ ಅವರಿಗೆ ಚೆನ್ನಾಗಿ ಗೊತ್ತಿತ್ತು. ನಮ್ಮ ಕುಟುಂಬದವರನ್ನು ನಾನು ಪ್ರಮೋಟ್ ಮಾಡಲು ಇಷ್ಟವಿಲ್ಲ ಎಂದಿದ್ದರು. ಬೇರೆಯವರ ಮಕ್ಕಳೂ ಬರಲಿ ಅವರಿಗೆ ಬೆಂಬಲ ನೀಡುತ್ತೇನೆ. ನನ್ನ ಕುಟುಂಬದವರು ಸಾಮರ್ಥ್ಯ ಇದ್ದರೆ ಅವರೇ ಬರಲಿ ಎಂದಿದ್ದರು. ಇದರ ಬಗ್ಗೆ ಅವರ ಸ್ವಭಾವ ಗೊತ್ತಿರುವವರಿಗೆ ಚೆನ್ನಾಗಿ ತಿಳಿದಿರುತ್ತದೆ. ಈ ಹೇಳಿಕೆಯನ್ನು ಇಟ್ಟುಕೊಂಡು ಚುನಾವಣೆ ಸಂದರ್ಭದಲ್ಲಿ ಬೇರೆ ಅರ್ಥ ಕಲ್ಪಿಸುವುದಾದರೆ ಅವರಿಗೆ ಬಿಟ್ಟಿದ್ದು.ನಾನು ರಾಜಕಾರಣಕ್ಕೆ ಬಂದಿರುವುದು ಮಂಡ್ಯದ ಜನರ ಆಶಯದಿಂದ ಮಾತ್ರ. ಈ ಹಿಂದೆ ಬೆಂಗಳೂರು ದಕ್ಷಿಣ, ಉತ್ತರ, ಎಂಎಲ್‌ಸಿ ಆಫರ್‌ಗಳಿದ್ದವು. ಅವುಗಳನ್ನು ತಿರಸ್ಕರಿಸಿದ್ದೆ. ಸೋಲು ಗೆಲುವು ನಮ್ಮ ಕೈಯಲ್ಲಿಲ್ಲ. ಅದು ದೇವರಿಚ್ಛೆ. ಜನರ ಆಶೀರ್ವಾದ ಮುಖ್ಯ. ನಾನು ಸ್ಪರ್ಧಿಸಿರುವುದು ನಿಂತಿರುವುದು ಜನರ ಒತ್ತಾಸೆ ಮೇರೆಗೆ, ಅವರಿಗಾಗಿ ಸ್ಪಂದಿಸಬೇಕು ಎಂದು ಹೇಳಿದರು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





