Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಮತದಾನವನ್ನು ಫೇಸ್‍ಬುಕ್‍ನಲ್ಲಿ ಲೈವ್ ಮಾಡಿದ ಇಬ್ಬರ ಬಂಧನ

ನವದೆಹಲಿ: ಆತ್ಮಹತ್ಯೆ, ಶೂಟಿಂಗ್ ಸೇರಿದಂತೆ ಇತರ ಅಪರಾಧಗಳನ್ನು ಫೇಸ್ಬುಕ್ ಲೈವ್ ಮಾದಿರುವ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಆದರೀಗ ಮತ ಚಲಾಯಿಸುವುದನ್ನು ಫೇಸ್ಬುಕ್ ಲೈವ್ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಭಾನುವಾರ ನಡೆದ ಲೋಕಸಭೆ ಚುನಾವಣೆಯ ಏಳನೇ ಹಂತದ ಮತದಾನದಲ್ಲಿ ಪಂಜಾಬಿನ ಮೊಹಾಲಿಯಲ್ಲಿ ಈ ಘಟನೆ ನಡೆದಿದ್ದು, ತಾವು ಮತ ಚಲಾಯಿಸುವುದನ್ನು ಫೇಸ್ಬುಕ್ ಲೈವ್ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಕಾಳಿಯಾ, ಬಿಜೆಪಿ ನಾಯಕ ಭಾನು ಪ್ರತಾಪ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಭಾನು ಪ್ರಕಾಶ್ ಮೊಹಾಲಿಯ ಕುರಾಲಿ ಮಿನಿಸಿಪಾಲ್ ಕೌನ್ಸಿಲ್ ನ ವಾರ್ಡ್ ನಂ.3ರ ಕೌನ್ಸಿಲರ್ ಎನ್ನಲಾಗಿದೆ.ಕಾಳಿಯಾ ಅವರು ಆನಂದಪುರ್ ಸಾಹಿಬ್ ಕ್ಷೇತ್ರದ ಖಾರಾರ್ ವಿಭಾಗದಲ್ಲಿ ಬೂತ್ ಸಂಖ್ಯೆ 150 ರಲ್ಲಿ ಮತ ಚಲಾಯಿಸುತ್ತಿರುವ ವೀಡಿಯೊವನ್ನು ಫೇಸ್ಬುಕ್ ಲೈವ್ನಲ್ಲಿ ಅಪ್ಲೋಡ್ ಮಾಡಿದ್ದರು. ವಿಷಯ ತಿಳಿದ ಪೊಲೀಸರು ಕೂಡಲೇ ಅವರಿಬ್ಬರಿಗೂ ವೀಡಿಯೋ ಡಿಲೀಟ್ ಮಾಡುವಂತೆ ಸೂಚಿಸಿದ್ದಾರೆ. ಬಳಿಕ ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.ಈ ಘಟನೆಯ ವರದಿಯಾದ ಬಳಿಕರ, ಚುನಾವಣಾ ಆಯೋಗದ ಪ್ರಿಸೈಡಿಂಗ್ ಆಫೀಸರ್ ಜೋಗಿಂದರ್ ಸಿಂಗ್ ಅವರ ಕರ್ತವ್ಯದಿಂದ ತೆಗೆದುಹಾಕಲಾಗಿದೆ

Share News

About Shaikh BIG TV NEWS, Hubballi

Check Also

Featured Video Play Icon

ಹುಬ್ಬಳ್ಳಿ : ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ: ತಹಶೀಲ್ದಾರ ಕಲಗೌಡ ಪಾಟೀಲ..!

ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಹಂತಕ ರಿತೇಶಕುಮಾರ್ ಮೃತ ದೇಹವನ್ನು ಹಿಂದೂ ವಿಧಿವಿಧಾನಗಳ …

Leave a Reply

Your email address will not be published. Required fields are marked *