ಪ್ರಚಂಡ ಬಹುಮತ ಪಡೆದು ಮತ್ತೊಮ್ಮೆ ಕೇಂದ್ರದಲ್ಲಿ ಸರ್ಕಾರ ರಚಿಸೋಕೆ ಹೊರಟಿರುವ ಪ್ರಧಾನಿ ಮೋದಿ ಇದೇ ತಿಂಗಳ 30ರ ಸಂಜೆ 7 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೋದಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಮೋದಿಯ ಪಾರ್ಟ್-2 ಸರ್ಕಾರದಲ್ಲಿ ಯಾರಿಗೆ ಅವಕಾಶ ಸಿಗಲಿದೆ..? ಯಾರು ಮೋದಿ ಸರ್ಕಾರದಲ್ಲಿ ಕೆಲಸ ಮಾಡೋ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ ಅನ್ನೋ ಕುತೂಹಲ ಶುರುವಾಗಿದೆ. ಇದಲ್ಲದೇ ಮುಂದಿನ ದಿನಗಳಲ್ಲಿ ಪಕ್ಷ ಕಟ್ಟೋ ಹಿನ್ನೆಲೆ ಕೆಲವೊಂದು ಪ್ಲಾನಿಂಗ್ ಕೂಡ ಈ ಬಾರಿ ಸಚಿವ ಸಂಪುಟ ರಚನೆಯಲ್ಲಿ ಮೋದಿ ಮಾಡಲಿದ್ದಾರೆ ಎನ್ನಲಾಗಿದೆ.ಪಶ್ಚಿಮ ಬಂಗಾಳ, ತೆಲಂಗಾಣಕ್ಕೆ ಸಚಿವರ ಗಿಫ್ಟ್…?ದೀದಿಕೋಟೆ ಪಶ್ಚಿಮ ಬಂಗಾಳದಲ್ಲಿ ಊಹಿಸಲಾಗದಂತಹ ಫಲಿತಾಂಶ ಕಂಡಿರುವ ಮೋದಿ ಆ್ಯಂಡ್ ಟೀಂ ಮುಂದಿನ ವಿಧಾನಸಭೆಯಲ್ಲಿ ದೀದಿ ಕೋಟೆಯನ್ನ ಛಿದ್ರ ಮಾಡೋ ಪ್ಲಾನ್ ಇದೆ ಎನ್ನಲಾಗಿದೆ. ಹೀಗಾಗಿ 18 ಕ್ಷೇತ್ರ ಗೆದ್ದಿರುವ ಬಂಗಾಳಕ್ಕೆ ಹೆಚ್ಚಿನ ಸಚಿವರನ್ನ ಕಳುಹಿಸಿ ಜನರಿಗೆ ಹತ್ತಿರವಾಗೋ ಐಡಿಯಾ ಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೇ 4 ಸ್ಥಾನಗಳು ಪಡೆದಿರುವ ತೆಲಂಗಾಂಣದಲ್ಲಿ ಕೆಸಿಆರ್ ವಿರುದ್ಧ ಇರೋ ಆಡಳಿತ ವಿರೋಧಿ ಅಲೆಯನ್ನ ಮನಗಂಡಿರುವ ಬಿಜೆಪಿ ತೆಲಂಗಾಣಕ್ಕೂ ಪ್ರತಿನಿಧಿಗಳನ್ನ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.ಹೊಸ ಮೈತ್ರಿ ಜೆಡಿಯು, ಎಐಎಡಿಎಂಕೆಗೂ ದಕ್ಕುತ್ತಾ ಸಚಿವ ಸ್ಥಾನ..?ಇನ್ನು ಈ ಬಾರಿಯ ಚುನಾವಣೆಯಲ್ಲಿ ಎನ್ಡಿಎ ಮೈತ್ರಿ ಕೂಟಕ್ಕೆ ಸೇರ್ಪಡೆಯಾಗಿರುವ ಜೆಡಿಯು ಹಾಗೂ ಎಐಡಿಎಂಕೆಗೂ ಸಚಿವ ಸ್ಥಾನ ನೀಡಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಬಿಹಾರದಲ್ಲಿ ಜೆಡಿಯು ಹಾಗೂ ಬಿಜೆಪಿ ಭಾರೀ ಮೋಡಿ ಮಾಡಿದ್ದು, ಮುಂದಿನ ದಿನಗಳಲ್ಲಿ ಇಬ್ಬರ ಮೈತ್ರಿ ಇನ್ನಷ್ಟು ಉತ್ತಮವಾಗಿಸೋ ನಿಟ್ಟಿನಲ್ಲಿ ಜೆಡಿಯುಗೂ ಉತ್ತಮ ಸ್ಥಾನ ಸಿಗೋ ಸಾಧ್ಯತೆಯಿದೆ. ಅಲ್ಲದೇ ತಮಿಳುನಾಡಿನಲ್ಲಿ ತಮ್ಮ ಪಕ್ಷ ಪ್ರಾಬಲ್ಯ ಹೊಂದಬೇಕು ಅನ್ನುವ ನಿಟ್ಟಿನಲ್ಲಿ ಕೇವಲ ಒಂದು ಸ್ಥಾನ ಹೊಂದಿರುವ ಮಿತ್ರ ಪಕ್ಷ ಎಐಎಡಿಎಂಕೆಗೂ ಸಚಿವ ಸ್ಥಾನ ಒಲಿಯಲಿದೆಯಂತೆ.