Welcome to bigtvnews   Click to listen highlighted text! Welcome to bigtvnews
Breaking News

ವಯಸ್ಸಿಗೆ ಮೀರಿದ ಸ್ವಾಭಿಮಾನ: ಸ್ವತಃ ದುಡಿದು ತನ್ನಬೇಕೆಂಬ ವೃದ್ಧೆಯ ಹಂಬಲ

ಹುಬ್ಬಳ್ಳಿ: ಸ್ವಾಭಿಮಾನ ಎಂಬುದು ಎಷ್ಟು ಶ್ರೀಮಂತವಾಗಿದೆ ಎಂದರೆ ಬೆನ್ನು ಭಾಗುವ ಮುನ್ನ ಕೋಲನ್ನು ಹಿಡಿಯುವ ಮುನ್ನ ಯಾರಲ್ಲಿಯೂ ಕೂಡ ಕೈ ಚಾಚಿ ಬೇಡಬಾರದು ಎಂಬುದು ಒಂದೆಡೆಯಾದರೆ ಬೆನ್ನು ಬಾಗಿ ಕೋಲು ಹಿಡಿದು ಮುಪ್ಪಿನಲ್ಲಿಯೂ ಕೂಡ ಯಾರಿಗೂ ಭಾರವಾಗದ ರೀತಿಯಲ್ಲಿ ಸ್ವಾಭಿಮಾನಿವಾಗಿ ಬದುಕು ಸಾಗಿಸಬೇಕೆಂಬುವಂತದ್ದು, ವೃದ್ಧೆಯೊರ್ವಳು ಕಂಡುಕೊಂಡಿರುವ ಮಹತ್ವದ ಸಂಗತಿಯಾಗಿದೆ.
ಹೌದು ಯೌವ್ವನದಲ್ಲಿ ದುಡಿದು ಮನೆಯನ್ನು ಸಾಗಿಸುತ್ತಿದ್ದ ಮಹಾತಾಯಿ ಇಂದು ಮುಪ್ಪಿನಲ್ಲಿಯೂ ಕೂಡ ಸ್ವತಃ ತಾನೇ ದುಡಿದು ಜೀವನ ಸಾಗಿಸುತ್ತಿದ್ದಾಳೆ.ಯಾರ ಹಂಗಿನ ಅರಮನೆಯೂ ಬೇಡ ಅಂಜಿಕೆಯಿಂದ ಕುಡಿಯುವ ಗಂಜಿಯು ಬೇಡ ಸ್ವತಃ ದುಡಿದು ತಿನ್ನುವೇ ಎಂದು ಮುಪ್ಪಿನಲ್ಲಿಯೂ ಮಂದಹಾಸದಲ್ಲಿ ಜೀವನ ಸಾಗಿಸುತ್ತಿರುವ ವೃದ್ಧೆಯ ಜೀವನ ನಿಜಕ್ಕೂ ಮಹತ್ವ ಪೂರ್ಣ ವಿಷಯ.
ಹುಬ್ಬಳ್ಳಿಯ ರೈಲ್ವೇ ನಿಲ್ದಾಣದಲ್ಲಿ ಹುರಿದ ಕಡ್ಲಿ, ವಠಾಣಿಗಳಂತ ದಿನಸಿಗಳನ್ನು ಮಾರುವ ಮೂಲಕ ತನ್ನ ಜೀವನ ನಡೆಸುತ್ತಿರುವ ವೃದ್ಧೆಯ ಹೆಸರು ಜೈತುನಬಿ ಎಪ್ಪತ್ತು ವರ್ಷಗಳ ವಯೋವೃದ್ಧೆಯಾದರೂ ಕೂಡ ಯಾರ ಮುಂದೆ ಕೈ ಚಾಚಿ ಬೇಡಬಾರದು ಸ್ವತಃ ತಾನೇ ದುಡಿದು ಜೀವನ ನಡೆಸಬೇಕೆಂಬ ಮಹದಾಸೆಯಿಂದ ಕೇವಲ ಒಂದು ಎರಡು ರೂಪಾಯಿಗಳ ವ್ಯಾಪಾರದಿಂದ ಖುಷಿಯಾಗಿ ಜೀವನ ನಡೆಸುತ್ತಿದ್ದಾಳೆ. ವೃದ್ಧಾಪ್ಯದಲ್ಲಿ ಮಕ್ಕಳ, ಮೊಮ್ಮಕ್ಕಳ ಜೊತೆ ಹಾಯಾಗಿ ಇರುವಂತ ಕಾಲವೊಂದು ಪ್ರಸ್ತುತ ದಿನಮಾನಗಳಲ್ಲಿ ಕ್ಷೀಣಿಸುತ್ತಿದ್ದು, ಈಗ ವೃದ್ಧರಿಗೆ ವೃದ್ಧಾಶ್ರಮವೇ ಉಪಜೀವನದ ಮಾರ್ಗೋಪಾಯವಾಗಿದೆ ಆದರೇ ಈ ವೃದ್ಧೆಯ ಜೀವನ ನಿಜಕ್ಕೂ ಭಿನ್ನವಾಗಿದೆ.
ದೇಹದಲ್ಲಿ ಶಕ್ತಿ ಕುಂದುತಿದ್ದಂತೆ ಮತ್ತೊಬ್ಬರ ಆಶ್ರಯದಲ್ಲಿ ಬದುಕು ಸಾಗಿಸಬೇಕೆಂಬ ಹಲವಾರು‌ ನಿದರ್ಶನಗಳಿಗೆ ಈ ವೃದ್ಧೆ ತೆರೆ ಏಳೆದಿದ್ದಾಳೆ.ಸ್ವತಃ ತಾನೇ ಮಾರುಕಟ್ಟೆಗೆ ಹೋಗಿ ತನ್ನ ವ್ಯಾಪಾರಕ್ಕೆ ಅವಶ್ಯಕವಿರುವ ಸಾಮಾನುಗಳನ್ನು ಕೊಂಡು ತಂದು ರೈಲ್ವೇ ನಿಲ್ದಾಣದ ಆವರಣದಲ್ಲಿ ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾಳೆ‌ ನೈಋತ್ಯ ರೈಲ್ವೇ ವಲಯ ವೃದ್ಧೆಯ ಜೀವನಕ್ಕೆ ಒಂದು‌ ದಾರಿ ಮಾಡಿಕೊಟ್ಟಂತಾಗಿದೆ.

Spread the love

About Shaikh BIG TV NEWS, Hubballi

Check Also

ಆರೋಗ್ಯ ಸಲಹೆ: ನೀವು ಸಕ್ಕರೆ ಪ್ರಿಯರೇ?.. ಅತಿ ಬಳಕೆಗೂ ಮೊದಲು ಕೊಂಚ ಯೋಚಿಸೋದು ಒಳ್ಳೇದು..

ಬೆಂಗಳೂರು : ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸಕ್ಕರೆ ಅತಿ ಕೆಟ್ಟ ಅಭ್ಯಾಸ ಎನ್ನುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಸಕ್ಕರೆ …

Leave a Reply

Your email address will not be published. Required fields are marked *

You cannot copy content of this page
Click to listen highlighted text!