ಕೋಲ್ಕತ್ತ: ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯ ಆಪ್ತ, ಮಾಜಿ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ದೇಶ ಬಿಟ್ಟು ತೆರಳದಂತೆ ನಿನ್ನೆ ಸಿಬಿಐ ಏರ್ಪೋರ್ಟ್ ಅಧಿಕಾರಿಗಳಿಗೆ ನೋಟಿಸ್ ನೀಡಿತ್ತು. ಈಗ ಇದರ ಬೆನ್ನಲ್ಲೆ ಇಂದು ರಾಜೀವ್ ಕುಮಾರ್ರನ್ನ ಸಿಬಿಐ ತಂಡ ಬಂಧಿಸಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಿದೆ ಎನ್ನಲಾಗಿದೆ. ಅಲ್ಲದೇ ಈ ಹಿಂದೆ ರಾಜೀವ್ರನ್ನ ತನಿಖೆ ಮಾಡಲು ಅವರ ಆಫೀಸ್ ಮತ್ತು ಮನೆಗೆ ತೆರಳಿದ್ದಾಗ ಸಿಎಂ ಮಮತಾ ಬ್ಯಾನರ್ಜಿ 70 ಗಂಟೆ ಕಾಲ ಪ್ರತಿಭಟನೆ ಮಾಡಿದ್ದರು. ಸದ್ಯ ಇದು ಸಹ ತನಿಖೆಯಲ್ಲಿ ಪ್ರಮುಖವಾದ ಅಂಶವಾಗಿದ್ದರಿಂದ ವಿಚಾರಣೆಯಲ್ಲಿ ಈ ಬಗ್ಗೆನೂ ಪ್ರಶ್ನೆಗಳನ್ನ ಕೇಳಲಾಗುತ್ತದೆ ಅಂತ ತಿಳಿದುಬಂದಿದೆ. ರಾಜೀವ್ 1989ರ ಐಪಿಎಸ್ ಬ್ಯಾಚ್ನ ಅಧಿಕಾರಿಯಾಗಿದ್ದು, ಪೋಂಜಿ ಸ್ಕ್ಯಾಮ್ನಲ್ಲಿಯೂ ಪ್ರಮುಖ ಆರೋಪಿ ಅಂತ ಹೆಸರು ಕೇಳಿ ಬಂದಿದೆ. ಶಾರದಾ ಚಿಟ್ ಫಂಡ್ ಕೇಸ್ಗೆ ಸಂಬಂಧಿಸಿದಂತೆ ಪ್ರಮುಖ ದಾಖಲೆ ನಾಶಪಡಿಸಿದ ಆರೋಪ ರಾಜೀವ್ ಅವರ ಮೇಲಿದೆ. ಈ ಕುರಿತು ತನಿಖೆಗೆಂದು ಇದೇ ಫೆಬ್ರವರಿಯಲ್ಲಿ ರಾಜೀವ್ ಮನೆಗೆ ಸಿಬಿಐ ತಂಡ ತೆರಳಿತ್ತು. ಈ ವೇಳೆ ಸಿಎಂ ದೀದಿ, ಧರಣಿ ಮಾಡಿ ತನಿಖೆಗೆ ಅಡ್ಡಿ ಪಡಿಸಿ, ಇದು ‘ಸಾಂವಿಧಾನಿಕ ನಿಯಮಗಳ ಮೇಲೆ ದಾಳಿ’ ಎಂದು ಕರೆದಿದ್ದರು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