ಹಣಕಾಸು, ರಕ್ಷಣಾ, ವಿದೇಶಾಂಗ, ಗೃಹ ಇಲಾಖೆಯಲ್ಲಿ ಬದಲಾವಣೆ..?ಇನ್ನು ಮೊನ್ನೆ ನಡೆದ ಸೆಂಟ್ರಲ್ ಹಾಲ್ನ ಭಾಷಣದಲ್ಲಿ ಉತ್ತಮ ಹಾಗೂ ಸಕ್ರಿಯ ಸರ್ಕಾರ ನೀಡುತ್ತೇವೆ ಅಂದಿದ್ದ ಮೋದಿ, ತನ್ನ ಸಚಿವ ಸಂಪುಟದಲ್ಲೂ ಸಕ್ರಿಯವಾಗಿರುವ ಮಂತ್ರಿಗಳನ್ನೇ ಕೂರಿಸಲು ತಿರ್ಮಾನಿಸಿದ್ದಾರೆ. ಹೀಗಾಗಿ ಪ್ರಮುಖ ಖಾತೆಗಳಾಗಿರುವ ಹಣಕಾಸು, ರಕ್ಷಣಾ, ವಿದೇಶಾಂಗ, ಗೃಹ ಇಲಾಖೆಯಲ್ಲಿ ಕೆಲವೊಂದು ಬದಲಾವಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಈಗಾಗಲೇ ಈ ಹಿಂದಿನ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ, ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಅನಾರೋಗ್ಯದ ಹಿನ್ನೆಲೆ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಹೀಗಾಗಿ ಇವರ ಸ್ಥಾನಗಳನ್ನ ಬೇರೆ ಪ್ರಮುಖರಿಗೆ ನೀಡುವ ಸಾಧ್ಯತೆ ಇದೆ.ಮೋದಿ ಕ್ಯಾಬಿನೆಟ್ಗೆ ಸೇರ್ತಾರ ಅಮಿತ್ ಶಾ ..?ಪ್ರಧಾನಿ ಮೋದಿಯ ಅತ್ಯಾಪ್ತರಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇದೇ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದು ಮೋದಿ ಸಂಪುಟದಲ್ಲಿ ಸಚಿವನಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಮಿತ್ ಶಾಗೆ ಅತ್ಯಂತ ಪ್ರಭಾವಿ ಖಾತೆ ಸಿಗಲಿದೆ ಎಂದು ಹೇಳಲಾಗಿದೆ.41 ಹಾಲಿ ಮಂತ್ರಿಗಳಿಗೆ ಚಾನ್ಸ್ Or ಕೋಕ್..?ಇನ್ನು ಈ ಬಾರಿಯ ಲೋಕಸಭೆ ಚುನಾವಣೆಗೆ ಒಟ್ಟು 47 ಹಾಲಿ ಸಚಿವರು ಸ್ಪರ್ಧಿಸಿದ್ದು ಈ ಪೈಕಿ 41 ಮಂತ್ರಿಗಳು ಗೆದ್ದಿದ್ದಾರೆ. ಹೀಗಾಗಿ ಹಾಲಿ ಸಚಿವರಿಗೂ ಸ್ಥಾನ ಕೋಡೋದು ಮೋದಿಯ ಪರಮ ಆದ್ಯತೆಯಾಗಿರುತ್ತದೆ. ಹೀಗಾಗಿ ಇವರೆಲ್ಲರಿಗೂ ಸ್ಥಾನ ಸಿಗುತ್ತಾ ಅಥವಾ ಯಾರಿಗಾದ್ರೂ ಕೋಕ್ ನೀಡ್ತಾರ ಅನ್ನೋ ಕುತೂಹಲ ಕೂಡ ಇದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





