ನೊಯಿಡಾ: ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು, ಆಕಾಂಕ್ಷಿಗಳು ಹಗಲು ರಾತ್ರಿಯೆನ್ನದೇ ಓದುತ್ತಾರೆ. ಇಷ್ಟೆಲ್ಲ ಓದಿದ್ರೂ ಯುಪಿಎಸ್ಸಿ ಪರೀಕ್ಷೆ ಪಾಸ್ ಆಗೋದು ಸುಲಭದ ಮಾತಲ್ಲ. ಆದರೆ, ಇಲ್ಲೊಬ್ಬ ಮಹಿಳೆ ತಾನು ಅಮೆರಿಕಾದಲ್ಲಿ ಐಎಫ್ಎಸ್ ಅಧಿಕಾರಿ ಅಂತಾ ಹೇಳಿಕೊಂಡು ಓಡಾಡ್ತಿದ್ದಳು, ಆಕೆಯನ್ನ ಗ್ರೇಟರ್ ನೊಯಿಡಾ ಪೊಲೀಸರು ಬಂಧಿಸಿದ್ದಾರೆ.ಝೊಯಾ ಖಾನ್(34) ಮತ್ತು ಈಕೆಯ ಪತಿ ಹರ್ಷಲ್ ಪ್ರತಾಪ್ ಸಿಂಗ್ (36) ಪೊಲೀಸರ ಬಲೆಗೆ ಬಿದ್ದ ಆರೋಪಿಗಳು. ಹಲವು ತಿಂಗಳುಗಳಿಂದ ನಕಲಿ ದಾಖಲೆಗಳನ್ನ ಸೃಷ್ಠಿಸಿ ಸೀನಿಯರ್ ಆಫೀಸರ್ ಎಂದು ಹೇಳಿಕೊಂಡು ಯುಪಿಯ ಘಾಜಿಯಾಬಾದ್, ಮೀರಟ್, ಅಲಿಗಢ, ಮೊರದಾಬಾದ್ ಸೇರಿ ಹರಿಯಾಣದ ಗುರುಗ್ರಾಮ ನಗರಗಳಲ್ಲಿ ಓಡಾಡುತ್ತಿದ್ದರು.
ಈಗಾಗಲೇ ಆರೋಪಿಗಳಿಂದ 2 ಕಾರು ಜಪ್ತಿ ಮಾಡಲಾಗಿದೆ. ಅಲ್ಲದೇ ಎರಡೂ ಕಾರಿನ ಮೇಲೂ ಯುನೈಟೆಡ್ ನೇಷನ್ ಎಂಬ ಲೋಗೊ ಹಾಕಿಕೊಂಡಿದ್ದರು ಎಂದು ತಿಳಿದು ಬಂದಿದೆ. ಅಲ್ಲದೇ 2 ಲ್ಯಾಪ್ಟಾಪ್, 2 ವಾಕಿ ಟಾಕಿ, ನಕಲಿ ಪಿಸ್ತೂಲ್ ಕೂಡ ಸೀಜ್ ಮಾಡಲಾಗಿದೆ ಅಂತ ನೊಯಿಡಾದ ಬಿಸ್ರಾಖ್ ಠಾಣೆಯ ಅಧಿಕಾರಿ ವೈಭವ್ ಕೃಷ್ಣ ಮಾಹಿತಿ ನೀಡಿದ್ದಾರೆ.
ಅಲ್ಲದೇ ಅಮೆರಿಕಾದ ವಾಷಿಂಗ್ಟನ್ನಲ್ಲಿ ನ್ಯೂಕ್ಲಿಯರ್ ಪಾಲಿಸಿ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿರೋ ಹಾಗೆ, ಯುಎನ್ ಸೆಕ್ಯೂರಿಟಿ ಕೌನ್ಸಿಲ್ನ ಫೇಕ್ ಐಡಿ ಮಾಡಿಸಿಕೊಂಡಿದ್ದರು. ಅಲ್ಲದೇ ಮಹಿಳೆ ಯುಎನ್ ಸೆಕ್ಯೂರಿಟಿ ಕೌನ್ಸಿಲ್ ಹೆಸರಿನಲ್ಲಿ ಇ-ಮೇಲ್ ಕೂಡ ಕ್ರಿಯೇಟ್ ಮಾಡಿಕೊಂಡಿದ್ದರು. ಇದರಿಂದ ಸಂಬಂಧಪಟ್ಟ ಆಯಾ ಜಿಲ್ಲಾ ಪೊಲೀಸರಿಗೆ ಇ-ಮೇಲ್ ಮಾಡ್ತಿದ್ದರು ಎಂದಿದ್ದಾರೆ.
ವಂಚನೆ ಮಾಡಿರುವ ಮಹಿಳೆ ರಾಜ್ಯಶಾಸ್ತ್ರ ವಿಷಯದಲ್ಲಿ ಎಂಎ ಪದವಿ ಪಡೆದಿದ್ದು, ತನ್ನ ಗಂಡ ಎಸ್ಬಿಐ ಬ್ಯಾಂಕ್ ಪಿಒ ಉದ್ಯೋಗಸ್ಥನಾಗಿದ್ದ. ಬ್ಯಾಂಕ್ ಪಿಒ ಕೆಲಸ ಬಿಟ್ಟು ಸಿವಿಲ್ ಸರ್ವಿಸ್ ತಯಾರಿ ನಡೆಸುತ್ತಿದ್ದ ಎನ್ನಲಾಗಿದೆ. ಸದ್ಯ ಇಬ್ಬರನ್ನೂ ಸರ್ಕಾರಿ ವಂಚನೆ ಆರೋಪದಡಿ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





